ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಧುಕನಿ ಕಾಲದಲ್ಲಿ ಫಿಟ್ ಆಗಿರುವುದು ಬಹಳ ಮುಖ್ಯ. ಇತ್ತೀಚಿನ ಜೀವನ ಶೈಲಿಯಲ್ಲಿ ಆರೋಗ್ಯವಾಗಿರುವುದು ತುಂಬಾ ಕಷ್ಟಕರವಾಗಿದೆ. ವಿಶೇಷವಾಗಿ ಪುರುಷರಿಗೆ ಫಿಟ್ ಮತ್ತು ಯಂಗ್ ಆಗಿ ಉಳಿಯುವುದು ಸ್ವಲ್ಪ ಕಷ್ಟ, ಅವರು ಮಹಿಳೆಯರಿಗಿಂತ ಕಡಿಮೆ ಗಮನವನ್ನು ನೀಡುತ್ತಾರೆ. ಇದಕ್ಕಾಗಿ ಕೆಲವು ಸಲಹೆಗಳನ್ನು ಅನುಸರಿಸಿದರೆ ಫಿಟ್ ಆಗಿರಬಹುದು.
ಫಿಟ್ ಆಗಿರಲು ಈ ಸಲಹೆಗಳು ಉಪಯುಕ್ತ
ನಿಯಮಿತ ವ್ಯಾಯಾಮ
ಆರೋಗ್ಯಕರ ದೇಹಕ್ಕೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ವಿಶೇಷವಾಗಿ ಪುರುಷರು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಇದರಿಂದ ಅಧಿಕ ರಕ್ತದೊತ್ತಡ, ಸಕ್ಕರೆಯಂತಹ ಸಮಸ್ಯೆಗಳನ್ನು ಪರಿಹರಿಸಬಹುದು.
BIGG NEWS : ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
ಉತ್ತಮ ಆಹಾರ ಅತ್ಯಗತ್ಯ
ಯುವಕರಾಗಿ ಕಾಣಲು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವೂ ಅಗತ್ಯ. ಎಣ್ಣೆಯುಕ್ತ ಆಹಾರ, ಜಂಗ್ಫುಡ್ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು. ಇದಲ್ಲದೆ, ಹೆಚ್ಚುವರಿ ಉಪ್ಪು, ಕೊಬ್ಬಿನ ಆಹಾರ, ಸ್ಯಾಚುರೇಟೆಡ್ ಕೊಬ್ಬಿನಿಂದ ದೂರವಿರಬೇಕು.
ಮನಸ್ಥಿತಿ ಸುಧಾರಣೆ
ಮನಸ್ಥಿತಿಯನ್ನು ಸುಧಾರಿಸಲು, ಪ್ರತಿದಿನ ವ್ಯಾಯಾಮವನ್ನು ಮಾಡಬೇಕು. ಇದಲ್ಲದೆ, ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ. ಅದೇ ಸಮಯದಲ್ಲಿ, ಉತ್ತಮ ಮತ್ತು ಆಳವಾದ ನಿದ್ರೆ ಅಗತ್ಯವಾಗಿದೆ. ಇದರಿಂದ ನಿಮ್ಮ ಮೂಡ್ ಸುಧಾರಿಸಬಹುದು.ಡಾರ್ಕ್ ಚಾಕೊಲೇಟ್ ಸೇವನೆಯಿಂದ ಮೂಡ್ ಕೂಡ ಸುಧಾರಿಸಬಹುದು.
Good News : ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ