ಬೆಂಗಳೂರು: ಡಿ.ಕೆ ಶಿವಕುಮಾರ್ ಟಿಕೆಟ್ ಕೊಡುವ ವಿಚಾರವಾಗಿ ಖಡಕ್ ಆಗಿ ಹೇಳಿದ್ದಾರೆ. ಕ್ಷೇತ್ರದಲ್ಲಿ ಶಾಸಕರು ಸುಮ್ಮನೆ ಮದುವೆಗೆ ಭಾಗಿಯಾಗುವುದು, ಟೇಪ್ ಕಟ್ ಮಾಡ್ಕೊಂಡು ಇದ್ರೆ ಆಗಲ್ಲ. ಅದು ಬೂತ್ ಮಟ್ಟಕ್ಕೆ ಹೋಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
BEAKING NEWS: ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ಪ್ರಕರಣ; ಎಚ್ಚೆತ್ತ ಸಿಸಿಬಿ ಪೊಲೀಸರಿಂದ ತನಿಖೆ
ನಗರದಲ್ಲಿ ಮಾತನಾಡಿದ ಅವರು, ಶಾಸಕರು ಏನೇನು ಮಾಡಬೇಕು ಅಂತ ಸುರ್ಜೆವಾಲಾ ಟಾರ್ಗೆಟ್ ಕೊಟ್ಟಿದ್ದಾರೆ. ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಕ್ಕಾಗತ್ತದೆ?.. ನನಗೆ ನಂಬರ್ ಬೇಕು, ನಮ್ಮ ಸರ್ಕಾರ ರಚನೆಯಾಗಬೇಕು. ಬೂತ್ ಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು ಅನ್ನೋದು ನನ್ನ ವಿಚಾರ.ಈ
ರೀತಿ ಕೆಲಸ ಮಾಡಿದರೆ ಮಾತ್ರ ಸಂಘಟನೆ ಆಗುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
ಇಡಿ ವಿಚಾರಣೆ ಕುರಿತು ಮಾತನಾಡಿ; ನಾನು ವಿಚಾರಣೆಗಾಗಿ ದೆಹಲಿಗೆ ಹೋಗ್ತಾ ಇದ್ದೆನೆ. ಈಗಾಗಲೇ ವಿಚಾರಣೆಗೆ ಹಾಜರು ಆಗಲು ತೀರ್ಮಾನಿಸದ್ದೇನೆ ಎಂದು ಹೇಳಿದ್ದಾರೆ.