ಕೆಎನ್ಎನ್ ಡಿಜಿಟಲ್ ಡೆಸ್ಕ್: ವಾಹನ ಚಾಲನೆ ಒಂದು ತಪ್ಪಸ್ಸು. ಯಾವುದೇ ಪರೀಕ್ಷೆಯಲ್ಲಿ ಪಾಸ್ ಆದ್ರು ಮತ್ತೆ ಮತ್ತೊಂದು ಪರೀಕ್ಷೆ ಎದುರಿಸೋದಕ್ಕೆ ಅವಕಾಶವಿರುತ್ತದೆ. ಆದ್ರೇ ಡ್ರೈವಿಂಗ್ ಎನ್ನುವಂತ ಪರೀಕ್ಷೆಯಲ್ಲಿ ಒಂದು ವೇಳೆ ಫೇಲ್ ಆದ್ರೇ.. ಜೀವವೇ ಹೋಗಿ ಬಿಡುತ್ತದೆ ಎಂಬುದು ಅನೇಕರ ಮಾತು. ಜೊತೆಗೆ ಹುಷಾರಾಗಿ ವಾಹನ ಚಲಾವಣೆ ಮಾಡಿ. ಸುರಕ್ಷತೆಯ ಹೊರತಾಗಿ ಬೇರೇನು ಇಲ್ಲ ಎಂಬುದಾಗಿ ಹಲವರ ಸಲಹೆಯಾಗಿದೆ. ಹೀಗೆ ಕೇರ್ ಆಗಿ ಡ್ರೈವಿಂಗ್ ಮಾಡೋ ನಡುವೆಯೂ ಕೆಲವು ವೇಳೆ ಅಪಘಾತ ಸಂಭವಿಸಿ ಬಿಡುತ್ತದೆ. ಹಾಗಾದ್ರೇ ಯಾಕ್ ಹೀಗೆ ಆಯ್ತು.? ಅದಕ್ಕೆ ಕಾರಣ ಏನು.? ಪರಿಹಾರ ಏನು ಎನ್ನುವ ಬಗ್ಗೆ ಮುಂದೆ ಓದಿ..
ಚಾಲನೆ ವೇಳೆಯಲ್ಲಿಯೇ ಎಚ್ಚರವಿದ್ದೂ ಅಪಘಾತ ಸಂಭವಿಸೋದನ್ನು ಮನೋವಿಜ್ಞಾನದ ಪರಿಭಾಷೆಯಲ್ಲಿ ಹೈವೇ ರೋಡ್ ಹಿಪ್ನಾಸಿಸ್ ( Highway Hypnosis ) ಎಂದು ಕರೆಯುತ್ತಾರೆ. ಇದೊಂದು ಹೆಚ್ಚಿನ ಚಾಲಕರು ತಿಳಿದಿರದಂತ ದೈಹಿಕ ಸ್ಥಿತಿಯೆಂಬುದಾಗಿ ಅನೇಕರ ಮನೋವೈದ್ಯರ ಮಾತಾಗಿದೆ.
ಹಾಗಾದ್ರೇ ರೋಡ್ ಹಿಪ್ನಾಸಿಸ್ ಅಂದ್ರೇನು.?
ರೋಡ್ ಹಿಪ್ನಾಸಿಸ್ ಅಂದ್ರೇ.. ರಸ್ತೆಗೆ ವಾಹನ ಬಂದ 2.5 ಗಂಟೆಗಳ ನಂತ್ರ ಚಾಲಕನಿಗೆ ಗೊತ್ತಿರದಂತೆ ಪ್ರಾರಂಭವಾಗುವಂತ ಕ್ರಿಯೆಯಾಗಿದೆ. ಸಂವೋಹನ ಚಾಲಕನ ಕಣ್ಣುಗಳು ತೆರೆದಿರುತ್ತದೆ. ಆದ್ರೇ ಮೆದುಳು, ಕಣ್ಣು ನೋಡುವುದನ್ನು ರೆಕಾರ್ಡ್ ಮಾಡುವುದಿಲ್ಲ ಮತ್ತು ವಿಶ್ಲೇಷಿಸುವುದಿಲ್ಲದಂತ ಸ್ಥಿತಿಯಾಗಿದೆ.
ರೋಡ್ ಹಿಪ್ನಾಸಿಸ್ ನಿಂದ ಆಗುವ ಪರಿಣಾಮಗಳೇನು.?
ಬಹುತೇಕ ಚಾಲಕರು ನಿರಂತರವಾಗಿ ವಾಹನ ಚಾಲನೆ ಸಂದರ್ಭದಲ್ಲಿ ಇಂತಹ ಪ್ರಕ್ರಿಯೆಗೆ ಒಳಗಾಗುತ್ತಾರೆ. ಕಣ್ಣ ಮತ್ತು ಮೆದುಳು ಸಂಪರ್ಕ ಕಳೆದುಕೊಂಡಾಗ, ವಿಶ್ಲೇಷಣೆಯಿಂದ ಮುಂದೆ ಆಗುವುದೇ ದೊಡ್ಡ ಪರಿಣಾಮವಾಗಿವೆ. ಈ ಸಂದರ್ಭದಲ್ಲಿಯೇ ಚಾಲನೆಯಲ್ಲಿರುವಂತ ವಾಹನ ಮುಂದೆ ಸಾಗುವಂತ ವಾಹನಗಳ ಹಿಂಬದಿಗೆ ಡಿಕ್ಕಿಯಾಗಿ ಅಪಘಾತದಂತ ಪ್ರಕರಣಗಳು ವರದಿಯಾಗಲಿವೆ.
ಇನ್ನೂ ರಸ್ತೆ ಹಿಪ್ನಾಸಿಸ್ ನಿಮ್ಮ ಮುಂದೆ ನಿಲ್ಲಿಸಿದ ವಾಹನ ಅಥವಾ ಟ್ರಕ್ ಗೆ ಹಿಂಪದಿಯ ಕ್ರ್ಯಾಶ್ ಗಳಿಗೆ ಮೊದಲು ಕಾರಣವಾದ ಸಂದರ್ಭದಲ್ಲಿನ 15 ನಿಮಿಷಗಳು ಏನ್ ಆಯಿತು ಎಂಬುದೇ ಚಾಲಕನಿಗೆ ನೆನಪು ಇರೋದಿಲ್ಲವಂತೆ. ಇದಲ್ಲದೇ ಸಾಮಾನ್ಯವಾಗಿ ಇಂತಹ ಅಪಘಾತಗಳು 140 ಕಿಲೋಮೀಟರ್ ಗಿಂತ ಹೆಚ್ಚು ಸ್ಪೀಡ್ ಇದ್ದಂತ ಸಂದರ್ಭದಲ್ಲಿಯೂ ಆಗಲಿವೆಯಂತೆ.
ರೋಡ್ ಹಿಪ್ನಾಸಿಸ್ ನಿಂದ ರಕ್ಷಣೆ ಹೇಗೆ.?
ವಾಹನ ಚಾಲಕರಾದಂತ ನೀವು ರೋಡ್ ಹಿಪ್ನಾಸಿಸ್ ನಿಂದ ರಕ್ಷಣೆ ಪಡೆಯಲು ಮಾಡಬೇಕಾದಂತ ಮೊದಲ ಕೆಲಸ ಪ್ರತಿ 2.5 ಗಂಟೆಗಳಿಗೊಮ್ಮ ವಾಹನವನ್ನು ನಿಲ್ಲಿಸುವುದು. ಅಲ್ಲದೇ ವಾಹನದಿಂದ ಇಳಿದು ಕೊಂಚ ಓಡಾಡುವುದು, ಟೀ, ಕಾಫಿ ಕುಡಿಯುವುದು ಅತ್ಯಾವಶ್ಯಕವಾಗಿದೆ.
ಇದಲ್ಲದೇ ಚಾಲನೆ ಮಾಡುವಾಗಲೇ ಕೆಲವು ಸ್ಥಳಗಳು ಮತ್ತು ವಾಹನಗಳನ್ನು ಗಮನಿಸುವುದು. ಆ ಬಗ್ಗೆ ನೆನಪಿಟ್ಟುಕೊಳ್ಳುವುದು ಮುಖ್ಯವಾಗಿದೆ. ಕಳೆದ 15 ನಿಮಿಷಗಳಿಂದ ನಿಮಗೆ ಏನು ನೆನಪಿಲ್ಲದಿದ್ದರೇ, ನೀವು ನಿಮ್ಮ ಮತ್ತು ಪ್ರಯಾಣಿಕರನ್ನು ಸಾವಿನತ್ತ ಕೊಂಡೊಯ್ಯುತ್ತಿದ್ದೀರಿ ಎಂಬುದೇ ಅರ್ಥವಾಗಿದೆ.
ಈ ಕಾರಣದಿಂದಾಗಿ ಚಾಲನಕನು ವಾಹನವನ್ನು ಆಗಾಗ ನಿಲ್ಲಿಸಬೇಕು. ವಿಶ್ರಾಂತಿಯನ್ನು ಪಡೆಯಬೇಕು. ಪ್ರತಿ 2.5 ಗಂಟೆಗೊಮ್ಮ ನಿಲ್ಲಿಸಿ 5-6 ನಿಮಿಷ ನಡೆಯಬೇಕು. ಆಗ ಮನಸ್ಸು ಮತ್ತು ಕಣ್ಣು ಸಂಪರ್ಕಪಡೆದು ಸುರಕ್ಷಿತವಾಗಿ ಚಾಲನೆ ಮಾಡಲು ಸಹಾಯವಾಗುತ್ತದೆ. ಸೋ ಈ ಬಗ್ಗೆ ಎಚ್ಚರಿಕೆ ವಹಿಸಿ, ಸುರಕ್ಷಿತವಾಗಿ ಚಾಲನೆ ಮಾಡಿ..