Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ? ಶಾಕಿಂಗ್ ವರದಿ ಇಲ್ಲಿದೆ!

ಪೆಟ್ರೋಲ್, ಡೀಸೆಲ್ ಖರೀದಿಗೆ ಯಾವುದೇ ಮಿತಿ ಇಲ್ಲ!: ನಿಯಮ ಉಲ್ಲಂಘಿಸಿದ ಬಂಕ್‌ಗಳಿಗೆ ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ!

ಉಮರ್ ಖಾಲಿದ್‌ಗೆ ಸಿಗುತ್ತಾ ರಿಲೀಫ್?: ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ; ನಾಳೆ ತುರ್ತು ವಿಚಾರಣೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರರ ಗಮನಕ್ಕೆ: ನಿಮ್ಮ ‘ದ್ವಿ-ಚಕ್ರ ವಾಹನ’ಗಳ ಕಳ್ಳತನ ತಪ್ಪಿಸಲು ಈ ಕ್ರಮವಹಿಸಿ | Two Wheeler Theft
KARNATAKA

ಸಾರ್ವಜನಿಕರರ ಗಮನಕ್ಕೆ: ನಿಮ್ಮ ‘ದ್ವಿ-ಚಕ್ರ ವಾಹನ’ಗಳ ಕಳ್ಳತನ ತಪ್ಪಿಸಲು ಈ ಕ್ರಮವಹಿಸಿ | Two Wheeler Theft

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನಗಳು ಎಷ್ಟು ರಸ್ತೆಗೆ ಇಳಿಯುತ್ತಿವೆಯೋ ಅಷ್ಟೇ ಪ್ರಮಾಣದಲ್ಲಿ ಅವುಗಳ ಕಳ್ಳತನ ಕೂಡ ನಡೆಯುತ್ತಿದೆ. ಈ ಕಳ್ಳತನಕ್ಕೆ ಬಹುಮುಖ್ಯ ಕಾರಣ, ದ್ವಿ-ಚಕ್ರ ವಾಹನಗಳನ್ನು ಸುರಕ್ಷಿತವಾಗಿ ಇಡುವುದಕ್ಕೆ ರಕ್ಷಣಾ ತಂತ್ರಗಳನ್ನು ಅಳವಡಿಸಿಕೊಳ್ಳದೇ ಇರುವುದಾಗಿದೆ. ಹಾಗಾದ್ರೆ ದ್ವಿ-ಚಕ್ರ ವಾಹನಗಳ ಕಳ್ಳತನ ತಡೆಗಟ್ಟುವುದು ಹೇಗೆ ಎನ್ನುವ ಬಗ್ಗೆ ಮುಂದಿದೆ ಮಾಹಿತಿ.

ಬೆಂಗಳೂರು ನಗರ ಪೊಲೀಸ್ ಇಲಾಖೆಯು ಸಾರ್ವಜನಿಕ ಪ್ರಕಟಣೆಯಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರು ನಗರದಲ್ಲಿ ಒಟ್ಟು ಸುಮಾರು 80 ಲಕ್ಷ ದ್ವಿ-ಚಕ್ರ ವಾಹನಗಳಿದ್ದು, ಪ್ರತಿದಿನ ಸುಮಾರು ಒಂದೂವರೆಯಿಂದ ಎರಡು ಸಾವಿರ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿದ್ದು, ಇವುಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿನಿತ್ಯ ಸರಾಸರಿ ಅಂದಾಜು 14 ರಿಂದ 16 ವಾಹನಗಳು ಕಳ್ಳತನವಾಗುತ್ತಿರುತ್ತವೆ ಎಂದು ಹೇಳಿದೆ.

ಬೆಂಗಳೂರು ನಗರದ ಸಾರ್ವಜನಿಕರಿಗೆ ನಗರದಲ್ಲಿ ಆಗುತ್ತಿರುವ ಈ ದ್ವಿ-ಚಕ್ರ ವಾಹನಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ನಗರ ಪೊಲೀಸ್ ವತಿಯಿಂದ ಈ ಕೆಳಕಂಡ ಸೂಚನೆಗಳನ್ನು ನೀಡಲಾಗುತ್ತಿದೆ.

ದ್ವಿ-ಚಕ್ರ ವಾಹನಗಳ ಕಳ್ಳತನಕ್ಕೆ ಕಾರಣಗಳು:

1. ವಾಹನಗಳನ್ನು ಸೂಕ್ತ ಎಚ್ಚರಿಕೆ ಇಲ್ಲದೆ ನಿಲ್ಲಿಸುವುದು.
2. ವಾಹನ ನಿಲ್ಲಿಸಿದಾಗ ಅದರಲ್ಲಿಯೇ ವಾಹನದ ಕೀಯನ್ನು ಬಿಟ್ಟು ಹೋಗುವುದು.
3. ಸುಲಭವಾಗಿ ಹ್ಯಾಂಡಲ್ ಲಾಕ್‌ಗಳನ್ನು ಮುರಿಯುವಂತಹ ವಾಹನಗಳನ್ನು ಬಳಸುವುದು.
4. ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ಹಳೆಯ ವಾಹನಗಳನ್ನು ಬಳಸುವುದು.
5.ಸಿ.ಸಿ ಟಿ.ವಿ ಕವರೇಜ್ ಇಲ್ಲದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವುದು.
6. ಸಾರ್ವಜನಿಕರಿಗೆ ಕಾಣದಂತೆ ನಿರ್ಜನ ಮತ್ತು ಕತ್ತಲಿನ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದು.
7. ಸೂಕ್ತ anti-theft measurement ಗಳನ್ನು ಅಳವಡಿಸದೇ ಇರುವುದು.

ಮೇಲ್ಕಂಡ ಕಳ್ಳತನವನ್ನು ತಡೆಗಟ್ಟುವಲ್ಲಿ ಕೈಗೊಳ್ಳಬಹುದಾದ ಕ್ರಮಗಳು

1. Anti-theft ಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದು. ವಾಹನಗಳಿಗೆ ಜಿ.ಪಿ.ಎಸ್ ಸಿಸ್ಟಮ್ ಅಳವಡಿಸುವುದು.
a) Wheel Locking ಸಿಸ್ಟಮ್‌ಗಳನ್ನು ಅಳವಡಿಸುವುದು.
b) Hand lock ಗಳು ಗಟ್ಟಿ ಮುಟ್ಟಾಗಿರುವಂತೆ ನೋಡಿಕೊಳ್ಳುವುದು.
d) CCTV ಇರುವ ವ್ಯಾಪ್ತಿ ಪ್ರದೇಶದಲ್ಲೇ ನಿಲ್ಲಿಸುವುದು.
e) ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸುವುದು.
f) ವಾಹನ ನಿಲ್ಲಿಸಿದಾಗ ಕೀ ಬಿಟ್ಟು ಹೋಗದೇ ಇರುವುದು.
g) ನಕಲಿ ಕೀ ಬಳಸಿ ಅಥವಾ ಸರ್ಕ್ಯುಟ್ ಬ್ರೇಕ್ ಮಾಡಿ ವಾಹನ ಕಳ್ಳತನಕ್ಕೆ ಪ್ರಯತ್ನಿಸಿದಲ್ಲಿ ಸೈರನ್ ಆಗುವಂತಹ ವ್ಯವಸ್ಥೆ ಅಥವಾ ಮೊಬೈಲ್‌ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಿಕೊಳ್ಳುವುದು.

ಮೇಲ್ಕಂಡ ಅಂಶಗಳನ್ನು ಪರಿಣಾಮಕಾರಿ ಬಳಸುವುದರಿಂದ ವಾಹನ ಕಳ್ಳತನವನ್ನು ತಡೆಹಿಡಿಯಬಹುದಾಗಿದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

ಸಾಗರದ ಅಡ್ಡೇರಿಯಲ್ಲಿ ಬಡ ರೈತರ ಜಮೀನಿಗೆ ನುಗ್ಗಿ ಫಸಲು ಕಿತ್ತಿರುವುದು ಅಮಾನವೀಯ: ಹರತಾಳು ಹಾಲಪ್ಪ ಆಕ್ರೋಶ

2 Mins Read

Rain In Bengaluru: ಬೆಂಗಳೂರಿನ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ

1 Min Read

BREAKING: ಬೆಂಗಳೂರಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ | Namma Metro

1 Min Read
Recent News

ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ? ಶಾಕಿಂಗ್ ವರದಿ ಇಲ್ಲಿದೆ!

ಪೆಟ್ರೋಲ್, ಡೀಸೆಲ್ ಖರೀದಿಗೆ ಯಾವುದೇ ಮಿತಿ ಇಲ್ಲ!: ನಿಯಮ ಉಲ್ಲಂಘಿಸಿದ ಬಂಕ್‌ಗಳಿಗೆ ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ!

ಉಮರ್ ಖಾಲಿದ್‌ಗೆ ಸಿಗುತ್ತಾ ರಿಲೀಫ್?: ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ; ನಾಳೆ ತುರ್ತು ವಿಚಾರಣೆ!

BREAKING: ಜಾಗತಿಕವಾಗಿ ಚಾಟ್‌ಜಿಪಿಟಿ ಸರ್ವರ್ ಡೌನ್, ಕೋಟ್ಯಂತರ ಬಳಕೆದಾರರು ಕಂಗಾಲು | ChatGPT down

State News
KARNATAKA

ಸಾಗರದ ಅಡ್ಡೇರಿಯಲ್ಲಿ ಬಡ ರೈತರ ಜಮೀನಿಗೆ ನುಗ್ಗಿ ಫಸಲು ಕಿತ್ತಿರುವುದು ಅಮಾನವೀಯ: ಹರತಾಳು ಹಾಲಪ್ಪ ಆಕ್ರೋಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಅಡ್ಡೇರಿ ಗ್ರಾಮದ ಬಡ ಕುಟುಂಬದ ಜಮೀನಿಗೆ ನುಗ್ಗಿ, ಬೆಳೆದು ನಿಂತಿದ್ದ ಫಸಲನ್ನು ಕಿತ್ತು ಹಾಕಿರುವುದು…

Rain In Bengaluru: ಬೆಂಗಳೂರಿನ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ

BREAKING: ಬೆಂಗಳೂರಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ | Namma Metro

ಏಸೂರು ಬಿಟ್ಟರು ಬೇಸೂರು ಬಿಡೆವು: ಮಾಜಿ ಸಚಿವ ಹಾಲಪ್ಪ ಹರತಾಳು ಎಚ್ಚರಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.