ಚಿಕ್ಕಮಗಳೂರು : 420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ. ಯಾವುದೇ ಪಕ್ಷವಾಗಲಿ ಅಲ್ಲಿ ಅವರ ಅಹಂಕಾರ ಕಾಣುತ್ತೆ. ನಾನು ತೆಗೆದುಕೊಳ್ತೀನಿ ಅನ್ನೋ ಅಹಂಕಾರ ನಿಂಗೆ ಎಲ್ಲಿ ಬರುತ್ತೆ ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದರು.
‘ಪ್ರಧಾನಿ ಮೋದಿ’ ಕಾರ್ಯಕ್ರಮಕ್ಕೆ ನಾನು ಹೋಗಲ್ಲ : ಅಸಮಾಧಾನ ಹೊರಹಾಕಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ. ಅದಕ್ಕೆ ಸಣ್ಣ ಪಕ್ಷಗಳನ್ನ ಒಡೆಯುವ, ಕೊಂಡುಕೊಳ್ಳುತ್ತಿದ್ದಾರೆ. ಆ ಮಾತಿನ ಅಹಂಕಾರ, ಅತೃಪ್ತತೆ ಜನರಿಗೆ ಕಾಣುತ್ತಿದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
‘ಮತದಾರರ ಗುರುತಿನ ಚೀಟಿ’ ಎಂದರೇನು? ಪಡೆಯುವುದು ಹೇಗೆ.? ಮಹತ್ವ ಏನು? ಇಲ್ಲಿದೆ ಮಾಹಿತಿ | Voter ID Card
ಕಾಂಗ್ರೆಸ್ ಆಗಿರಬಹುದು ಅಥವಾ ಬೇರೆ ಯಾವುದೇ ಪಕ್ಷ ಆಗಿರಲಿ, ನಾನು ಇಷ್ಟು ಸ್ಥಾನಗಳನ್ನು ತೆಗೆದುಕೊಳ್ಳುತ್ತೇನೆ ಎನ್ನುವ ಅಹಂಕಾರ ಕಾಣಿಸುತ್ತದೆ.ಜನರು ತೀರ್ಮಾನಿಸಿ ಕೊಟ್ಟರೆ ತೆಗೆದುಕೊಳ್ಳಲಿ ಬೇಡ ಅನಲ್ಲ ಆದರೆ ನಾನು ಇಷ್ಟು ತೆಗೆದುಕೊಂಡೆ ತೆಗೆದುಕೊಳ್ಳುತ್ತೇನೆ ಎನ್ನುವುದರಲ್ಲಿ ಅಹಂಕಾರ ಎದ್ದು ಕಾಣಿಸುತ್ತೆ.ಹಾಗಾಗಿ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ, ಕೊಂಡುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.