ಮೈಸೂರು : ಇತ್ತೀಚೆಗೆ ಮೈಸೂರು ಸೇರಿದಂತೆ ಚಾಮರಾಜನಗರ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹುಲಿ ಚಿರತೆಗಳ ಕಾಟ ಹೆಚ್ಚಾಗಿದೆ. ಇದೀಗ ಮೈಸೂರಿನ ಬೆಮೆಲ್ ಕಾರ್ಖಾನೆಯಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದೆ.
ಹೌದು ಮೈಸೂರಿನಲ್ಲಿ 20 ಹುಲಿ ಸೆರೆ ಹಿಡಿದರು ಕೂಡ ಹುಲಿ ಕಾಟ ತಪ್ಪಿಲ್ಲ ಬೆಮೆಲ್ ಕಾರ್ಖಾನೆಯಲ್ಲಿ ಹುಲಿ ಪ್ರತ್ಯಕ್ಷ ಆಗಿದೆ ಹುಲಿ ಕಾಂಪೌಂಡ್ ಹಾರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾರದ ಹಿಂದೆ ಅಷ್ಟೇ ಬೆಮೆಲ್ ಸಮೀಪ ಹುಲಿ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಗದೇ ಓಡಾಡುತ್ತಿತ್ತು. ಇದೀಗ ಮತ್ತೆ ಕಾರ್ಖಾನೆ ಕಾಂಪೌಂಡ್ ಹಾರುತ್ತಿರುವ ದೃಶ್ಯ ಇದೀಗ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಚ್ಚರದಿಂದ ಇರುವಂತೆ ಜನರಿಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ.








