ದಕ್ಷಿಣ ಕನ್ನಡ: ಕೆಲ ದಿನಗಳ ಹಿಂದಷ್ಟೇ ನೆಲಮಂಗಲದಲ್ಲಿ ಕಾರು ಅಪಘಾತದಲ್ಲಿ ಇಡೀ ಕುಟುಂಬವೇ ದುರ್ಮರಣಕ್ಕೆ ಈಡಾದಂತ ಘಟನೆ ನಡೆದಿತ್ತು. ಈ ಘಟನೆ ಹಸಿರಾಗಿರೋ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ ಪ್ರಕರಣ ನಡೆದಿದೆ. ಈ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪರ್ಲಡ್ಕ ಎಂಬಲ್ಲಿ ಕಂದಕಕ್ಕೆ ಕಾರೊಂದು ಉರುಳಿ ಬಿದ್ದ ಪರಿಣಾಮ ಮೂವರು ದುರ್ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. ಮೃತರನ್ನು ಚಿದಾನಂದ, ಅಣ್ಣು ನಾಯಕ್ ಹಾಗೂ ರಮೇಶ್ ನಾಯ್ಕ್ ಎಂಬುದಾಗಿ ಗುರುತಿಸಲಾಗಿದೆ. ಮೃತರೆಲ್ಲರೂ ಸುಳ್ಯ ತಾಲ್ಲೂಕಿನ ಜಟ್ಟಿಪಳ್ಳ ನಿವಾಸಿಗಳು ಎಂಬುದಾಗಿ ಹೇಳಲಾಗುತ್ತಿದೆ.
ನಿದ್ದೆ ಮಂಪರಿನಲ್ಲಿ ಕಾರು ಚಾಲನೆಯ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
BREAKING: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
BREAKING: ಮನಮೋಹನ್ ಸಿಂಗ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ