Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಪೈಲಟ್ ಎಡವಟ್ಟು, ಡಿಕೆಶಿ ಲ್ಯಾಂಡ್ ಆಗಬೇಕಿದ್ದ ಕಡೆ ಇಳಿದ ನಟ ಕಿಚ್ಚ ಸುದೀಪ್ ಹೆಲಿಕಾಪ್ಟರ್!

03/05/2026 5:26 PM

BREAKING: ಡಿಕೆಶಿ, ಕಿಚ್ಚ ಸುದೀಪ್‌ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ

03/05/2026 5:23 PM

ಬೆಂಗಳೂರಲ್ಲಿ 10 ನಿಮಿಷ ತಡವಾಗಿ ಬಂದಿದ್ದಕ್ಕೆ, ಇಬ್ಬರು ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆ ಬರೆಯಲು ನಿರಾಕರಿಸಿದ ಸಿಬ್ಬಂದಿ!

03/05/2026 5:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕರ್ನಾಟಕದಲ್ಲಿ 1ನೇ ತರಗತಿಗೆ ದಾಖಲಾತಿಗೆ 60 ದಿನ ವಯೋಮಿತಿ ಸಡಿಲಿಸಿ ಸರ್ಕಾರ ಅಧಿಕೃತ ಆದೇಶ
KARNATAKA

BREAKING: ಕರ್ನಾಟಕದಲ್ಲಿ 1ನೇ ತರಗತಿಗೆ ದಾಖಲಾತಿಗೆ 60 ದಿನ ವಯೋಮಿತಿ ಸಡಿಲಿಸಿ ಸರ್ಕಾರ ಅಧಿಕೃತ ಆದೇಶ

By kannadanewsnow0910/04/2026 4:17 PM

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 60 ದಿನಗಳ ರಿಯಾಯಿತಿ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಏನಿದು ಹೊಸ ಆದೇಶ?

ರಾಜ್ಯ ಶಿಕ್ಷಣ ನೀತಿಯನ್ವಯ, ಒಂದನೇ ತರಗತಿ ದಾಖಲಾತಿಗೆ ಜೂನ್ 1ನೇ ತಾರೀಖಿಗೆ ಮಗುವಿಗೆ ಕನಿಷ್ಠ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮದಿಂದ ಅನೇಕ ಮಕ್ಕಳಿಗೆ ಶೈಕ್ಷಣಿಕ ವರ್ಷ ನಷ್ಟವಾಗುತ್ತಿರುವುದನ್ನು ಗಮನಿಸಿದ ಪೋಷಕರು ವಯೋಮಿತಿ ಸಡಿಲಿಕೆಗೆ ರಾಜ್ಯಾದ್ಯಂತ ಸತತವಾಗಿ ಮನವಿ ಸಲ್ಲಿಸಿದ್ದರು. ಪೋಷಕರ ಈ ಕೋರಿಕೆಯನ್ನು ಪುರಸ್ಕರಿಸಿರುವ ಸರ್ಕಾರ, ಕೇವಲ 2026-27ನೇ ಸಾಲಿಗೆ ಸೀಮಿತವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಿದೆ.

ಯಾವ ಮಕ್ಕಳಿಗೆ ಅನ್ವಯವಾಗುತ್ತದೆ?

  • 60 ದಿನಗಳ ಸಡಿಲಿಕೆ: ಶೈಕ್ಷಣಿಕ ವರ್ಷದ ಪ್ರಾರಂಭದ ದಿನಾಂಕವಾದ ಜೂನ್ 1ಕ್ಕೆ 6 ವರ್ಷ ಪೂರ್ಣಗೊಳ್ಳಲು ಗರಿಷ್ಠ 60 ದಿನಗಳು ಬಾಕಿ ಇರುವ ಮಕ್ಕಳನ್ನು ಕೂಡ ಈ ಬಾರಿ ಒಂದನೇ ತರಗತಿಗೆ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

  • ಲೆಕ್ಕಾಚಾರದ ವಿಧಾನ: ಮಗುವಿನ ಜನ್ಮದಿನವು ಜೂನ್ 1 ರಿಂದ ಮುಂದಿನ 60 ದಿನಗಳ ಒಳಗಡೆ ಬರುವಂತಿದ್ದರೆ, ಅಂತಹ ಮಗುವಿಗೆ ಜೂನ್ 1 ರಂದೇ ಆರು ವರ್ಷ ತುಂಬಿದೆ ಎಂದು ಪರಿಗಣಿಸಿ ಶಾಲೆಗೆ ಸೇರಿಸಿಕೊಳ್ಳಬಹುದು.

  • ಶೈಕ್ಷಣಿಕ ವರ್ಷ: ಈ ವಿಶೇಷ ರಿಯಾಯಿತಿಯು ಕೇವಲ 2026-27ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಜಾರಿಗೆ ಕಟ್ಟುನಿಟ್ಟಿನ ಸೂಚನೆ:

ಈ ಹೊಸ ಬದಲಾವಣೆಗೆ ತಕ್ಕಂತೆ ಶಾಲಾ ದಾಖಲಾತಿ ತಂತ್ರಾಂಶವಾದ SATS (Student Achievement Tracking System) ನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮತ್ತು ನಿರ್ದೇಶಕರಿಗೆ ಸರ್ಕಾರ ನಿರ್ದೇಶನ ನೀಡಿದೆ. ಈ ಮೂಲಕ ವಯೋಮಿತಿಯ ಅಲ್ಪ ವ್ಯತ್ಯಾಸದಿಂದಾಗಿ ಒಂದು ವರ್ಷ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದೆ.

ರಾಜ್ಯ ಸರ್ಕಾರ ಹೊರಡಿಸಿರುವಂತ ಆದೇಶದಲ್ಲಿ ಏನಿದೆ..? ಹೀಗಿದೆ ಆದೇಶದ ಸಂಪೂರ್ಣ ಮಾಹಿತಿ

ಶಿಕ್ಷಣ ಹಕ್ಕು ಕಾಯ್ದೆ, 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು, 2012ರಂತೆ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (2)ರ ತಿದ್ದುಪಡಿ ಆದೇಶದಲ್ಲಿ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದನ್ನು 2025-2026ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಗಿರುತ್ತದೆ.

ಒಂದನೇ ತರಗತಿ ಪ್ರವೇಶಾತಿಗೆ ಪ್ರಸ್ತುತ ನಿಗದಿಪಡಿಸಿರುವ ಕನಿಷ್ಠ 6 ವರ್ಷಗಳ ವಯೋಮಿತಿಯನ್ನು ಸಡಿಲಿಸಲು ರಾಜ್ಯಾದ್ಯಂತ ಪೋಷಕರಿಂದ ಹಲವಾರು ಮನವಿಗಳು ಸ್ವೀಕೃತವಾಗುತ್ತಿದ್ದು, ಒಂದನೇ ತರಗತಿಗೆ 5 ವರ್ಷ 5 ತಿಂಗಳು ವಯೋಮಿತಿಯನ್ನು ಮರು ನಿಗದಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಮೇರೆಗೆ ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಸಲಹೆ ನೀಡುವಂತೆ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಕೋರಲಾಗಿದ್ದು, ಕ್ರಮಾಂಕ (4)ರಲ್ಲಿ ವಯೋಮಿತಿಯನ್ನು ನಿಗದಿಪಡಿಸುವ ಹಾಗೂ ಸಡಿಲಿಸುವ ಅಂಶಗಳಿಗೆ ರಾಜ್ಯ ಶಿಕ್ಷಣ ನೀತಿ ಆಯೋಗವು ಕೆಳಕಂಡಂತೆ ಅಭಿಪ್ರಾಯ ನೀಡಿರುತ್ತದೆ.

“ಸಂವಿಧಾನದ ಅನುಚ್ಚೇದ 21(ಎ), ಶಿಕ್ಷಣ ಹಕ್ಕು ಕಾಯ್ದೆ, 2009, ಕಡ್ಡಾಯ ಶಿಕ್ಷಣ ನಿಯಮಗಳು, 2012 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ, 2020ರನ್ವಯ 1ನೇ ತರಗತಿಯ ಪ್ರವೇಶಕ್ಕೆ 6(ಆರು) ವರ್ಷಗಳ ಕನಿಷ್ಟ ವಯೋಮಿತಿ ನಿಗದಿಪಡಿಸುವುದು ಅಗತ್ಯ ಮತ್ತು ಔಚಿತ್ಯಪೂರ್ಣ. ಈ ವಿಷಯದಲ್ಲಿ ಅನುಸರಿಸಲಾಗುತ್ತಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪದ್ಧತಿಗಳು ಮಗುವಿನ ಮಾನಸಿಕ ಬೆಳವಣಿಗೆ ಮತ್ತು ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು 1ನೇ ತರಗತಿಯ ದಾಖಲಾತಿಗೆ 6 ವರ್ಷಗಳ ಕನಿಷ್ಕ ವಯೋಮಿತಿಯನ್ನು ನಿಗದಿಪಡಿಸಿರುವುದು ಹಾಗೂ ಮಗುವಿನ ಒತ್ತಡ ರಹಿತ ಕಲಿಕೆಗೆ ಪೂರಕವಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿರುವ 6 ವರ್ಷಗಳ ಕನಿಷ್ಟ ವಯೋಮಿತಿಯು ಸಮರ್ಪಕವಾಗಿರುತ್ತದೆ. ಅಲ್ಲದೇ ವೈಯಕ್ತಿಕ ತೊಡಕುಗಳನ್ನು ಪರಿಗಣಿಸಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡಲಾಗದೆಂಬ ಅಂಶವನ್ನು ವಿವಿಧ ನ್ಯಾಯಾಲಯಗಳು ಎತ್ತಿ ಹಿಡಿದಿರುವುದಾಗಿ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿ, 2025-26ರ ಶೈಕ್ಷಣಿಕ ವರ್ಷಕ್ಕಿಂತ ಪೂರ್ವದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪೂರ್ಣಗೊಳಿಸಿರುವ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ನಿಗದಿಪಡಿಸಿರುವ 6 ವರ್ಷಗಳ ಕನಿಷ್ಟ ವಯೋಮಿತಿಗೆ ವಿನಾಯತಿ ನೀಡಬಹುದೆಂದು ಅಭಿಪ್ರಾಯ ನೀಡಿರುತ್ತದೆ.

ದಿನಾಂಕ: 26.07.2022ರ ಆದೇಶದಲ್ಲಿ ನಿಗದಿಪಡಿಸಿರುವ ವಯೋಮಿತಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿದ ಶಿಫಾರಸ್ಸಿನ ಮೇರೆಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿರುವ ಹಾಗೂ ಶೈಕ್ಷಣಿಕ ವರ್ಷದ ಜೂನ್ 1ನೇ ದಿನಾಂಕಕ್ಕೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳಿಗೆ ಅನ್ವಯವಾಗುವಂತೆ ಮಾತ್ರ ಒಂದು ಬಾರಿಗೆ 2025-2026ನೇ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಿ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಸಂಖ್ಯೆ (6)ರ ಅಧಿನಿಯಮದ ಕಲಂ 20ರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುವ ಮಗುವಿನ ವಯಸ್ಸನ್ನು ಲೆಕ್ಕಹಾಕುವ ಬಗ್ಗೆ ಕೆಳಕಂಡಂತೆ ಸ್ಪಷ್ಟಪಡಿಸಲಾಗಿದೆ:

“ಮಗುವಿನ ವಯಸ್ಸನ್ನು ಶೈಕ್ಷಣಿಕ ವರ್ಷದ ಪ್ರಾರಂಭದ ದಿನದಂದು ಅಥವಾ ಅದಕ್ಕೆ ಮುಂಚೆ, ಆ ಮಗುವಿಗೆ ತುಂಬುವ ಪೂರ್ಣ ವರ್ಷಗಳನ್ನು ಆಧರಿಸಿ ಲೆಕ್ಕ ಹಾಕತಕ್ಕದ್ದು ಪರಂತು, ಮಗುವಿನ ಜನ್ಮ ದಿನವು, ಶೈಕ್ಷಣಿಕ ವರ್ಷದ ಮೊದಲನೇ ದಿನಾಂಕದಿಂದ ಅರವತ್ತು ದಿನಗಳೊಳಗೆ ಬರುವಲ್ಲಿ ಮಗುವಿನ ವಯಸ್ಸನ್ನು ಲೆಕ್ಕ ಹಾಕುವ ಉದ್ದೇಶಕ್ಕಾಗಿ, ಅದರ ಜನ್ಮ ದಿನಾಂಕವು ಶೈಕ್ಷಣಿಕ ವರ್ಷದ ಮೊದಲನೇ ದಿನಾಂಕದಂದು ಬರುವುದಾಗಿ ಭಾವಿಸತಕ್ಕದ್ದು.”

ಮೇಲೆ ಓದಲಾದ ಕ್ರಮಸಂಖ್ಯೆ (5)ರ ದಿನಾಂಕ:16.04.2025ರ ಆದೇಶದಲ್ಲಿ ಕಲ್ಪಿಸಿರುವ ವಯೋಮಿತಿಯ ಸಡಿಲಿಕೆಯನ್ನು 2026-27ನೇ ಶೈಕ್ಷಣಿಕ ವರ್ಷಕ್ಕೂ ಮುಂದುವರೆಸುವಂತೆ ಕೋರಿ ರಾಜ್ಯಾದ್ಯಂತ ಶೈಕ್ಷಣಿಕ ವರ್ಷದ ಪ್ರಾರಂಭದ ದಿನಾಂಕಕ್ಕೆ 06 ವರ್ಷಗಳು ಪೂರ್ಣಗೊಳ್ಳದ ಮಕ್ಕಳ ಪೋಷಕರು ಸರ್ಕಾರಕ್ಕೆ ಮನವಿ | ಅಹವಾಲುಗಳನ್ನು ಸಲ್ಲಿಸಿರುವ ಮೇರೆಗೆ ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ ಕಲಂ 20ರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುವ ಮಗುವಿನ ವಯಸ್ಸನ್ನು ಲೆಕ್ಕಹಾಕಲು ಕಲ್ಪಿಸಿರುವ ಅವಕಾಶದನ್ವಯ ಪುಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸ್ಸು / ಅಭಿಪ್ರಾಯವನ್ನು ಪರಿಗಣಿಸಿ ಸರ್ಕಾರದ ಆದೇಶ ಸಂಖ್ಯೆ: ಇಪಿ 260 ಪಿಜಿಸಿ 2021, ದಿನಾಂಕ:26.07.2022ರಲ್ಲಿ ಶೈಕ್ಷಣಿಕ ವರ್ಷದ ಜೂನ್ 1ನೇ ದಿನಾಂಕಕ್ಕೆ ನಿಗದಿಪಡಿಸಿರುವ ವಯೋಮಿತಿಯನ್ನು ಮುಂದುವರೆಸುತ್ತಾ, ಕನಿಷ್ಟ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಿದೆ.

ಮುಂದುವರೆದು, ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ ಕಲಂ 20ರಲ್ಲಿ ಸ್ಪಷ್ಟಪಡಿಸಿರುವಂತೆ “ಮಗುವಿನ ವಯಸ್ಸನ್ನು ಶೈಕ್ಷಣಿಕ ವರ್ಷದ ಪ್ರಾರಂಭದ ದಿನದಂದು ಅಥವಾ ಅದಕ್ಕೆ ಮುಂಚೆ, ಆ ಮಗುವಿಗೆ ತುಂಬುವ ಪೂರ್ಣ ವರ್ಷಗಳನ್ನು ಆಧರಿಸಿ ಲೆಕ್ಕ ಹಾಕತಕ್ಕದ್ದು. ಶೈಕ್ಷಣಿಕ ವರ್ಷದ ಪ್ರಾರಂಭದ ದಿನವನ್ನಾಗಿ ಜೂನ್ ಒಂದನೇ ದಿನಾಂಕವನ್ನು ಪರಿಗಣಿಸತಕ್ಕದ್ದು.

ಪರಂತು, ಮಗುವಿನ ಜನ್ಮ ದಿನವು, ಶೈಕ್ಷಣಿಕ ವರ್ಷದ ಮೊದಲನೇ ದಿನಾಂಕದಿಂದ ಅರವತ್ತು ದಿನಗಳೊಳಗೆ ಬರುವಲ್ಲಿ ಮಗುವಿನ ವಯಸ್ಸನ್ನು ಲೆಕ್ಕ ಹಾಕುವ ಉದ್ದೇಶಕ್ಕಾಗಿ, ಮಗುವಿನ ಜನ್ಮ ದಿನಾಂಕವು ಶೈಕ್ಷಣಿಕ ವರ್ಷದ ಮೊದಲನೇ ದಿನಾಂಕದಂದು ಬರುವುದಾಗಿ ಭಾವಿಸತಕ್ಕದ್ದು.

ಅದರಂತೆ 2026-27ನೇ ತರಗತಿಗೆ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಒಂದನೇ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ ಕಲಂ 20ರಲ್ಲಿ ಕಲ್ಪಿಸಿರುವ ಅವಕಾಶವನ್ನು ಪರಿಗಣಿಸಿ, ಶೈಕ್ಷಣಿಕ ವರ್ಷದ ಜೂನ್ 1ರಿಂದ ಗರಿಷ್ಟ 60(ಅರವತ್ತು) ದಿನಗಳ ಸಡಿಲಿಕೆಯನ್ನು ನೀಡಿ ಮಗುವಿನ ವಯಸ್ಸನ್ನು ಲೆಕ್ಕಹಾಕಿ ಶಾಲಾ ದಾಖಲಾತಿಗೆ ಪರಿಗಣಿಸಲು ಆದೇಶಿಸಿದೆ.

ಈ ಆದೇಶವನ್ನು SATS(Student Achievement Tracking System) ತಂತ್ರಾಂಶದಲ್ಲಿ ಸೂಕ್ತ | ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳುವ ಷರತ್ತಿನೊಂದಿಗೆ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ಅವರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ಮತ್ತು ಧಾರವಾಡ ಇವರಿಗೆ ನಿರ್ದೇಶಿಸಿದೆ ಎಂದಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

BIG NEWS: ಪೈಲಟ್ ಎಡವಟ್ಟು, ಡಿಕೆಶಿ ಲ್ಯಾಂಡ್ ಆಗಬೇಕಿದ್ದ ಕಡೆ ಇಳಿದ ನಟ ಕಿಚ್ಚ ಸುದೀಪ್ ಹೆಲಿಕಾಪ್ಟರ್!

03/05/2026 5:26 PM1 Min Read

BREAKING: ಡಿಕೆಶಿ, ಕಿಚ್ಚ ಸುದೀಪ್‌ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ

03/05/2026 5:23 PM1 Min Read

ಬೆಂಗಳೂರಲ್ಲಿ 10 ನಿಮಿಷ ತಡವಾಗಿ ಬಂದಿದ್ದಕ್ಕೆ, ಇಬ್ಬರು ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆ ಬರೆಯಲು ನಿರಾಕರಿಸಿದ ಸಿಬ್ಬಂದಿ!

03/05/2026 5:02 PM1 Min Read
Recent News

BIG NEWS: ಪೈಲಟ್ ಎಡವಟ್ಟು, ಡಿಕೆಶಿ ಲ್ಯಾಂಡ್ ಆಗಬೇಕಿದ್ದ ಕಡೆ ಇಳಿದ ನಟ ಕಿಚ್ಚ ಸುದೀಪ್ ಹೆಲಿಕಾಪ್ಟರ್!

03/05/2026 5:26 PM

BREAKING: ಡಿಕೆಶಿ, ಕಿಚ್ಚ ಸುದೀಪ್‌ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ

03/05/2026 5:23 PM

ಬೆಂಗಳೂರಲ್ಲಿ 10 ನಿಮಿಷ ತಡವಾಗಿ ಬಂದಿದ್ದಕ್ಕೆ, ಇಬ್ಬರು ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆ ಬರೆಯಲು ನಿರಾಕರಿಸಿದ ಸಿಬ್ಬಂದಿ!

03/05/2026 5:02 PM

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

03/05/2026 4:15 PM
State News
KARNATAKA

BIG NEWS: ಪೈಲಟ್ ಎಡವಟ್ಟು, ಡಿಕೆಶಿ ಲ್ಯಾಂಡ್ ಆಗಬೇಕಿದ್ದ ಕಡೆ ಇಳಿದ ನಟ ಕಿಚ್ಚ ಸುದೀಪ್ ಹೆಲಿಕಾಪ್ಟರ್!

By kannadanewsnow0903/05/2026 5:26 PM KARNATAKA 1 Min Read

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರದಲ್ಲಿ ಪೈಲಟ್ ಮಾಡಿದ ಸಣ್ಣ…

BREAKING: ಡಿಕೆಶಿ, ಕಿಚ್ಚ ಸುದೀಪ್‌ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ

03/05/2026 5:23 PM

ಬೆಂಗಳೂರಲ್ಲಿ 10 ನಿಮಿಷ ತಡವಾಗಿ ಬಂದಿದ್ದಕ್ಕೆ, ಇಬ್ಬರು ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆ ಬರೆಯಲು ನಿರಾಕರಿಸಿದ ಸಿಬ್ಬಂದಿ!

03/05/2026 5:02 PM

ಜೀವ ನೀಡುವವನಿಗೆ ಸಿಗಲಿಲ್ಲ ಜೀವದಾನ: ಡಿಗ್ಗಿ ಕಾಡಿನ ನಗುಮೊಗದ ಡಾ.ಲೋಬೋ ಇನ್ನು ನೆನಪು ಮಾತ್ರ!

03/05/2026 4:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.