ಶಿವಮೊಗ್ಗ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಜಸ್ಟ್ ಪಾಸ್ ಆದಂತಹ ವಿದ್ಯಾರ್ಥಿಗಳು ಕೂಡ ಮತ್ತೊಮ್ಮೆ ಪರೀಕ್ಷೆ ಬರೆಯಬಹುದು ಎಂದು ಶಿವಮೊಗ್ಗ ನಗರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಸ್ಟ್ ಪಾಸ್ ಆದಂತ ವಿದ್ಯಾರ್ಥಿಗಳು ಕೂಡ ಮತ್ತೆ ಪರೀಕ್ಷೆ ಬರೆಯಬಹುದು. ಹೀಗಾಗಿ ಅಂತಹ
ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇವೆ. ಫೇಲಾದವರು ಮತ್ತೆ ಪರೀಕ್ಷೆ ಬರೆದು ಪಾಸ್ ಆಗಿ ಈ ವರ್ಷ ಅಷ್ಟೇ ಕೃಪಾಂಕ ಅಂಕ ಸೀಮಿತವಾಗುತ್ತದೆ ಎಂದರು.
ಅಲ್ಲದೆ ಈ ಒಂದು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಆಗಿದೆ. ಶಿವಮೊಗ್ಗ ಮೂರನೇ ಸ್ಥಾನಕ್ಕೆ ಬಂದಿದ್ದು ಸಂತಸ ತಂದಿದೆ. ಎಂದು ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮತ್ತು ಬಂಗಾರಪ್ಪ ಹೇಳಿಕೆ ನೀಡಿದರು. ಪ್ರಸ್ತಕ ಸಾಲಿನಲ್ಲಿ ಉಡುಪಿ ಮೊದಲ ಸ್ಥಾನ ಗಳಿಸಿದ್ದು,ಯಾದಗಿರಿ ಮತ್ತೆ ಕೊನೆ ಸ್ಥಾನ ಪಡೆದುಕೊಂಡಿದೆ.
ಇನ್ನು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕುರಿತು ಮಾತನಾಡಿದ ಅವರು, ಅಣ್ಣಾಮಲೈ ಒಬ್ಬ ಅಯೋಗ್ಯ. ನಮ್ಮ ರಾಜ್ಯದಿಂದ ನಿವೃತ್ತಿ ಸಂಬಳ ತೆಗೆದುಕೊಂಡು ಇಲ್ಲಿ ಬಂದು ಪುಕ್ಸಟ್ಟೆ ಭಾಷಣ ಮಾಡುತ್ತಾರೆ. ಇಲ್ಲಿ ಬಂದು ನನ್ನ ಬಗ್ಗೆ ಅಣ್ಣಾಮಲೈ ಮಾತನಾಡುತ್ತಾರೆ ಎಂದು ಅಣ್ಣಾಮಲೈ ವಿರುದ್ಧ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.