ಹೈದರಾಬಾದ್ : ಕದಿಯಲು ಬರುವ ಕಳ್ಳರು ಮನೆಯಲ್ಲಿದ್ದ ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಾರೆ. ಆದ್ರೆ, ಬೆಂಗಳೂರಿನಲ್ಲಿ ಮನೆ ಕದಿಯಲು ಬಂದ ಕಳ್ಳನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಮೃತ ದಿಲೀಪ್ರದ್ದು ಕೊಲೆಯೇ.? ಇದು ಆತ್ಮಹತ್ಯೆಯೇ.? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2006ರಲ್ಲಿ ಕಳ್ಳತನ ಪ್ರಕರಣದಲ್ಲಿ ದಿಲೀಪ್’ನನ್ನ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿರುವ ಟೆಕ್ಕಿ ಕುಟುಂಬ ವಿದೇಶಕ್ಕೆ ಹೋಗಿತ್ತು. ಈ ಕ್ರಮದಲ್ಲಿ ಶುಕ್ರವಾರ ಬೆಳಗ್ಗೆ ದಿಲೀಪ್ ಬಹದ್ದೂರ್ ಎಂಬ ಕಳ್ಳ ನುಗ್ಗಿದ್ದಾನೆ. ಸ್ನಾನ ಮುಗಿಸಿ ಮನೆಗಳಲ್ಲಿ ಬೆಲೆಬಾಳುವ ವಸ್ತುಗಳಿವೆಯೇ ಎಂದು ನೋಡಿದ್ದಾನೆ. ಆ ನಂತ್ರ ಏನಾಯ್ತೋ.? ಗೊತ್ತಿಲ್ಲ. ಆದ್ರೆ, ಟೆಕ್ಕಿಯ ಕುಟುಂಬ ವಿದೇಶದಿಂದ ಬಂದಾಗ ಕಳ್ಳ ದಿಲೀಪ್ ದೇವರ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಹಲವು ಅನುಮಾನಗಳಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಫೀಲ್ಡಿಗಿಳಿದು ತನಿಖೆಯನ್ನ ತೀವ್ರಗೊಳಿಸಿದ್ದಾರೆ.
(A thief who came to commit a theft hangs himself in the god’s room)