Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಲಿತ ಜನಾಂಗಕ್ಕೆ ದೇಗುಲ ಪ್ರವೇಶ ನಿರಾಕರಣೆ : ಮದ್ದೂರು ತಹಶೀಲ್ದಾರ್ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿ

13/03/2026 10:11 PM

BREAKING : 40,000 ಮೆಟ್ರಿಕ್ ಟನ್ ‘LPG’ ಹೊತ್ತ ಭಾರತದ ಹಡಗು ಹಾರ್ಮುಜ್ ಜಲಸಂಧಿಯಿಂದ ನಿರ್ಗಮನ, ಶೀಘ್ರ ಕರಾವಳಿಗೆ ಆಗಮನ

13/03/2026 9:45 PM

BREAKING: ಮಾಜಿ ಸಚಿವ ಬೈರತಿ ಬಸವರಾಜ್ ಜೈಲಿನಿಂದ ಬಿಡುಗಡೆ

13/03/2026 9:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಾಯಿ ಹೃದಯ ಇಲ್ಲದವರು ಗುರುವಾಗಲು ಸಾಧ್ಯವಿಲ್ಲ: ರಾಮಚಂದ್ರಾಪುರ ಶ್ರೀ
KARNATAKA

ತಾಯಿ ಹೃದಯ ಇಲ್ಲದವರು ಗುರುವಾಗಲು ಸಾಧ್ಯವಿಲ್ಲ: ರಾಮಚಂದ್ರಾಪುರ ಶ್ರೀ

By kannadanewsnow0726/09/2025 7:24 PM

ಶಿವಮೊಗ್ಗ: ನಾವು ನಮ್ಮ ವಶದಲ್ಲಿರಬೇಕು. ಹಾಗಿದ್ದರೆ ಮಾತ್ರ ನೆಮ್ಮದಿ. ಮನಸ್ಸು, ದೇಹ ನಮ್ಮ ವಶದಲ್ಲಿಲ್ಲ ಎಂದಾದರೆ ಯಾವ ಸಾಧನೆಯನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ‘ನವರಾತ್ರ ನಮಸ್ಯಾ’ದ ಐದನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.

ಇಂದು ಊರು, ರಾಜ್ಯ ಜಗತ್ತು ತನ್ನ ವಶವಾಗಬೇಕು ಎನ್ನುವ ಮನಸ್ಸು ಹೊಂದಿರುವ ಮನುಷ್ಯ ತನ್ನನ್ನು ತಾನು ವಶವಿಟ್ಟುಕೊಳ್ಳಲಾಗದಿರುವ ಪರಿಸ್ಥಿತಿಯಲ್ಲಿದ್ದಾನೆ. ಕ್ಷಣಕ್ಕೂ ಚಂಚಲವಾಗುವ ಮನಸ್ಸು ನಿಯಂತ್ರಣದಲ್ಲಿಟ್ಟುಕೊಳ್ಳಲಾಗದಿರುವ ಮನುಷ್ಯ ಕನಿಷ್ಟ ದೇಹದ ಆರೋಗ್ಯವನ್ನಾದರೂ ವಶದಲ್ಲಿಟ್ಟುಕೊಂಡಿದ್ದಾನಾ ಎಂದು ಕೇಳಿದರೆ ಖಂಡಿತಾ ಇಲ್ಲ. ಎಂದರೆ ದೇಹವೂ ನಮ್ಮ ವಶದಲ್ಲಿಲ್ಲ ಹೀಗಿದ್ದೂ ಬೇರೆಯದನು ನನ್ನದಾಗಿಸಿಕೊಳ್ಳುವ ಆಸೆ ಹೊಂದುವುದು ವಿಪರ್ಯಾಸ ಎಂದ ಅವರು, ಜಗನ್ಮಾತೆ ಮಾತ್ರ ತನ್ನನ್ನು ತಾನು ವಶದಲ್ಲಿಟ್ಟುಕೊಳ್ಳುವುದಲ್ಲದೆ ಜಗತ್ತನ್ನು ವಶವಿಟ್ಟುಕೊಳ್ಳಬಲ್ಲಳು ಎಂದರು.

ತಾಯಿ ಮತ್ತು ಗುರುವಿನ ತತ್ವಗಳು ಒಂದೆ, ಅದು ವಾತ್ಸಲ್ಯ, ತಾಯಿ ಹೃದಯವಿಲ್ಲದವರು ಗುರುವಾಗುವುದಕ್ಕೆ ಸಾಧ್ಯವಿಲ್ಲ ಹಾಗೂ ಗುರು ಒಲಿಯುವುದಕ್ಕೂ ತಾಯಿಯ ಆಶೀರ್ವಾದಬೇಕು ಎಂದರು.

ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಶ್ರೀಮಠದ ಪರವಾಗಿ ಕೊಡ ಮಾಡಿದ ಸಮಾಜ ಗೌರವವನ್ನು ಜೋಗಿ ಸಮಾಜ, ಬಿಲ್ಲವ ಯಾನೆ ಪೂಜಾರ ಸಮಾಜ, ನಾಮದೇವ ಸಮಾಜ, ಒಕ್ಕಲಿಗರ ಸಮಾಜ ಹಾಗೂ ನಾಮಧಾರಿ ಸಮಾಜದ ಪರವಾಗಿ ಆಯಾ ಸಮಾಜದ ಅಧ್ಯಕ್ಷರಾದ ಸತೀಶ್ ಜೋಗಿ, ಸುಂದರ್, ರಾಘವೇಂದ್ರ, ಗುಂಡಪ್ಪ ಗೌಡ, ಕೆ.ಎಸ್. ವೆಂಕಟೇಶ್ ಸ್ವೀಕರಿಸಿದರು.

ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಂ.ಎ.ಡಿ.ಬಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಶಿಮೂಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಮತ್ತಿತರ ಪ್ರಮುಖರು ಶ್ರೀಗಳವರಿಂದ ಆಶೀರ್ವಾದ ಪಡೆದರು. ಚಿತ್ರ ಕಲಾವಿದೆ ಶ್ರೀಲಕ್ಷ್ಮಿ ಪ್ರವಚನಕ್ಕೆ ಪೂರಕವಾಗಿ ಸ್ಥಳದಲ್ಲಿಯೇ ಚಿತ್ರ ರಚಿಸಿ ಮೆಚ್ಚುಗೆಗೆ ಪಾತ್ರರಾದರು.

ನವರಾತ್ರ ನಮಸ್ಯಾ ಸಮಿತಿಯ ಶಿವರಾಮಯ್ಯ, ಲಕ್ಷ್ಮಿನಾರಾಯಣ ಸಂಪ, ಅಶೋಕ ಅತ್ತಿಸರ, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಎಂಜಿ, ರಾಮಚಂದ್ರ, ಸುಬ್ರಮಣ್ಯ ಐಸಿರಿ, ಶ್ರೀನಾಥ ಸಾರಂಗ, ರವಿ ಕೈತೋಟ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಲಲಿತಾ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ , ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ನೆರವೇರಿತು.

Those who do not have a mother's heart cannot become gurus: Ramachandrapura Sri
Share. Facebook Twitter LinkedIn WhatsApp Email

Related Posts

ದಲಿತ ಜನಾಂಗಕ್ಕೆ ದೇಗುಲ ಪ್ರವೇಶ ನಿರಾಕರಣೆ : ಮದ್ದೂರು ತಹಶೀಲ್ದಾರ್ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿ

13/03/2026 10:11 PM1 Min Read

BREAKING: ಮಾಜಿ ಸಚಿವ ಬೈರತಿ ಬಸವರಾಜ್ ಜೈಲಿನಿಂದ ಬಿಡುಗಡೆ

13/03/2026 9:33 PM1 Min Read

ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!

13/03/2026 7:45 PM1 Min Read
Recent News

ದಲಿತ ಜನಾಂಗಕ್ಕೆ ದೇಗುಲ ಪ್ರವೇಶ ನಿರಾಕರಣೆ : ಮದ್ದೂರು ತಹಶೀಲ್ದಾರ್ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿ

13/03/2026 10:11 PM

BREAKING : 40,000 ಮೆಟ್ರಿಕ್ ಟನ್ ‘LPG’ ಹೊತ್ತ ಭಾರತದ ಹಡಗು ಹಾರ್ಮುಜ್ ಜಲಸಂಧಿಯಿಂದ ನಿರ್ಗಮನ, ಶೀಘ್ರ ಕರಾವಳಿಗೆ ಆಗಮನ

13/03/2026 9:45 PM

BREAKING: ಮಾಜಿ ಸಚಿವ ಬೈರತಿ ಬಸವರಾಜ್ ಜೈಲಿನಿಂದ ಬಿಡುಗಡೆ

13/03/2026 9:33 PM

‘ನೆಹರು ಮಾತು ಕೇಳಿ’ : ಯುದ್ಧದ ಸಮಯದಲ್ಲಿ ಕಾಂಗ್ರೆಸ್ ತಪ್ಪು ಮಾಹಿತಿ ಹರಡುತ್ತಿದೆ ; ಪ್ರಧಾನಿ ಮೋದಿ

13/03/2026 9:30 PM
State News
KARNATAKA

ದಲಿತ ಜನಾಂಗಕ್ಕೆ ದೇಗುಲ ಪ್ರವೇಶ ನಿರಾಕರಣೆ : ಮದ್ದೂರು ತಹಶೀಲ್ದಾರ್ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿ

By kannadanewsnow0913/03/2026 10:11 PM KARNATAKA 1 Min Read

ಮಂಡ್ಯ :- ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಸ್ಪೃಶ್ಯತೆ ಆಚರಣೆಯಂತಹ ಅನಿಷ್ಠ ಪದ್ಧತಿ ಮಾತ್ರ ತೊಲಗಿಲ್ಲ. ಮದ್ದೂರು ತಾಲೂಕಿನ ಹುಲಿಕೆರೆ…

BREAKING: ಮಾಜಿ ಸಚಿವ ಬೈರತಿ ಬಸವರಾಜ್ ಜೈಲಿನಿಂದ ಬಿಡುಗಡೆ

13/03/2026 9:33 PM

ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!

13/03/2026 7:45 PM

ಮಕ್ಕಳ ಅಪರಾಧಗಳ ಬಗ್ಗೆ ಅರಿವು ಮೂಡಿಸಿ-ಶಿಕ್ಷಣ ನೀಡುವುದು ನಮ್ಮ ಕರ್ತವ್ಯ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

13/03/2026 7:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.