ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜನಪ್ರಿಯ ಇನ್ಸ್ಟೆಂಟ್ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಬ್ಲೂಟಿಕ್ ಬಿಡುಗಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಫೀಚರ್ ಬಗ್ಗೆ ಸಂತಸ ವ್ಯಕ್ತಪಡಿಸಿದರೆ, ಇನ್ನು ಹಲವರು ಮೌನವಾಗಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಹಿತೈಷಿಗಳು ನೀವು ಒಬ್ಬೊರಿಗೊಬ್ಬರು ಸಂದೇಶವನ್ನು ವಿನಿಮಯ ಮಾಡಿಕೊಳ್ಳುವುದು ಸಹಜ. ನೀವು ಸಂದೇಶವನ್ನು ಓದಿದ್ದೀರಿ ಅಂತಾ ತಿಳಿಯೋಕೆ ವಾಟ್ಸ್ಆ್ಯಪ್ನಲ್ಲಿ ಬ್ಲೂಟಿಕ್ ಸೂಚಿಸುತ್ತದೆ. ಆದರೆ ನಿಮ್ಮ ಹಿತೈಷಿಗಳು ನಿಮಗೆ ಕಳುಹಿಸಿದ ಸಂದೇಶವನ್ನು ಓದಿದ್ದೀರಿ ಎಂದು ತಿಳಿಯಬಾರದು ಅಂತಾ ನೀವು ಬಯಸಿದ್ರೆ ಇಲ್ಲೊಂದು ಉಪಾಯವಿದೆ.
BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್ನ 9ನೇ ಸೀಸನ್ ಆರಂಭ!| Pro Kabaddi Leag
ಹೌದು, ಬ್ಲೂಟಿಕ್ ಅನ್ನು ಆಫ್ ಮಾಡದೆಯೇ ನೀವು ಬಂದಿರುವ ಸಂದೇಶವನ್ನು ಓದಿದ್ದೀರಿ ಎಂದು ಕಳುಹಿಸುವವರಿಗೆ ತಿಳಿಯದೇ ಮಾಡಬಹುದು. ಅವರು ಕಳಹಿಸಿರುವ ಎಲ್ಲ ಸಂದೇಶಗಳನ್ನು ಅವರಿಗೆ ತಿಳಿಯದೆ ನೀವು ಓದಬಹುದು. ಪಾಪ್ಆಪ್ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಸಂದೇಶಗಳನ್ನು ಓದಬಹುದಾಗಿದೆ. Android Phone and IOS ಬಳಕೆದಾರರು ಈ ಸಲಹೆಗಳನ್ನು ಬಳಸಬಹುದಾಗಿದೆ. ಸಿಂಪಲ್ ಆಗಿ ಫೋನ್ ಅನ್ನು ಏರ್ಪ್ಲೇನ್ ಮೋಡ್ ಅಥವಾ ಆಫ್ಲೈನ್ ಮಾಡುವುದು ಮತ್ತು Read receipts disabling ಮೂಲಕ ಇದನ್ನು ಸಾಧಿಸಬಹುದಾಗಿದೆ.
BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್ನ 9ನೇ ಸೀಸನ್ ಆರಂಭ!| Pro Kabaddi Leag
ವಾಟ್ಸ್ಆ್ಯಪ್ ಓಪನ್ ಮಾಡಿದಾಕ್ಷಣ ನಿಮಗೆ ಮೂರು ಚುಕ್ಕಿಗಳು ಗೋಚರಿಸುತ್ತವೆ. ಬಳಿಕ ಸೆಟ್ಟಿಂಗ್ ಆಯ್ಕೆ ಮಾಡಿಕೊಂಡು ಅಕೌಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಅಲ್ಲಿ ಪ್ರೈವಸಿಯನ್ನು ಆಯ್ದುಕೊಂಡು ಅಡ್ವಾನ್ಸ್ ಫೀಚರ್ನ್ನು ಪರಿಶೀಲಿಸಿ. ಅಲ್ಲಿ Read receipts disable ಮಾಡಬೇಕು ಅಷ್ಟೇ. ಇದಲ್ಲದೇ ರಹಸ್ಯವಾಗಿ ಮೆಸೇಜ್ಗಳನ್ನು ಓದಲು ಮತ್ತೊಂದು ದಾರಿಯೂ ಇದೆ. ನೋಟಿಫಿಕೇಶನ್ ಬಾರ್ ಮೂಲಕ ನಾವು ರಹಸ್ಯವಾಗಿ ಸಂದೇಶಗಳನ್ನು ಓದಬಹುದಾಗಿದೆ. ನೋಟಿಫಿಕೇಶನ್ ಬಂದ ಕೂಡಲೇ ನಾವದನು ಕೆಳಗೆ ಸರಿಸಿ ಓದಿದ್ರೆ ಸಾಕು..
BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್ನ 9ನೇ ಸೀಸನ್ ಆರಂಭ!| Pro Kabaddi Leag
ವಾಟ್ಸ್ಆ್ಯಪ್ ಸೆಟ್ಟಿಂಗ್ಸ್ ಅನ್ನು ಓಪನ್ ಮಾಡಿ ನೋಟಿಫಿಕೇಶನ್ ಆಯ್ದುಕೊಳ್ಳಬೇಕು. ಪಾಪ್ಅಪ್ ನೋಟಿಫಿಕೇಶನ್ ಫಿಚರ್ ಅನ್ನು ಕ್ಲಿಕ್ ಮಾಡಿ. ಓನ್ಲಿ ವೆನ್ ದ ಸ್ಕ್ರೀನ್ ಈಜ್ ಆಫ್, ಆಲ್ವೆಸ್ ಶೋ ಪಾಪ್ಅಪ್, ಓನ್ಲಿ ವೆನ್ ಸ್ಕ್ರೀನ್ ಈಜ್ ಆನ್ ಎಂಬ ಮೂರು ಆಪ್ಷನಗಳಲ್ಲಿ ಯಾವುದಾದ್ರೂ ಒಂದನ್ನು ಆರಿಸಿಕೊಳ್ಳಬೇಕು.ಆಗ ನೋಟಿಫಿಕೇಶನ್ಗಳು ಪಾಪ್ಅಪ್ ರೂಪದಲ್ಲಿ ಕಾಣಿಸುತ್ತವೆ. ಅವುಗಳನ್ನು ಓದುವುದರಿಂದ ಬ್ಲೂಟಿಕ್ ಬೀಳದು. ವಿಡ್ಜೆಟ್ ಮೂಲಕ ಮೂಲಕವು ವಾಟ್ಸ್ಆ್ಯಪ್ ಸಂದೇಶಗಳನ್ನು ಓದಬಹುದು. WhatsApp ಅನ್ನು ಹೋಮ್ ಸ್ಕ್ರೀನ್ಗೆ ತನ್ನಿ. ಅಪ್ಲಿಕೇಶನ್ ತೆರೆಯದೆಯೇ ಎಲ್ಲಾ ಸಂದೇಶಗಳನ್ನು ಓದಬಹುದಾಗಿದೆ.