ಕೆಎನ್ಎನ್ ಡಿಜಿಟಲ್ ಡೆಸ್ಕ್: ಈಗಿನ ಬ್ಯುಸಿ ಲೈಫ್ ನ ಉದ್ಯೋಗ, ಬ್ಯುಸಿನೆಸ್ ಓಡಾಟದಲ್ಲಿ ಯಾವಾಗ ಏನ್ ಕಳೆದುಕೊಳ್ಳುತ್ತೇವೆ ಒಂದು ಗೊತ್ತಾಗೋದಿಲ್ಲ. ಕಳೆದು ಹೋದಂತ ಅಮೂಲ್ಯ ದಾಖಲೆಗಳು ( Doccuments ) ಅವುಗಳ ಅಗತ್ಯತೆ ಬಂದಾಗಲೇ ಗೊತ್ತಾಗೋದು. ನಿಮ್ಮ ಅಮೂಲ್ಯ ದಾಖಲೆಗಳು ಕಳೆದು ಹೋದಾಗ ಈಗ ನೀವು ಪೊಲೀಸ್ ಠಾಣೆಗೆ ( Police Station ) ತೆರಳಿ ದೂರು ದಾಖಲಿಸೋ ಅಗತ್ಯವೂ ಇಲ್ಲ. ಜಸ್ಟ್ ಮನೆಯಲ್ಲಿಯೇ ಕುಳಿದು ದೂರು ದಾಖಲಿಸಬಹುದಾಗಿದೆ. ಅದೇಗೆ ಎನ್ನುವ ಮಾಹಿತಿಗಾಗಿ ಮುಂದೆ ಓದಿ.
ಸಾರ್ವಜನಿಕರು ತಮ್ಮ ಮೊಬೈಲ್ ಪೋನ್ ( Mobile Phone ) ಅಥವಾ ಕೆಲ ದಾಖಲೆಗಳನ್ನು ಕಳೆದುಕೊಂಡಾಗ, ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬಹುದು. ಇಲ್ಲವೇ ಮನೆಯಲ್ಲಿಯೇ ಕರ್ನಾಟಕ ರಾಜ್ಯ ಪೊಲೀಸ್ ( Karnataka State Police ) ವೆಬ್ ಸೈಟ್ https://ksp.karnataka.gov.in/ ಭೇಟಿ ನೀಡಿ ದೂರನ್ನು ಸಲ್ಲಿಸಬಹುದಾಗಿದೆ.
ಚಿತ್ರದುರ್ಗ: ಹಿರಿಯೂರು ನಗರದ ಪೊಲೀಸ್ ಠಾಣೆ ಮುಂಭಾಗದಲ್ಲೇ ರಸ್ತೆ ಗುಂಡಿ, ಕಣ್ ಮುಚ್ಚಿ ಕುಳಿತ ನಗರಸಭೆ
ಕರ್ನಾಟಕ ಪೊಲೀಸ್ ವೆಬ್ ಸೈಟ್, ಇಲ್ಲವೇ ಆ್ಯಪ್ ಮೂಲಕ ದೂರು ನೀಡಿ
ನೀವು ಕಳೆದುಕೊಂಡಂತ ಅಮೂಲ್ಯ ವಸ್ತುಗಳ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ವೆಬ್ ಸೈಟ್ https://ksp.karnataka.gov.in/ ಗೆ ಭೇಟಿ ನೀಡಿದಾಗ, ಅಲ್ಲಿನ ಇ-ಲಾಸ್ಟ್ ( E-Lost ) ಎನ್ನುವಲ್ಲಿ ಕ್ಲಿಕ್ ಮಾಡಿದ್ರೇ, ನಿಮಗೆ ಮತ್ತೊಂದು ಪುಟ ತೆರೆದುಕೊಳ್ಳಲಿದೆ. ಅಲ್ಲಿ ನೀವು ನಿಮ್ಮ ಕಳೆದು ಹೋದಂತ ವಸ್ತುಗಳ ಬಗ್ಗೆ ದೂರು ದಾಖಲಿಸಬಹುದಾಗಿದೆ.
ಚಿತ್ರದುರ್ಗ: ಹಿರಿಯೂರು ನಗರದ ಪೊಲೀಸ್ ಠಾಣೆ ಮುಂಭಾಗದಲ್ಲೇ ರಸ್ತೆ ಗುಂಡಿ, ಕಣ್ ಮುಚ್ಚಿ ಕುಳಿತ ನಗರಸಭೆ
ಇನ್ನೂ ಇದಲ್ಲದೇ ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ( Google Play Store ) ಲಭ್ಯವಿರುವಂತ KSP App ಡೌನ್ ಲೋಡ್ ಮಾಡಿಕೊಂಡು, ಇ-ಲಾಸ್ಟ್ ಎಂಬ ಮೆನುವನ್ನು ಆಯ್ಕೆ ಮಾಡಿ, ಪೋನ್ ನಂಬರ್ ( Phone Number ) ನಮೂದು ಮಾಡುವ ಮೂಲಕವಾದರೂ, ನೀವು ಕಳೆದುಕೊಂಡ ವಸ್ತುಗಳ ಬಗ್ಗೆ ದೂರು ನೀಡಿ, ಸ್ವೀಕೃತಿಯನ್ನು ಪಡೆಯಬಹುದಾಗಿದೆ.
BIG NEWS: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಸಿಐಡಿಯಿಂದ ಭರ್ಜರಿ ಕಾರ್ಯಾಚರಣೆ, 25 ಮಂದಿ ಅರೆಸ್ಟ್
ಈ ಎಲ್ಲಾ ದಾಖಲೆಗಳು ಕಳೆದು ಹೋದ್ರೆ ದೂರು ನೀಡಿ
- ಕ್ರೆಡಿಟ್ ಕಾರ್ಡ್
- ಡೆಬಿಟ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಚೆಕ್ಯೂ, ಡಿಡಿ
- ಐಡಿ ಕಾರ್ಡ್
- ಟ್ಯಾಬ್, ಐಪ್ಯಾಡ್
- ಲ್ಯಾಪ್ ಟಾಪ್
- ಮೊಬೈಲ್
- ಪಾನ್ ಕಾರ್ಡ್
- ಪಾಸ್ ಬುಕ್
- ರೇಷನ್ ಕಾರ್ಡ್
- ವಿದ್ಯಾರ್ಹತೆಯ ಮಾರ್ಕ್ಸ್ ಕಾರ್ಡ್ ಗಳು
- ವೋಟರ್ ಐಡಿ ಕಾರ್ಡ್
ಈ ಮೇಲ್ಕಂಡ ದಾಖಲೆಗಳನ್ನು ನೀವು ಕಳೆದುಕೊಂಡಿದ್ದರೇ, ಸಮೀಪದ ಪೊಲೀಸ್ ಠಾಣೆಗೆ ಇಲ್ಲವೇ ಕರ್ನಾಟಕ ಪೊಲೀಸ್ ವೆಬ್ ಸೈಟ್ ಅಥವಾ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ KSP ಆಪ್ ಡೌನ್ ಲೋಡ್ ಮಾಡಿಕೊಂಡು ಇ-ಲಾಸ್ಟ್ ಮೂಲಕ ದೂರು ನೀಡಿ, ಸ್ವೀಕೃತಿಯನ್ನು ಪಡೆಯಬಹುದಾಗಿದೆ.
ಸಾರ್ವಜನಿಕರ ಗಮನಕ್ಕೆ ನಿಮ್ಮ ಮೊಬೈಲ್ ಪೋನ್ ಅಥವಾ ಕೆಲ ದಾಖಲಾತಿಗಳು ಕಳೆದು ಹೋದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ Website ನಲ್ಲಿರುವ E-Lost ಎಂಬ ಆಯ್ಕೆಯನ್ನು ಬಳಸಿಕೊಂಡು ತಕ್ಷಣವೇ ಸ್ವೀಕೃತಿಯನ್ನು ಪಡೆಯಬಹುದು.ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ@DgpKarnataka pic.twitter.com/RFWyg7YuVA
— Chitradurga District Police (@DistrictPolice1) October 19, 2022