ಕೆಎನ್ಎನ್ ಡಿಜಿಟಲ್ ಡೆಸ್ಕ್: 1983ರಲ್ಲಿ ಬದನವಾಳು ಗ್ರಾಮದಲ್ಲಿ ನಡೆದ ಹತ್ಯಾಕಾಂಡದ ನಂತರ ಎರಡೂ ಸಮುದಾಯಗಳು 29 ವರ್ಷಗಳಲ್ಲಿ ಎಂದೂ ಕೂಡ ಒಟ್ಟಿಗೆ ಕೂತು ಊಟ ಮಾಡಿರಲಿಲ್ಲ. ಆದರೆ ಇಂದು ಮೂರು ದಶಕಗಳಲ್ಲಿ ಪ್ರಪ್ರಥಮ ಬಾರಿಗೆ ಈ ಎರಡೂ ಸಮುದಾಯಗಳು ಒಟ್ಟಿಗೆ ಸೌಹಾರ್ದಯುತವಾಗಿ ಸಮಾನವಾಗಿ ಕುಳಿತು ಊಟ ಮಾಡಿದ್ದು ಅಭೂತಪೂರ್ವ ಘಟನೆಗೆ ಸಾಕ್ಷಿಯಾಗಿದೆ.
ಭೋಪಾಲ್: 1 ವರ್ಷದ ಬಾಲಕಿಯ ಶ್ವಾಸನಾಳ ಸೇರಿದ್ದ ʻಹೇರ್ ಪಿನ್ʼ ಹೊರ ತೆಗೆದ ವೈದ್ಯರು, ಶಸ್ತ್ರಚಿಕಿತ್ಸೆ ಯಶಸ್ವಿ
ಬದನವಾಳು ಗ್ರಾಮದ ಎರಡೂ ಸಮುದಾಯಗಳ ಜನರೊಂದಿಗೆ ಇಂದು ಕಾಂಗ್ರೆಸ್ ಪಕ್ಷದ ( Congress Party ) ನಾಯಕರಾದ ರಾಹುಲ್ ಗಾಂಧಿ ( Rahul Gandhi ), ಕೆ ಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ( Siddaramaiah ), ಡಿಕೆ ಶಿವಕುಮಾರ್ ( DK Shivakumar ) ಹಾಗೂ ಹಲವಾರು ಮುಖಂಡರು ಈ ಸೌಹಾರ್ದಯುತ ಸಂದರ್ಭದಲ್ಲಿ ಜೊತೆಯಾಗಿದ್ದರು. ರಾಹುಲ ಗಾಂಧಿ ಈ ಸಮುದಾಯಗಳ ಭವಿಷ್ಯದ ಪ್ರತೀಕವಾದ ಮಕ್ಕಳೊಂದಿಗೆ ಕುಳಿತು ಊಟ ಮಾಡಿದರು.
ಇದು ನಿಜವಾದ ಭಾರತ ಜೋಡೋ ( Bharat Jodo Yatra ), ಇದು ನಿಜವಾದ ಭಾರತ ಐಕ್ಯತೆಯ ಸಂದೇಶ. ಸಮುದಾಯಗಳ ಹಾಗೂ ಜನರ ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ, ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಾಣ ಮಾಡುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಹೀಗೇ ಮುಂದುವರೆಯಲಿದೆ.