ದೆಹಲಿ: ಬೀದಿನಾಯಿಗಳ ಹಾವಳಿಗೆ ಪ್ರತೀ ವರ್ಷ ಅಧಿಕ ಮಂದಿ ಪ್ರಾಣ ಬಲಿಯಾತ್ತಿದ್ದಾರೆ. ಈ ಬೀದಿ ನಾಯಿಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್, ಬೀದಿ ನಾಯಿಗಳಿಗೆ ವಾಡಿಕೆಯಂತೆ ಆಹಾರ ಹಾಕುವ ಜನರನ್ನು ಅವುಗಳ ಲಸಿಕೆಯ ಜವಾಬ್ದಾರರನ್ನಾಗಿ ಮಾಡಬಹುದು ಮತ್ತು ಆ ಪ್ರಾಣಿಗಳು ಜನರ ಮೇಲೆ ದಾಳಿ ಮಾಡಿದರೆ, ಅದರ ವೆಚ್ಚವನ್ನು ಆಹಾರ ಹಾಕುವವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬೀದಿ ನಾಯಿಗಳು ಜನರನ್ನು ಕಚ್ಚಿದರೆ ಚಿಕಿತ್ಸೆಯ ವೆಚ್ಚವನ್ನು ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಭರಿಸಬೇಕು ಎಂದಿರುವ ನ್ಯಾಯಾಲಯ, ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ನಮ್ಮಲ್ಲಿ ಹೆಚ್ಚಿನವರು ನಾಯಿ ಪ್ರಿಯರು. ನಾನು ನಾಯಿಗಳಿಗೆ ಆಹಾರ ನೀಡುತ್ತೇನೆ. ಆದ್ರೆ, ಜನರು ನಾಯಿಗಳಿಗೆ ಆಹಾರ ಹಾಕುವುರೊಂದಿಗೆ ಅವುಗಳ ಕಾಳಜಿ, ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಕಾನೂನಿನ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲಲು 2015 ರ ಕೇರಳ ಹೈಕೋರ್ಟ್ ಆದೇಶವನ್ನು ಬಿಜು ಉಲ್ಲೇಖಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ. 28ಕ್ಕೆ ನ್ಯಾಯಾಲಯ ನಿಗದಿಪಡಿಸಲಾಗಿದ್ದು, ಈ ವಿಷಯದಲ್ಲಿ ಉತ್ತರಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ಹೇಳಿದೆ.
2019 ರಿಂದ ಭಾರತದಲ್ಲಿ 1.5 ಕೋಟಿಗೂ ಹೆಚ್ಚು ಪ್ರಾಣಿ ಕಡಿತ ಪ್ರಕರಣಗಳು ದಾಖಲಾಗಿವೆ ಎಂದು ಡೇಟಾ ತೋರಿಸುತ್ತದೆ.
ವಿಶೇಷವಾಗಿ ಕೇರಳ ಮತ್ತು ಮುಂಬೈನಲ್ಲಿ ಬೀದಿ ನಾಯಿಗಳನ್ನು ಕೊಲ್ಲುವ ಕುರಿತು ವಿವಿಧ ನಾಗರಿಕ ಸಂಸ್ಥೆಗಳು ಹೊರಡಿಸಿದ ಆದೇಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಅರ್ಜಿಗಳ ಬ್ಯಾಚ್ ಅನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಪುರಿ ಬೀಚ್ನಲ್ಲಿ ಅರಳಿದ ʻಬ್ರಿಟನ್ ರಾಣಿ ಎಲಿಜಬೆತ್ʼ: ಮರಳು ಕಲಾವಿದನಿಂದ ವಿಶೇಷ ಗೌರವ
BIGG NEWS : ಪ್ರವಾಹ ಪೀಡಿತ ಪ್ರದೇಶಗಳಲ್ಲಿ `ನರೇಗಾ ಯೋಜನೆ’ಯಡಿ ಪರಿಹಾರ ಕಾಮಗಾರಿಗೆ ರಾಜ್ಯ ಸರ್ಕಾರ ಆದೇಶ