ಬೆಂಗಳೂರು: ಸೈಬರ್ ವಂಚನೆಗೆ ( Syber Crime ) ಒಳಗಾದವರ ನೆರವಿಗಾಗಿ ರಾಷ್ಟ್ರೀಯ ಸೈಬರ್ ಸಹಾಯವಾಣಿ ಆರಂಭಿಸಲಾಗಿದೆ. ನೀವು ಸೈಬರ್ ವಂಚನೆಗೆ ಒಳಗಾದ ಸಂದರ್ಭದಲ್ಲಿ ಗೋಲ್ಡನ್ ಅವರ್ ( Golden Hour ) ಎಂಬುದಾಗಿ ವಂಚನೆಗೆ ಒಳಗಾದ ಕೂಡಲೇ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ರೆ ನಿಮ್ಮ ಹಣ ಮರಳಿ ಬರಲಿದೆ. ಅದು ಹೇಗೆ ಅಂತ ಮುಂದೆ ಓದಿ.
ದೇಶದಲ್ಲಿ ಸೈಬರ್ ವಂಚನೆಗೆ ಒಳಗಾದವರ ನೆರವಿಗೆಂದು ರಾಷ್ಟ್ರೀಯ ಸೈಬರ್ ಸಹಾಯವಾಣಿ ಸ್ಥಾಪಿಸಲಾಗಿದೆ. ಇದನ್ನು ಸ್ಥಾಪಿಸಿ ನಾಲ್ಕು ವರ್ಷ ಕಳೆದಿದ್ದರೂ ಗೋಲ್ಡನ್ ಅವರ್ ನಲ್ಲಿ ಅಂದರೆ ಕೃತ್ಯ ನಡೆದ ಒಂದು ತಾಸಿನ ಒಳಗಾಗಿ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯಿಂದ ಕದ್ದ ಹಣವನ್ನು ಮರಳಿ ಪಡೆಯಬಹುದಾಗಿದೆ. ಇದು ತಿಳಿಯದಂತ ಅನೇಕರು ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವುದೇ ವಿರಳವಾಗಿದೆ.
ಎನ್ ಸಿ ಆರ್ ಪಿ ಸಹಾಯವಾಣಿ ಸಂಖ್ಯೆಗೆ ಸೈಬರ್ ವಂಚನೆಗೆ ಒಳಗಾದವರು ಈವರೆಗೆ ನೆರವು ಕೋರಿರೋದು ಮಾತ್ರ ಶೇ.14.36ರಷ್ಟು ಜನರು ಮಾತ್ರವೇ ಆಗಿದ್ದಾರೆ. 2021ರಲ್ಲಿ ಪ್ರತ್ಯೇಕ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಲಾಗಿತ್ತು. ಈ ಸಂಖ್ಯೆ ಸ್ಥಾಪಿಸಿದ ಆರಂಭಿಕ ವರ್ಷದಲ್ಲಿ ಶೇ.7.08 ಮಂದಿ ಕರೆ ಮಾಡಿ ವಂಚನೆ ಬಗ್ಗೆ ದೂರು ನೀಡಿದ್ದಾರೆ.
2023ರಲ್ಲಿ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದವರ ಸಂಖ್ಯೆ ಶೇ.11.7ಕ್ಕೆ ಏರಿಕೆಯಾಗಿದ್ದರೇ, 2024ರಲ್ಲಿ ಶೇ.9.43ರಷ್ಟು ಮಂದಿ ಮಾತ್ರವೇ ಆಗಿದ್ದಾರೆ. ಹಾಗಂತ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಏನು ಕಡಿಮೆಯಾಗಿಲ್ಲ.
ಏನಿದು ಗೋಲ್ಡನ್ ಅವರ್ ಸಹಾಯವಾಣಿ ಸಂಖ್ಯೆ?
ಸೈಬರ್ ವಂಚನೆಗೆ ಒಳಗಾದವರ ನೆರವಿಗೆಂದು ಸ್ಥಾಪಿಸಿರುವುದೇ ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930 ಆಗಿದೆ. ಕೃತ್ಯ ನಡೆದ ಒಂದು ತಾಸಿನ ಒಳಗಾಗಿ ಸೈಬರ್ ವಂಚನೆಗೆ ಒಳಗಾದವರು ಕರೆ ಮಾಡಿ, ಮಾಹಿತಿ ನೀಡಿದರೇ, ವಂಚಕರ ಬ್ಯಾಂಕ್ ಖಾತೆಯನ್ನೇ ಪ್ರೀಜ್ ಮಾಡಿ, ಹಣವನ್ನು ಸಂತ್ರಸ್ತರಿಗೆ ಮರಳಿಸುವಂತ ಪ್ರಯತ್ನವನ್ನು ಮಾಡಲಾಗುತ್ತದೆ.
ಇನ್ನೂ ನೀವು ಸೈಬರ್ ವಂಚನೆಗೆ ಒಳಗಾದ ಕೆಲವೇ ನಿಮಿಷಗಳಲ್ಲಿ ಈ ಸಂಖ್ಯೆಗೆ ಮಾಹಿತಿ ನೀಡದರೇ ವರ್ಗಾವಣೆಯಾದ ಹಣವನ್ನು ಬ್ಯಾಂಕ್ ಖಾತೆಯಲ್ಲೇ ತಡೆ ಹಿಡಿಯಲು ಸಾಧ್ಯವಾಗಲಿದೆ.
ಡಿಜಿಟಲ್ ಅರೆಸ್ಟ್, ಹೂಡಿಕೆ, ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಅಥವಾ ಅಪರಿಚಿತರಿಗೆ ಒಟಿಪಿ ನೀಡಿ ವಂಚನೆಗೆ ಒಳಗಾದವರು ತಕ್ಷಣವೇ 1930ಗೆ ಕರೆ ಮಾಡಿ, ಮಾಹಿತಿ ನೀಡಿದ್ರೇ ಸೈಬರ್ ವಂಚಕರು ಕದ್ದ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂಬುದು ಪೊಲೀಸರ ಮಾಹಿತಿ.
ಬಿಜೆಪಿ ನಾಯಕರೇ ‘ಲಾಲ್‌ಬಾಗ್’ ಬಗ್ಗೆ ನಿಮ್ಮದು ಕಾಳಜಿಯೋ? ರಾಜಕೀಯವೋ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








