ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಹೊಂದಿರುವ ಜಮೀನು ಸೇರಿಸಿದಾಗ 7 ಎಕರೆಗೂ ಹೆಚ್ಚು ಜಮೀನು ಇದ್ದಲ್ಲಿ ಅಂತಹವರು ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು ಎಂದು ತಿಳಿಸಲಾಗಿದೆ.
ಪಡಿತರ ಚೀಟಿಯ ಯಾವುದೇ ಸದಸ್ಯ 4 ಚಕ್ರ ವಾಹನ ಹೊಂದಿದ್ದಲ್ಲಿ ಅಂತಹವರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು(ತಂದೆ/ ತಾಯಿ/ ಹೆಂಡತಿ / ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಜಿ.ಎಸ್.ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಸರ್ಕಾರಿ ನೌಕರಿ ಮಾಡುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ತಾಯಿ/ಹೆಂಡತಿ/ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬ್ಬಂಧಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ವೃತ್ತಿಪರ ನೌಕರರು (ವೈದ್ಯರು, ಎಂಜಿನಿಯರ್, ವಕೀಲರು, ಇತರರು) ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು” ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಗತಳು, ಕಮಿಷನ್ ಏಜಂಟರು, ಬೀಜ ಮತ ಗೊಬ್ಬರ ಡೀಲರ್ಗಳು ಇತ್ಯಾದಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರ (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀ ಹೊಂದಲು ಅನರ್ಹರು.
ಅನುದಾನಿತ ಶಾಲಾ ಕಾಲೇಜುಗಳ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಸರ್ಕಾರಿ ಸ್ವಾಮ್ಯದ ಉದ್ಯಮಗಳು/ ಮಂಡಳಿಗಳು /ನಿಗಮಗಳ ಖಾಯಂ ನೌಕರರು, ಸ್ವಾಯ ಸಂಸ್ಥೆ/ ಮಂಡಳಿಯ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಮಡಿಕೇರಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರು ಮಾತನಾಡಿ ಮಡಿಕೇರಿ, ತಾಲ್ಲೂಕಿನಲ್ಲಿ 05 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಇಲಾಖೆಗಳು ಉತ್ತಮ ಪ್ರಗತಿಯನ್ನು ಸಾಧಿಸಿದ್ದು ಮುಂದಿನ ದಿನಗಳಲ್ಲಿಯೂ ಸಹ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಸರ್ಕಾರದ ಮಹಾತ್ವಾಕಾಂಕ್ಷಿ 05 ಗ್ಯಾರಂಟಿ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕು ಹಾಗೂ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮಪಂಚಾಯತಿ ಮಟ್ಟದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆಯನ್ನು ಮಾಡಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಅಧಿಕಾರಿ, ಶಿಶು ಅಭಿವೃದ್ದಿ ಇಲಾಖಾ ಅಧಿಕಾರಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮತ್ತು ವ್ಯವಸ್ಥಾಪಕರು ಕೆ.ಎಸ್.ಆರ್.ಟಿ.ಸಿ ರವರು ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.
ಗೃಹಲಕ್ಷ್ಮಿ ಯೋಜನೆ:-ಶಿಶುಅಭಿವೃದ್ದಿ ಅಧಿಕಾರಿ ಅವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ ಜೂನ್ ಮಾಹೆಯ ಅಂತ್ಯಕ್ಕೆ ಹಣ ಮಂಜೂರಾಗಿರುವ ಒಟ್ಟು ಫಲಾನುಭವಿಗಳ ಸಂಖ್ಯೆ 30,307, ಪಾವತಿಯಾದ ಒಟ್ಟು ಮೊತ್ತ ಜೂನ್ ಮಾಹೆಯ ಅಂತ್ಯಕ್ಕೆ 6,06,14,000 ರೂ. ಮಾಡಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ 166 ,ಐಟಿ, ಜಿಎಸ್ ಟಿ ಪಾವತಿದಾರರು ಎಂದು ತಿರಸ್ಕøತಗೊಂಡ ಫಲಾನುಭವಿಗಳ ಸಂಖ್ಯೆ 784 ಹಾಗೂ ಪ್ರಧಾನ ಕಚೇರಿಯಿಂದ ಫೆಬ್ರವರಿ-2025 ಹಾಗೂ ಮಾರ್ಚ್ -2025ರ ಮಾಹೆಯ ಹಣ ಪಾವತಿಯಾಗಲು ಬಾಕಿ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಕ್ತಿಯೋಜನೆ: ಶಕ್ತಿ ಯೋಜನೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 1,31,74,648 ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 3,05,132 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಒಟ್ಟಾರೆ 1,34,79,780 ಜನ ಮಹಿಳಾ ಪ್ರಯಾಣಿಕರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಈ ಯೋಜನೆ ಪಡೆದುಕೊಂಡಿರುತ್ತಾರೆ ಎಂದರು.
ಸರಾಸರಿ 15,934 ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿರುತ್ತಾರೆ, ಮುಂದುವರೆದು ಒಟ್ಟು ಮೊತ್ತ 56,97,27,802 ರೂ. ಸಂಸ್ಥೆಗೆ ಆದಾಯ ಬಂದಿರುತ್ತದೆ. ಸರಾಸರಿ ಒಂದು ದಿನದ ಆದಾಯ ರೂ.6,73,437 ಆಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ: ಇಲಾಖಾಧಿಕಾರಿಯವರು ಮಾತನಾಡಿ 2023-2024ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅಲ್ಲದೆ ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಯುವನಿಧಿ ಯೋಜನೆಯಲ್ಲಿ ಆಗಸ್ಟ್ ಮಾಹೆಯವರೆಗೆ 493 ಜನ ನೋಂದಣಿಯಾಗಿದ್ದು ಜುಲೈ ಮಾಹೆಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ರೂ.12,04,500 ಹಣ ಬಿಡುಗಡೆಯಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ: ಇಲಾಖಾಧಿಕಾರಿಯವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ 51918 ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ 51521 ನೋಂದಣಿಗೊಂಡ ಅರ್ಜಿಗಳಾಗಿದ್ದು, 397 ಬಾಕಿ ಇರುವ ಸ್ಥಾವರಗಳಿದ್ದು ಶೇ.99.23 ಶೇಕಡವಾರು ಪ್ರಗತಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 38,363 ಪಡಿತರ ಚೀಟಿ ಇದ್ದು 1,20,865 ಒಟ್ಟು ಫಲಾನುಭವಿಗಳಿರುತ್ತಾರೆ ಅದರಲ್ಲಿ 1973 ಎಎವೈ ಪಡಿತರ ಚೀಟಿ ಇದ್ದು 7897 ಎಎವೈ ಫಲಾನುಭವಿಗಳು ಇರುತ್ತಾರೆ. 22606 ಪಿ.ಹೆಚ್ ಹೆಚ್ ಪಡಿತರ ಚೀಟಿ ಇದ್ದು 73295 ಫಲಾನುಭವಿಗಳು,13784 ಎನ್ ಪಿ ಹೆಚ್ ಹೆಚ್ ಪಡಿತರ ಚೀಟಿ ಇದ್ದು 39673 ಫಲಾನುಭವಿಗಳಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆ ಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ 441 ಆಗಿರುತ್ತದೆ ಹಾಗೂ ಈ ಪಡಿತರ ಚೀಟಿದಾರರು, ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಸಭೆಗೆ ತಿಳಿಸಿದರು.








