Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಕಬ್ಬಿನ ಹಣವನ್ನು ಪಾವತಿ ಮಾಡಿ: ಮಂಡ್ಯ ಡಿಸಿ ಸೂಚನೆ

11/03/2026 6:04 PM

BREAKING : ಭಯಪಟ್ಟು ಖರೀದಿಸ್ಬೇಡಿ, ಬುಕ್ ಮಾಡಿದ 2.5 ದಿನಗಳಲ್ಲಿ ‘LPG ಸಿಲಿಂಡರ್’ ತಲುಪಿಸಲಾಗುವುದು ; ಕೇಂದ್ರ ಸರ್ಕಾರ ಅಭಯ

11/03/2026 5:56 PM

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್‌ ಮಾರ್ಗಸೂಚಿ ಅಳವಡಿಸಲು ಚಿಂತನೆ: ಕಾರ್ಯದರ್ಶಿ ರೋಹಿಣಿ ಸಿಂಧೂರಿ

11/03/2026 5:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್‌ ಮಾರ್ಗಸೂಚಿ ಅಳವಡಿಸಲು ಚಿಂತನೆ: ಕಾರ್ಯದರ್ಶಿ ರೋಹಿಣಿ ಸಿಂಧೂರಿ
KARNATAKA

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್‌ ಮಾರ್ಗಸೂಚಿ ಅಳವಡಿಸಲು ಚಿಂತನೆ: ಕಾರ್ಯದರ್ಶಿ ರೋಹಿಣಿ ಸಿಂಧೂರಿ

By kannadanewsnow0911/03/2026 5:53 PM

ಬೆಂಗಳೂರು : ಕರ್ನಾಟಕ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನೀತಿಯಲ್ಲಿ ಸ್ಥಳೀಯ ಉತ್ಪಾದಕರನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಂಎಸ್‌ಎಂಇಗಳಿಗಾಗಿ ನಿರ್ದಿಷ್ಟ ಎಐ (AI) ಮತ್ತು ಡಿಜಿಟಲ್ ಮಾರ್ಗಸೂಚಿಯನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಎಂಎಸ್‌ಎಂಇ, ಸಕ್ಕರೆ ಹಾಗೂ ಜವಳಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ರೋಹಿಣಿ ಸಿಂಧೂರಿ ತಿಳಿಸಿದರು.

ಇಂದು ಕಾಸಿಯಾ ಭವನದಲ್ಲಿ ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ಒಟ್ಟು ಕೈಗಾರಿಕಾ ಘಟಕಗಳ ಪೈಕಿ ಶೇ.97 ರಷ್ಟು ಎಂಎಸ್‌ಎಂಇಗಳೀವೆ. ರಾಜ್ಯದಲ್ಲಿ ಅತಿಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿರುವ ಕ್ಷೇತ್ರ ಇವುಗಳದ್ದಾಗಿದೆ. ನಮ್ಮ ಸರ್ಕಾರ ಇವುಗಳ ಮಹತ್ವವನ್ನು ಅರಿತು ಪ್ರತ್ಯೇಕ ನೀತಿಯನ್ನು ರಚಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದರ ಮೊದಲ ಹಂತವಾಗಿ ಇಂದು ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗುವುದು. ಈ ಮೂಲಕ ಎಂಎಸ್‌ಎಂಇ ವಲಯ ಸಮಗ್ರ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ನೀತಿಯನ್ನು ರೂಪಿಸುವ ಉದ್ದೇಶವನ್ನು ನಮ್ಮ ಇಲಾಖೆ ಹೊಂದಿದೆ ಎಂದರು.

ಸ್ಥಳೀಯ ಉತ್ಪಾದಕರನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಹೊಸ ನೀತಿ ತಂತ್ರಜ್ಞಾನವನ್ನು ಕೇಂದ್ರಬಿಂದುವನ್ನಾಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ರಾಜ್ಯವನ್ನು ಮುಂಚೂಣೀಯಲ್ಲಿ ನಿಲ್ಲಿಸಲಿದೆ. ಈ ನಿಟ್ಟಿನಲ್ಲಿ ಎಂಎಸ್‌ಎಂಇಗಳಿಗಾಗಿ ನಿರ್ದಿಷ್ಟ ಎಐ (AI) ಮತ್ತು ಡಿಜಿಟಲ್ ಮಾರ್ಗಸೂಚಿಯನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಈ ನೀತಿಯನ್ನು ರೂಪಿಸುವ ಮೂಲಕ ಕರ್ನಾಟಕ ರಾಜ್ಯದ ಕೈಗಾರಿಕೆಗಳ ಬೆನ್ನೆಲುಬಾಗಿರುವಂತಹ ಎಂಎಸ್‌ಎಂಇ ಗಳ ಅಭಿವೃದ್ದಿಗೆ ಅನುವು ಮಾಡಿಕೊಡಲಿದೆ. ಈ ನೀತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಉದ್ಯಮಿಗಳ ಸಲಹೆಗಳ ಅಗತ್ಯವಿದೆ. ನಮ್ಮ ಇಲಾಖೆ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲಿದೆ. ಉದ್ಯಮಿಗಳೂ ಹಾಗೂ ಉದ್ಯಮ ಸಂಸ್ಥೆಗಳು ಉತ್ತಮ ನೀತಿಯನ್ನು ಹೊರತರುವಲ್ಲಿ ಅಗತ್ಯ ಸಹಕಾರ ನೀಡಲಿ ಎಂದು ಕರೆ ನೀಡಿದರು.

ಕಾರ್ಯಾಗಾರದಲ್ಲಿ ಕಾಸಿಯಾ ಅಧ್ಯಕ್ಷರಾದ ಬಿ.ಆರ್‌ ಗಣೇಶ್‌ ರಾವ್‌, ಎಂಎಸ್‌ಎಂಇ ಇಲಾಖೆ ನಿರ್ದೇಶಕರಾದ ಡಾ ಸತೀಶ ಬಿ.ಸಿ, ಪೀಣ್ಯ ಕೈಗಾರಿಕಾ ಪ್ರದೇಶದ ಅಧ್ಯಕ್ಷರಾದ ಡಿ.ಪಿ ದಾನಪ್ಪ, ಅವೇಕ್‌ ಅಧ್ಯಕ್ಷೆ ಭುವನೇಶ್ವರಿ ಸೇರಿದಂತೆ ನೂರಾರು ಉದ್ಯಮಿಗಳೂ ಪಾಲ್ಗೊಂಡಿದ್ದರು.

BIG NEWS: ರಾಜ್ಯದ ‘ನಿಗಮ-ಮಂಡಳಿ ಅಧ್ಯಕ್ಷ’ರಿಗೆ ಸಿಗಲಿವೆ ಇಷ್ಟೆಲ್ಲಾ ಸವಲತ್ತುಗಳು!

ಯಾವುದೇ ಹೂಡಿಕೆ ಮಾಡುವ ಅಗತ್ಯವಿಲ್ಲ ; ದಿನಕ್ಕೆ 2 ಗಂಟೆ ಹೀಗೆ ಮಾಡಿ, ತಿಂಗಳಿಗೆ 1 ಲಕ್ಷ ರೂ. ಖಚಿತ.!

Share. Facebook Twitter LinkedIn WhatsApp Email

Related Posts

ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಕಬ್ಬಿನ ಹಣವನ್ನು ಪಾವತಿ ಮಾಡಿ: ಮಂಡ್ಯ ಡಿಸಿ ಸೂಚನೆ

11/03/2026 6:04 PM1 Min Read

BIG NEWS: ರಾಜ್ಯದ ‘ನಿಗಮ-ಮಂಡಳಿ ಅಧ್ಯಕ್ಷ’ರಿಗೆ ಸಿಗಲಿವೆ ಇಷ್ಟೆಲ್ಲಾ ಸವಲತ್ತುಗಳು!

11/03/2026 5:41 PM1 Min Read

ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

11/03/2026 5:34 PM2 Mins Read
Recent News

ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಕಬ್ಬಿನ ಹಣವನ್ನು ಪಾವತಿ ಮಾಡಿ: ಮಂಡ್ಯ ಡಿಸಿ ಸೂಚನೆ

11/03/2026 6:04 PM

BREAKING : ಭಯಪಟ್ಟು ಖರೀದಿಸ್ಬೇಡಿ, ಬುಕ್ ಮಾಡಿದ 2.5 ದಿನಗಳಲ್ಲಿ ‘LPG ಸಿಲಿಂಡರ್’ ತಲುಪಿಸಲಾಗುವುದು ; ಕೇಂದ್ರ ಸರ್ಕಾರ ಅಭಯ

11/03/2026 5:56 PM

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್‌ ಮಾರ್ಗಸೂಚಿ ಅಳವಡಿಸಲು ಚಿಂತನೆ: ಕಾರ್ಯದರ್ಶಿ ರೋಹಿಣಿ ಸಿಂಧೂರಿ

11/03/2026 5:53 PM

ತೈಲ ಬಿಕ್ಕಟ್ಟು ನಿರ್ವಹಣೆಗೆ ಜಪಾನ್ ಮುಂದು: ಮೀಸಲು ತೈಲ ಬಿಡುಗಡೆ ಮಾಡಿದ ಮೊದಲ G7 ದೇಶ

11/03/2026 5:49 PM
State News
KARNATAKA

ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಕಬ್ಬಿನ ಹಣವನ್ನು ಪಾವತಿ ಮಾಡಿ: ಮಂಡ್ಯ ಡಿಸಿ ಸೂಚನೆ

By kannadanewsnow0911/03/2026 6:04 PM KARNATAKA 1 Min Read

ಮಂಡ್ಯ: ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳೆರಡು ಸೇರಿ ಪ್ರತಿ ಟನ್ ಕಬ್ಬಿಗೆ ಬಾಕಿ ನೀಡಬೇಕಾಗಿರುವ ರೂ 100…

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್‌ ಮಾರ್ಗಸೂಚಿ ಅಳವಡಿಸಲು ಚಿಂತನೆ: ಕಾರ್ಯದರ್ಶಿ ರೋಹಿಣಿ ಸಿಂಧೂರಿ

11/03/2026 5:53 PM

BIG NEWS: ರಾಜ್ಯದ ‘ನಿಗಮ-ಮಂಡಳಿ ಅಧ್ಯಕ್ಷ’ರಿಗೆ ಸಿಗಲಿವೆ ಇಷ್ಟೆಲ್ಲಾ ಸವಲತ್ತುಗಳು!

11/03/2026 5:41 PM

ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

11/03/2026 5:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.