ಹುಬ್ಬಳ್ಳಿ : ಆ್ಯಪ್ ಮೂಲಕ ಮತದಾರರ ಸರ್ವೆ ನಡೆಸುತ್ತಿದ್ದ ಆರೋಪದ ಮೇರೆ ಮೂವರ ವಿರುದ್ಧ ದೂರು ದಾಖಲಾಗಿದೆ.
ಹುಬ್ಬಳ್ಳಿಯಲ್ಲಿ ಮತದಾರರ ಸರ್ವೆ ಮಾಡುತ್ತಿದ್ದ ಮೂವರ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ಹೋಗಿದೆ ಎನ್ನಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು ಮೂವರನ್ನು ವಿಚಾರಣೆಗೊಳಪಡಿಸಿ ಧೃಡವಾದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹರೀಶ್, ನಿತೇಶ್, ಮಂಜುನಾಥ್ ಅವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಕಾಂಗ್ರೆಸ್ ಮುಖಂಡರು ಒಪ್ಪಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ಚಿಲುಮೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಆ್ಯಪ್ ಮೂಲಕ ಮತದಾರರ ಸರ್ವೆ ನಡೆಸುತ್ತಿದ್ದ ಆರೋಪ ಕೇಳಿಬಂದಿದೆ.