ಬೆಂಗಳೂರು: ಮೈಸೂರು ಹಾಗೂ ಬೆಂಗಳೂರು, ಮೈಸೂರು ಮತ್ತು ತಾಳಗುಪ್ಪ ನಡುವೆ ಸಂಚರಿಸುತ್ತಿರುವಂತ ಎಕ್ಸ್ ಪ್ರೆಸ್ ರೈಲುಗಳ ( Express Train ) ರೈಲುಗಳ ಹೆಸರನ್ನು ಭಾರತೀಯ ರೈಲ್ವೆ ಇಲಾಖೆಯಿಂದ ಮರುನಾಮಕರಣಗೊಳಿಸಲಾಗಿದೆ.
ಈ ಹಿನ್ನೆಲೆ ಇಂದು ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ ಪ್ರೆಸ್ ಹೆಸರಿನ ಬೋರ್ಡ್ ನ್ನು ರೈಲ್ವೆ ಇಲಾಖೆ ನೇತು ಹಾಕಿದೆ. ಹೆಸೆರು ಮರುನಾಮಕರಣ ಬಳಿಕ ಮೊದಲ ಬಾರಿಗೆ ಒಡೆಯರ್ ಎಕ್ಸ್ಪ್ರೆಸ್ ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ (Krantiveera sangolli rayanna station) ಇಂದು ಬೆಳಗ್ಗೆ ಆಗಮಿಸಿತ್ತು
ರೈಲು ಸಂಖ್ಯೆ 12613/12614 ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ ಪ್ರೆಸ್ ರೈಲು ( Wadeyar Express Train ) ಎಂಬುದಾಗಿ ಮರುನಾಮಕರಣಗೊಳಿಸಿದೆ.ಇನ್ನೂ ರೈಲು ಸಂಖ್ಯೆ 16221/16222 ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಕುವೆಂಪು ಎಕ್ಸ್ ಪ್ರೆಸ್ ರೈಲು ( Kuvempu Express Train ) ಎಂಬುದಾಗಿ ಮರುನಾಮಕರಣಗೊಳಿಸಿ ಭಾರತೀಯ ರೈಲ್ವೆ ಇಲಾಖೆ ಶುಕ್ರವಾರ ಆದೇಶ ಹೊರಡಿಸಿತ್ತು.
ಇನ್ನೂ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು,. ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು “ಒಡೆಯರ್ ಎಕ್ಸ್ಪ್ರೆಸ್ “ ನಿಮಗೆ ಸೇವೆ ನೀಡಲಿದೆ!! ಮೈಸೂರು-ತಾಳಗುಪ್ಪ ರೈಲು “ಕುವೆಂಪು ಎಕ್ಸ್ಪ್ರೆಸ್” ಆಗಲಿದೆ!!! ಥಾಂಕ್ಯೂ ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಎಂದು ನಿನ್ನೆ ಟ್ವೀಟ್ ಮಾಡಿದ್ದರು.
ಶುಕ್ರವಾರದ ಶುಭ ಸುದ್ದಿ!
ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು “ಒಡೆಯರ್ ಎಕ್ಸ್ಪ್ರೆಸ್ “ ನಿಮಗೆ ಸೇವೆ ನೀಡಲಿದೆ!! ಮೈಸೂರು-ತಾಳಗುಪ್ಪ ರೈಲು "ಕುವೆಂಪು ಎಕ್ಸ್ಪ್ರೆಸ್'' ಆಗಲಿದೆ!!! ಥಾಂಕ್ಯೂ ಅಶ್ವಿನಿ ವೈಷ್ಣವ್ @AshwiniVaishnaw ji ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ @JoshiPralhad ಸರ್! pic.twitter.com/uZzHt1uzZz
— Pratap Simha (@mepratap) October 7, 2022
ಒಡೆಯರ್ ಎಕ್ಸ್ ಪ್ರೆಸ್! pic.twitter.com/kKElefCzjD
— Pratap Simha (@mepratap) October 8, 2022