ಬೆಂಗಳೂರು: ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಅಕ್ರಮ ಒತ್ತುವರಿಯಾಗಿದೆ ಎಂದು ವಿಧಾನಪರಿಷತ್ ನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
BIGG NEWS: ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್
ವಿಧಾನಪರಿಷತ್ ನಲ್ಲಿ ಗೋಪಿನಾಥ್ ಒತ್ತವರಿಗೆ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಉತ್ತರ ನೀಡಿದ ಆರ್. ಅಶೋಕ್, ಬೆಂಗಳೂರು ನಗರದಲ್ಲಿ 1,22,918 ಎಕರೆ ಸರ್ಕಾರಿ ಜಮೀನು ಇದೆ. ಇದರಲ್ಲಿ 38,942 ಎಕರೆ ಒತ್ತುವರಿ ಆಗಿದೆ. ಈ ಪೈಕಿ 16478 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 1,08,295 ಎಕರೆ ಸರ್ಕಾರಿ ಜಮೀನು ಇದೆ. ಈ ಪೈಕಿ 36,229 ಎಕರೆ ಒತ್ತುವರಿ ಆಗಿದೆ. ಇದರಲ್ಲಿ 11,779 ಒತ್ತುವರಿ ತೆರವು ಆಗಿದೆ ಮಾಹಿತಿ ನೀಡಿದರು.