ಬೆಂಗಳೂರು : ತಮಿಳುನಾಡಿನಲ್ಲಿ ನಟ ವಿಜಯ್ ಅವರು ಮೊದಲ ಬಾರಿ ಇತಿಹಾಸ ನಿರ್ಮಾಣ ಮಾಡಿದ್ದು, ಮೊದಲ ಪ್ರಯತ್ನದಲ್ಲಿ ಅವರ ನೇತೃತ್ವದ ಟಿ ವಿ ಕೆ ಪಕ್ಷ 108 ಸ್ಥಾನಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ನಟ ವಿಜಯ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಇದು ನಿಜವಾಗಿಯೂ ನಿಮಗೆ ಸದಾ ಜನ ಆಶೀರ್ವಾದದ ಜಯ. ತೀವ್ರ ಟೀಕೆಗಳ ಸಮಯದಲ್ಲಿ ಮೌನವಾಗಿದ್ದು ನಿಮ್ಮ ಕೆಲಸವೇ ಮಾತನಾಡಲು ಬಿಡುವುದು ಅದೇ ದೊಡ್ಡ ಜಯ. ತಮಿಳುನಾಡಿನ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ನೀವು ಈಡೇರಿಸಿ. ಪತ್ರಕರ್ತರೊಂದಿಗೆ ನಡೆದ ಒಂದು ಸಂಭಾಷಣೆಯಲ್ಲಿ ನಾನು ಹಾಸ್ಯವಾಗಿ ಟಿವಿಕೆ ಟ್ರೈ ವಿಜಯ್ ಆಸ್ ಕಿಂಗ್ ಅಂತ ಹೇಳಿದ್ದೆ. ಇಂದು ನೀವು ನಿಜವಾಗಿಯೂ ರಾಜನಂತೆ ಎದ್ದು ನಿಂತಿದ್ದೀರಿ. ತಮಿಳುನಾಡು ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ನೀವು ಈಡೇರಿಸಿ ಮತ್ತು ಸದಾ ಅಭಿವೃದ್ಧಿ ಮುಂದುವರೆಯಲಿ ಎಂದು ಅಭಿನಂದನೆ ತಿಳಿಸಿದ್ದಾರೆ








