ಮೈಸೂರು: ಮುರುಘಾ ಶ್ರೀಗಳು ( Murugha Matt Sri ) ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದಂತ ಆರೋಪದ ಪ್ರಕರಣವನ್ನು ಒಡನಾಡಿ ಸಂಸ್ಥೆಯ ( Odanadi Organization ) ಮೂಲಕ ಬೆಳಕಿಗೆ ತರಲಾಗಿತ್ತು. ಇದೀಗ ಈ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿಗಳಿಗೆ ಬೆದರಿಕೆ ಕರೆ ಬರುತ್ತಿವೆಯಂತೆ. ಈ ಹಿನ್ನಲೆಯಲ್ಲಿ ಪೊಲೀಸರಿಗೆ ( Karnataka Police ) ಒಡನಾಡಿ ಸಂಸ್ಥೆಯಿಂದ ದೂರು ನೀಡಲಾಗಿದೆ. ಅಲ್ಲದೇ ರಕ್ಷಣೆಗೆ ಮನವಿ ಮಾಡಲಾಗಿದೆ.
ಈ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತರವರಿಗೆ ಪತ್ರ ಬರೆದಿರುವಂತ ಒಡನಾಡಿ ಸಂಸ್ಥೆಯ ನಿರ್ದೇಶಕರಾದಂತ ಪರಶುರಾಮ್, ಮುರುಘಾ ಶ್ರೀಗಳ ವಿರುದ್ಧ ಅಪ್ರಾಪ್ತ ಹೆಣ್ಣುಮಕ್ಕಳಿಗೆ ನೀಡಿರುವ ಲೈಂಗಿಕ ಕಿರುಕುಳ ದೂರಿನ ಮೇರೆಗೆ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸ್ವಾಮೀಜಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಮುರುಘಾ ಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ ನಂತ್ರ, ಅವರ ಅನುಯಾಯಿಗಳು ಮತ್ತು ಮಠದ ಪರವಾಗಿರುವವರು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ, ಕೆವಿ ಹಾಗೂ ಪರಶುರಾಮ್ ಎಂ ಎಲ್ ಅವರಿಗೆ ಪ್ರಾಣ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಇಂದು ‘ಅಮಿತ್ ಶಾ’ರಿಂದ ’36ನೇ ರಾಷ್ಟ್ರೀಯ ಗೇಮ್ಸ್’ನ ಗೀತೆ, ಮ್ಯಾಸ್ಕಟ್ ಅನಾವರಣ
ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣದ ಪ್ರಕರಣದ ನಂತ್ರ ಹಲವಾರು ಕರೆಗಳು ಬರುತ್ತಿದ್ದು, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವರು ಬೆದರಿಕೆಯನ್ನು ಹಾಕಿದ್ದಾರೆ. ಹೀಗಾಗಿ ನಮ್ಮ ಸಂಸ್ಥೆಗೆ, ಕುಟುಂಬಸ್ಥರಿಗೆ ರಕ್ಷಣೆ ನೀಡಬೇಕು ಎಂಬುದಾಗಿ ಮನವಿ ಮಾಡಲಾಗಿದೆ.