ಬೆಂಗಳೂರು: ಸೆ.29ರ ಇಂದು ವಿಶ್ವ ಹೃದಯ ದಿನ. ಹೃದಯದ ಪ್ರತಿ ಬಡಿತವೂ ಮುಖ್ಯ. ಇದೇ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸಿದಂತ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ ರಾಜ್ಯಾಧ್ಯಂತ ಭರ್ಜರಿ ರೆಸ್ಪಾನ್ ದೊರೆತಿದೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ಹೃದಯಾಘಾತಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯ ಸರ್ಕಾರದ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಹಲವರ ಹೃದಯ ಮಿಡಿತವನ್ನ ಜೀವಂತವಾಗಿರುಸುವಲ್ಲಿ ಯಶಸ್ವಿಯಾಗುತ್ತಿದೆ. ಯೋಜನೆ ಮುಖಾಂತರ ಇಲ್ಲಿಯ ವರೆಗು 9,21,020 ಜನರ ಇಸಿಜಿ ತೆಗೆಯಲಾಗಿದೆ. ಸುಮಾರು 13515 STEMI ಪ್ರಕರಣಗಳು ಕಂಡುಬಂದಿದ್ದು, Thrombolysis , Angioplasty, Stent & CABG ಸೇರಿದಂತೆ ಹೃದಯ ಸಮಸ್ಯೆ ಇರುವ 7815 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದಿದ್ದಾರೆ.
ವಿಶೇಷವಾಗಿ ಟೆನೆಕ್ಟೇಪ್ಲೇಸ್ ಚುಚ್ಚುಮದ್ದು ನೀಡುವ ಮೂಲಕ 1106 ಜನರಿಗೆ ಹಠಾತ್ ಹೃದಯಾಘಾತ ಆಗುವುದನ್ನ ತಪ್ಪಿಸಲಾಗಿದೆ. ಸಹಸ್ರಾರು ಜನರ ಜೀವ ಉಳಿಸುವಲ್ಲಿ ಹೃದಯ ಜ್ಯೋತಿ ಯೋಜನೆ ಯಶಸ್ವಿಯಾಗಿದ್ದು, ವಿಶ್ವ ಹೃದಯ ದಿನಾಚರಣೆಯ ಈ ಸಂದರ್ಭದಲ್ಲಿ, ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ ಎಂಬುದನ್ನು ತಿಳಿಸಲು ಬಯಸುತ್ತೇನೆ. ಯಾರಿಗೆ ಎದುನೋವು ಕಾಣಿಸಿಕೊಂಡರು ನಿರ್ಲಕ್ಷ್ಯೆ ಮಾಡದೇ ಹೃದಯ ಜ್ಯೋತಿ ಯೋಜನೆಯಡಿ ಉಚಿತ ತಪಾಸಣೆ ಮಾಡಿಸಿಕೊಂಡು, ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ರಾಜ್ಯಾಧ್ಯಂತ ನಿರ್ಮಿಸಿರುವ ಅನಧಿಕೃತ ಕಟ್ಟಡ ಮಾಲೀಕರಿಗೆ ವಿದ್ಯುತ್, ನೀರಿನ ಸಂಪರ್ಕ ಕುರಿತಂತೆ ಸಿಎಂ ಮಹತ್ವದ ಮಾಹಿತಿ
ಇಂದು ವಿಶ್ವ ಹೃದಯದ ದಿನ: ‘ಹೃದಯಾಘಾತ’ದಿಂದ ಪಾರಾಗುವ ಬಗೆ ಇಲ್ಲಿದೆ ಮಾಹಿತಿ | World Heart Day 2025
SHOCKING :` ಚಿಕನ್’ ಬೇಕು ಎಂದ ಹೆತ್ತ ಮಗನನ್ನೇ ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ.!