Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ ತೈಲ ಖರೀದಿ ಪುನರ್ವಿಮರ್ಶಿಸುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ : ರಷ್ಯಾದ ವಿದೇಶಾಂಗ ಸಚಿವ

04/02/2026 8:12 PM

BREAKING : ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ಟಿಟಿಪಿ ದಾಳಿ, ಕ್ಯಾಪ್ಟನ್ ಸೇರಿದಂತೆ 3 ಸಾವು

04/02/2026 8:04 PM

‘ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ’ : ಬೋಯಿಂಗ್ 787 ಫ್ಲೀಟ್’ನ ಇಂಧನ ನಿಯಂತ್ರಣ ಸ್ವಿಚ್ ಮರು ಪರಿಶೀಲನೆ ಬಳಿಕ ಏರ್ ಇಂಡಿಯಾ ಸ್ಪಷ್ಟನೆ

04/02/2026 7:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೂಲ ಮರೆತವರು ಅಸ್ತಿತ್ವ ಕಳೆದಕೊಳ್ಳುತ್ತಾರೆ : ರಾಮಚಂದ್ರಾಪುರ ಶ್ರೀ
KARNATAKA

ಮೂಲ ಮರೆತವರು ಅಸ್ತಿತ್ವ ಕಳೆದಕೊಳ್ಳುತ್ತಾರೆ : ರಾಮಚಂದ್ರಾಪುರ ಶ್ರೀ

By kannadanewsnow0722/09/2025 8:12 PM

ಶಿವಮೊಗ್ಗ: ಇಂದು ಮನುಷ್ಯನ ಮನಸ್ಥಿತಿ ಹೇಗಿದೆಯೆಂದರೆ ಪುಣ್ಯದ ಫಲ ಬೇಕು, ಆದರೆ ಪುಣ್ಯದ ಕಾರ್ಯ ಮಾಡುವುದಕ್ಕೆ ಮನಸ್ಸಿಲ್ಲ. ದುಃಖ ಬೇಡ, ಆದರೆ ದುಃಖದ ಮೂಲವಾದ ಪಾಪ ಮಾಡುವುದನ್ನು ನಿಲ್ಲಿಸುವುದಿಲ್ಲ. ಇದು ಬದಲಾಗಿ ಪುಣ್ಯದ ಕಾರ್ಯದಲ್ಲಿ ಮನಸ್ಸು, ದುಃಖದಿಂದ ದೂರವಿರುವ ಕಾರ್ಯ ಮಾಡುವಂತಾಗಲು ಇರುವ ದಾರಿ ಒಂದೇ. ಅದು ಜಗನ್ಮಾತೆಯಾದ ರಾಜರಾಜೇಶ್ವರಿಯ ಧ್ಯಾನ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಸೋಮವಾರ ಸಾಗರದ  ರಾಘವೇಶ್ವರ ಸಭಾಭವನದಲ್ಲಿ ಆರಂಭಗೊಂಡ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಶ್ರೀ ಲಲಿತಾ ದೇವಿಯ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಪೂಜೆಗೆ ಚಾಲನೆ ನೀಡಿದ ಅವರು, ನಂತರ ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದರು.

ಕೇವಲ ದೇವಿಯ ಸ್ತುತಿಗೆ ಮುಂದಾಗಬೇಕು ಎಂದು ಮನಸ್ಸು ಮಾಡಿದಾಕ್ಷಣಕ್ಕೆ ನಾವು ಮಾಡಿದ ಪಾಪಗಳ ಪರಿಹಾರ ಸಾಧ್ಯವಾಗಲಿದೆ ಎನ್ನುವುದಾದರೆ, ಇನ್ನು ನಿಜವಾಗಿಯೂ ಶ್ರದ್ಧಾಭಕ್ತಿಯಿಂದ ಆಕೆಯ ಆರಾಧನೆಯಲ್ಲಿ ತೊಡಗಿದಾಗ ಸಿಗಬಹುದಾದ ಪುಣವೆಷ್ಟು ಎಂಬ ಸಂಗತಿ ಊಹೆಗೂ ನಿಲುಕಲಾರದು. ಮಾತ್ರವಲ್ಲ ಆಕೆಯ ಆರಾಧನೆಯಿಂದ ಪಾಪಗಳೂ ಪುಣ್ಯವಾಗಿ ಪರಿವರ್ತನೆಗೊಳ್ಳುವಂಥ ಮಹತ್ವದ ಸಂಗತಿ ಆ ಪೂಜೆಯಲ್ಲಿದೆ. ಯಾವತ್ತೂ ಪೂಜೆಯ ಹಿಂದಿರಬಹುದಾದ ಮಹತ್ವವನ್ನ ಅರಿತು, ಆರಾಧಿಸಬೇಕು. ಪೂಜೆಯಲ್ಲಿ ಬಳಸುವ ಮಂತ್ರದ ಮೂಲ ಅಂತಹ ಶಕ್ತಿಯನ್ನು ಹೊಂದಿದೆ. ಅದೂ ಮೂಲ. ಹಾಗಾಗಿ ಎಂದೂ ಕೂಡ ಮೂಲವನ್ನು ಮರೆಯಬಾರದು. ಅದು ವೃಕ್ಷಕ್ಕೆ ಬೇರಿದ್ದಂತೆ. ಅದನ್ನು ತೋರುವ ಕಾರ್ಯವನ್ನು ಗುರು ಮಾಡುತ್ತಾನೆ. ಜಗತ್ತಿಗೆ ನೆಮ್ಮದಿ ನೀಡುವ ಉದ್ದೇಶದ ಇಂತಹ ಕಾರ್ಯಗಳಿಗಾಗಿಯೇ ಹಿಂದೆ ಋಷಿ ಮುನಿಗಳು, ತಪಸ್ವಿಗಳು ಇಂಥ ಜ್ಞಾನವನ್ನು ಹುಡುಕಿದವರು. ಅದನ್ನು ಅರಿಯಬೇಕಾದರೆ ಗುರುವಿನ ಕುರಿತಾದ ಅರಿವಿರಬೇಕು ಎಂದರು.

ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ನವರಾತ್ರ ನಮಸ್ಯಾದ ಪುಣ್ಯಾಹವಾಚನೆ, ಮಹಾಸಂಕಲ್ಪ, ಯೋಗನಿದ್ರಾ ದೇವಿ ಉಪಾಸನೆ, ದುರ್ಗಾ ಹವನ, ಚಂಡಿಕಾ ಹವನ, ಲಲಿತಾ ಮೂರ್ತಿ ಪ್ರತಿಷ್ಟಾಪನೆ, ಮಾತೆಯರಿಂದ ಕುಂಕುಮಾರ್ಚನೆ, ಉಡಿ ಸಮರ್ಪಣೆ, ಸ್ತೋತ್ರ ಪಠಣ, ಭಜನೆ ನೆರವೇರಿತು.

ಸಮಾಜ ಸಂಭ್ರಮ: ನವರಾತ್ರ ನಮಸ್ಯಾ ಅಂಗವಾಗಿ ಸಮಿತಿಯು ಆಯೊಜಿಸಿದ್ದ ಸಮಾಜ ಸಂಭ್ರಮದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಪ್ರಭು, ವೈಷ್ಯವಾಣಿ ಸಮಾಜದ ಅಧ್ಯಕ್ಷ ಸತ್ಯನಾರಾಯಣರನ್ನು ಸಮಾಜದ ಪರವಾಗಿ ಗೌರವಿಸಲಾಯಿತು. ಸಂಜೆ ದುರ್ಗಾದೀಪ ನಮಸ್ಕಾರ, ಶ್ರೀ ರಾಜರಾಜೇಶ್ವರಿ ಪೂಜೆ ನೆರವೇರಿತು.

Those who forget their origins lose their existence: Ramachandrapura Sri
Share. Facebook Twitter LinkedIn WhatsApp Email

Related Posts

ಫೆ.26, 27 ಎರಡು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯ ಆರಂಭ

04/02/2026 7:28 PM1 Min Read

BIG NEWS : ವಿಧಾನಸಭೆಯಲ್ಲಿ ‘ಜಿ ರಾಮ್ ಜಿ’ ಕಾಯ್ದೆ ವಿರುದ್ಧದ ನಿರ್ಣಯ ಅಂಗೀಕಾರ

04/02/2026 7:24 PM1 Min Read

BREAKING : ಫೆ.9 ರಿಂದ ನಮ್ಮ ಮೆಟ್ರೋ ಪ್ರಯಾಣದ ಪರಿಷ್ಕೃತ ದರ ಜಾರಿ | Metro Ticket Prize Hike

04/02/2026 7:04 PM1 Min Read
Recent News

ಭಾರತ ತೈಲ ಖರೀದಿ ಪುನರ್ವಿಮರ್ಶಿಸುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ : ರಷ್ಯಾದ ವಿದೇಶಾಂಗ ಸಚಿವ

04/02/2026 8:12 PM

BREAKING : ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ಟಿಟಿಪಿ ದಾಳಿ, ಕ್ಯಾಪ್ಟನ್ ಸೇರಿದಂತೆ 3 ಸಾವು

04/02/2026 8:04 PM

‘ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ’ : ಬೋಯಿಂಗ್ 787 ಫ್ಲೀಟ್’ನ ಇಂಧನ ನಿಯಂತ್ರಣ ಸ್ವಿಚ್ ಮರು ಪರಿಶೀಲನೆ ಬಳಿಕ ಏರ್ ಇಂಡಿಯಾ ಸ್ಪಷ್ಟನೆ

04/02/2026 7:54 PM

ಕರ್ನಾಟಕವನ್ನು ರಕ್ಷಣೆ ಮಾಡಿ ಎಂದು ಕೈಮುಗಿದು ಬೇಡುತ್ತೇನೆ : ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ HD ದೇವೇಗೌಡ ಗದ್ಗದಿತ!

04/02/2026 7:46 PM
State News
KARNATAKA

ಫೆ.26, 27 ಎರಡು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯ ಆರಂಭ

By kannadanewsnow0504/02/2026 7:28 PM KARNATAKA 1 Min Read

ಬಳ್ಳಾರಿ : ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ…

BIG NEWS : ವಿಧಾನಸಭೆಯಲ್ಲಿ ‘ಜಿ ರಾಮ್ ಜಿ’ ಕಾಯ್ದೆ ವಿರುದ್ಧದ ನಿರ್ಣಯ ಅಂಗೀಕಾರ

04/02/2026 7:24 PM

BREAKING : ಫೆ.9 ರಿಂದ ನಮ್ಮ ಮೆಟ್ರೋ ಪ್ರಯಾಣದ ಪರಿಷ್ಕೃತ ದರ ಜಾರಿ | Metro Ticket Prize Hike

04/02/2026 7:04 PM

ವಸಂತ್ ನಾಯಕ ಹತ್ಯೆ ಪ್ರಕರಣ : ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ

04/02/2026 6:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.