ನವದೆಹಲಿ : ಅಮೆರಿಕದ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ ನಲ್ಲಿ ನಿನ್ನೆ ರಾತ್ರಿ 8:45 ನಿಮಿಷಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದ ವೇದಿಕೆಯ ಬಳಿ ಶೂಟ್ ಔಟ್ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ದಾಳಿಕೋರ ಥಾಮಸ್ ಅಲೆನ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ.
ದಾಳಿ ಕೋರನನ್ನು ಅರೆಸ್ಟ್ ಮಾಡಿದ ಬಳಿಕ ವಿಚಾರಣೆ ನಡೆಸಿದ ಅಲ್ಲಿನ ಪೊಲೀಸ್ ಅಧಿಕಾರಿಗಳು ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುಂಚೇಯೇ ಆ ಒಂದು ಹೋಟೆಲ್ನಲ್ಲಿ ಥಾಮಸ್ ರೂಮ್ ಬುಕ್ ಮಾಡಿದ್ದ ಎಂದು ಬಂದಿದೆ. ಇದೀಗ ಭದ್ರತಾ ಸಿಬ್ಬಂದಿಗಳು ಕ್ಯಾಲಿಫೋರ್ನಿಯಾದ ಟೊರೆಂಟ್ಸ್ ನಲ್ಲಿರುವ ಥಾಮಸ್ ನಿವಾಸವನ್ನು ಸೀಜ್ ಮಾಡಿದ್ದಾರೆ ಬೆರಿಂಗ್ ಹಾಕಿ ಟೇಬಲ್ ಕಟ್ಟಿ ಸಿಬ್ಬಂದಿಗಳು ಆತನ ಮನೆಯನ್ನು ಸೀಲ್ ಮಾಡಿದ್ದಾರೆ.
ದಾಳಿಕೋರ ಅಲೈನ್ ಹಿನ್ನೆಲೆಯನ್ನು ಅಮೆರಿಕ ಪೊಲೀಸರು ಇದೀಗ ಜಾಲಾಡುತ್ತಿದ್ದಾರೆ. ಥಾಮಸ್ ಅಲೆನ್ ವಿಚಾರಣೆಯನ್ನು ಎಫ್ ಬಿ ಐ ನಡೆಸಲಿದೆ. ಸದ್ಯ ಆತನ ಮನೆಯನ್ನು ಸೀಜ್ ಮಾಡಿರುವ ಪೊಲೀಸರು ಅಕ್ಕಪಕ್ಕದ ನಿವಾಸಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಿಲ್ಟನ್ ಹೋಟೆಲ್ ನ ಆತನ ರೂಮ್ ನಲ್ಲೂ ಕೂಡ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.








