ಬಳ್ಳಾರಿ: ಅನೇಕ ಪೋಷಕರು ತಮ್ಮ ಮಗಳಿಗೆ ವಿದೇಶದಲ್ಲಿ ಕೆಲಸದಲ್ಲಿರೋ ಹುಡುಗನನ್ನು ಹುಡುಕ್ತಾ ಇರುತ್ತಾರೆ. ಯುವತಿಯರೂ ಅಷ್ಟೇ ಫಾರಿನ್ ನಲ್ಲಿರೋ ಯಂಗ್ ಬಾಯ್ ಬೇಕು ಅನ್ನೋ ನಿರೀಕ್ಷೆಯಲ್ಲಿಯೂ ಇರ್ತಾರೆ. ಆದ್ರೇ.. ಹೀಗೆ ನಿರೀಕ್ಷೆಯಲ್ಲಿದ್ದು, ಸಿಕ್ಕೇ ಬಿಟ್ಟ ಎಂಬುದಾಗಿ ಮದುವೆ ಮಾಡಿಕೊಟ್ಟಂತ ಯುವತಿಯ ಪರಿಸ್ಥಿತಿ, ಪೋಷಕರ ಪರಿಸ್ಥಿತಿ ಏನ್ ಆಯ್ತು ಎನ್ನುವ ಬಗ್ಗೆ ಮುಂದೆ ಸುದ್ದಿ ಓದಿ. ಅಂತಹ ಗಂಡು ಬೇಕಾ ಅಂತ ನೀವೆ ತೀರ್ಮಾನ ಮಾಡಿ.
BIG ALEART: ತನ್ನ ಗ್ರಾಹಕರಿಗೆ SBI ನೀಡಿದೆ ಈ ಮಹತ್ವದ ಮಾಹಿತಿ, ಹೀಗೆ ಮಾಡದಂತೆ ಸೂಚನೆ
ಹೈದರಾಬಾದ್ ಮೂಲದ ವೈದ್ಯೆ ಮೌನಿಕಾ ಕುಟುಂಬಸ್ಥರು ವಿದೇಶದಲ್ಲಿರುವಂತ ಹುಡುಗನನ್ನು ಹುಡುಕ್ತಾ ಇದ್ದರು. ಅಂತಿಮವಾಗಿ ಬಳ್ಳಾರಿ ಮೂಲದ ರಘುರಾಮ್ ಎಂಬಾತ ಅಮೇರಿಕಾದಲ್ಲಿದ್ದಾನೆ. ಸಂಬಂಧ ಚೆನ್ನಾಗಿದೆ ಎಂಬುದಾಗಿ ನಿಶ್ಚಯಿಸಿ, ರಘುರಾಮ್ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ, ಮದುವೆ ಕೂಡ ಗೊತ್ತು ಮಾಡಿದ್ರು.
2019ರಲ್ಲಿ ಬಳ್ಳಾರಿ ಮೂಲದ ರಘುರಾಮ್ ಹಾಗೂ ಹೈದರಾಬಾದ್ ಮೂಲಕ ವೈದ್ಯೆ ಮೌನಿಕಾಗೆ ವಿವಾಹ ಮಾಡಿಕೊಡಲಾಗಿದೆ. ವಿವಾಹದ ಸಂದರ್ಭದಲ್ಲಿ ಅಮೇರಿಕಾದಲ್ಲಿ ಕೆಲಸದಲ್ಲಿರೋ ಹುಡುಗ ಎನ್ನೋ ಕಾರಣದಿಂದಲೇ ಇರಬೇಕು ವರದಕ್ಷಿಣಿಯಾಗಿ ಬರೋಬ್ಬರಿ 50 ಲಕ್ಷ ಹಣ, 1 ಕೆಜಿ ಬಂಗಾರ ಹಾಗೂ ಅರ್ಧ ಕೆಜಿ ಬೆಳ್ಳಿ ನೀಡಿದ್ದಾರೆ.
ಆದ್ರೇ ಮದುವೆಯಾದ ನಂತ್ರ ಅಮೇರಿಕಾಗೆ ಕೆಲಸದಲ್ಲಿದ್ದೇನೆ ಎಂದು ಹೇಳಿದ್ದಂತ ರಘುರಾಮ್ ಹೋಗಿಲ್ಲ. ಯಾವಾಗ ಹೋಗೋದು ಎಂಬುದಾಗಿ ಕೇಳಿದಂತ ಪತ್ನಿ ಮೌನಿಕಾ, ಅವರ ಪೋಷಕರಿಗೂ ಸರಿಯಾಗಿ ಉತ್ತರಿಸಿಲ್ಲ. ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೇ, ಮತ್ತಷ್ಟು ವರದಕ್ಷಿಣೆಗಾಗಿ ರಘುರಾಮ್ ಹಾಗೂ ಕುಟುಂಬಸ್ಥರಿಂದ ವೈದ್ಯೆ ಮೌನಿಕಾಗೆ ಕಿರುಕುಳ ಹೆಚ್ಚಾಗಿದೆ.
ಪತಿ, ಆತನ ಕುಟುಂಬಸ್ಥರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮೌನಿಕಾ, ಅವರ ಮನೆಯನ್ನು ಬಿಟ್ಟು ಬಂದಿದ್ದಾರೆ. ತನ್ನ ಕಷ್ಟವನ್ನು ಪೋಷಕರಿಗೆ ಹೇಳಿದ್ದರಿಂದ ನೇರವಾಗಿ ತೆರಳಿ ಪೊಲೀಸ್ ಠಾಣೆಗೆ ತೆರಳಿ ರಘುರಾಮ್ ಹಾಗೂ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾರೆ.
2029ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಎಸ್ಬಿಐ ವರದಿ
ಆದ್ರೇ ಮೌನಿಕಾ ನೀಡಿದ ದೂರಿಗೆ ತಲೆ ಕೆಡಿಸಿಕೊಳ್ಳದೇ ಮತ್ತೊಂದು ಮದುವೆಗೆ ಸನ್ನದ್ಧನಾಗಿದ್ದಾನೆ. ಈ ವಿಷಯ ತಿಳಿದು ರಘುರಾಮ್ ಮನೆಗೆ ತೆರಳಿ ಮೌನಿಕಾ ಹಾಗೂ ಪೋಷಕರು ಕೇಳಿದ್ರೇ.. ಅವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇದೇ ಸ್ಥಿತಿಯಲ್ಲಿ ಪೊಲೀಸ್ ಠಾಣೆಗೆ ತೆರಳಿ ಕೊಲೆ ಯತ್ನ, ಬೆದರಿಕೆ ದೂರನ್ನು ರಘುರಾಮ್ ಹಾಗೂ ಪೋಷಕರ ವಿರುದ್ಧ ದಾಖಲಿಸಿದ್ದಾರೆ.
ಇದೀಗ ಮೌನಿಕಾ ನೀಡಿದಂತ ದೂರಿನ ಆಧಾರದ ಮೇಲೆ ರಘುರಾಮ ರೆಡ್ಡಿ, ಆತನ ತಂದೆ ನಾಗೀರೆಡ್ಡಿ ಹಾಗೂ ಸಹೋದರ ಹರೀಶ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲದೇ 7 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇನ್ನುಳಿದವರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದಾರೆ.