ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯಗೊಳಿಸುವುದು ಸೇರಿದಂತೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಪೆರಿಪರಲ್ ರೋಡ್ ಅಂತ ಕರೆಯಲಾಗಿತ್ತು. ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ, ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವತೆಗೆ ಇತ್ತು. ಹಿಂದೆ ಸರ್ಕಾರ ಡ್ರಾಪ್ ಮಾಡೋಕೆ ಹೊರಟಿತ್ತು. ತೊಂದರೆಯಾಗುತ್ತೆ ಅಂತ ಹೊರಡಿತ್ತು. ಈಗ ಪರ್ಯಾಯ ರಸ್ತೆ ಅಗತ್ಯವಿದೆ. ಡಿನೊಟಿಫೈ ಮಾಡಬಾರದು. ಟ್ರಾಫಿಕ್ ತಡೆಯಬೇಕು ಅಂತ ನಾವು ಪರಿಗಣಿಸಿದ್ದೇವೆ. ನೈಸ್ ಪಕ್ಕ ಬಿಡಿಎ ಯಿಂದ ಹೊಸ ರಸ್ತೆ ನಿರ್ಮಾಣ. 117 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಕಾರ್ಯಯೋಜನೆ ನಡೆದಿದೆ. ಭೂಸ್ವಾಧೀನಕ್ಕೆಹೊಸ ಪರಿಹಾರಕ್ಕೆ ಅವಕಾಶ ಇರಲಿಲ್ಲ. ರೈತರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. 100 ಮೀಟರ್ ಗೆ ನೊಟಿಫಿಕೇಶನ್ ಆಗಿತ್ತು. ಬೆಂ,ಮೈಸೂರು ರಸ್ತೆ 60 ಮೀಟರ್ ಇದೆ. ಈಗ ಈರಸ್ತೆಯನ್ನೂ ಅಷ್ಟಕ್ಕೇ ನಿಲ್ಲಿಸ್ತೇವೆ. ಉಳಿದ ಜಾಗ ರೈತರಿಗೆ ನೀಡೋಕೆ ನಿರ್ಧಾರ ಕೈಗೊಳ್ಳಲಾಗಿದೆ. ಕಮರ್ಷಿಯಲ್ ಉದ್ದೇಶಕ್ಕೆ ವಾಪಸ್ ಕೊಡ್ತೇವೆ. ಪರಿಹಾರದಲ್ಲಿ ರೂಪದಲ್ಲಿ ಕೊಡ್ತೇವೆ. ಕಮರ್ಷಿಯಲ್ ಗೆ 35% ನೀಡ್ತೇವೆ. ಬೇರೆ ಆದರೆ 40% ನೀಡೋಕೆ ತೀರ್ಮಾನ ಎಂಬುದಾಗಿ ತಿಳಿಸಿದರು.
ರಸ್ತೆಗೆ ಒಂದು ಎಕರೆ ಹೋದರೆ ಅದರ ಪಕ್ಕದ ಭೂಮಿ ಬಳಕೆಗೆ ಅವಕಾಶ ಇದೆ. 20 ಗುಂಟೆಯವರೆಗೆ ಕ್ಯಾಷ್ ನೀಡ್ತೇವೆ. ಎಫ್ ಎಆರ್ ಮಾಡೋಕು ಅವಕಾಶ ಇದೆ. ರೆವಿನ್ಯೂಲ್ಯಾಂಡ್ ಕನ್ವರ್ಟ್ ಗೆ ಅವಕಾಶ ಕೊಡ್ತೇವೆ. ಒಂದು ಭೂಸ್ವಾಧೀನಕ್ಕೆ ಅವಕಾಶ ಕೊಡ್ತೇವೆ. ಮತ್ತೊಂದು ಕಮರ್ಷಿಯಲ್ ಮಾಡೋಕೆ ಅವಕಾಶ ನೀಡಲಾಗುತ್ತದೆ. ರಸ್ತೆಗೆ ಭೂಮಿ ಕಳೆದುಕೊಂಡವರಿಗೆ ಕೊಡ್ತೇವೆ. ರಸ್ತೆ ಟೋಲ್ ರೋಡ್ ಆಗಿ ನಿರ್ಮಿಸ್ತೇವೆ. ಹುಡ್ಕೋದಿಂದ ಸಾಲ ಪಡೆದು ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ರೈತರಿಗೂ ಅನುಕೂಲ ಆಗಬೇಕು. ಸಾರ್ವಜನಿಕರಿಗೂ ಒಳ್ಳೆಯದಾಗಬೇಕು. ಅದಕ್ಕೆ ಈ ನಿರ್ಧಾರವನ್ನ ತೆಗೆದುಕೊಂಡಿದ್ದೇವೆ. ಎರಡು ವರ್ಷದಲ್ಲಿ ಈ ಪೆರಿಪರಲ್ ರೋಡ್ ಆಗಲಿದೆ. 17, 18 ವರ್ಷದಿಂದ ಇದು ನೆನಗುದಿಗೆ ಬಿದ್ದಿತ್ತು. ನಾವು ಡಿನೋಟಿಫೈ ಮಾಡದೆ ರಸ್ತೆ ನಿರ್ಮಿಸ್ತೇವೆ ಎಂದರು.
ಮೊದಲು 27 ಸಾವಿರ ಕೋಟಿ ಖರ್ಚು ಬರ್ತಿತ್ತು. ಈಗ 10 ಸಾವಿರ ಕೋಟಿಯಲ್ಲಿ ರಸ್ತೆ ಆಗಲಿದೆ. 60 ಮೀಟರ್ ಮಾತ್ರ ರಸ್ತೆ ನಿರ್ಮಾಣ ಮಾಡಲಿದ್ದೇವೆ. ಮಧ್ಯದಲ್ಲಿ ಮೆಟ್ರೋಗೂಜಾಗ ಬಿಡ್ತೇವೆ. ಬಿಡಿಎಯಿಂದಲೇ ರಸ್ತೆ ನಿರ್ಮಾಣ ಆಗಲಿದೆ ಎಂದರು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ಸಿವಿಲ್ ಸೇವೆಗಳ ನಿಯಮಗಳ ತಿದ್ದುಪಡಿಗೆ ಅನುಮತಿ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ ನೀಡಲು ತೀರ್ಮಾನಿಸಲಾಗಿದೆ. ಸಹಾಯಕಿಯರಿಗೆ ಸಮವಸ್ತ್ರ ಸೀರೆಗಳ ವಿತರಣೆ ಮಾಡಲಾಗುತ್ತದೆ. 13.98 ಕೋಟಿಯಲ್ಲಿ ಖರೀದಿಗೆ ಒಪ್ಪಿಗೆ ನೀಜವಾಹಿಗೆ, 69922 ಅಂಗನವಾಡಿ ಕೇಂದ್ರಕ್ಕೆ ಔಷಧ ಕಿಟ್ ಅನ್ನು 1500 ವೆಚ್ಷದಲ್ಲಿ ಔಷಧ ಕಿಟ್ ಗಳ ವಿತರಣೆ ಮಾಡಲಾಗುತ್ತದೆ. 10 ಕೋಟಿ ವೆಚ್ಚದ ಖರೀದಿಗೆ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದರು.
ಮಳವಳ್ಳಿ ಕಾರ್ಯನಿರತ ಪತ್ರ ಸಂಘಕ್ಕೆ ನಿವೇಶನ ನೀಡಲು ಇಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 30×40 ಅಡಿ ವ್ಯಾಪ್ತಿಯ ಕಟ್ಟಡಗಳಿಗೆ ಮಾತ್ರ ಓಸಿ, ಸಿಸಿ ವಿನಾಯ್ತಿ ನೀಡಲಾಗುತ್ತದೆ. ಮುನ್ಸಿಪಲ್ ವ್ಯಾಪ್ತಿಯ ಕಟ್ಟಡಗಳಿಗೆ ಮಾತ್ರವೆ ಅನ್ವಯಿಸಲಿದೆ ಎಂದರು.
ನೈರುತ್ಯ ಮುಂಗಾರಿನಲ್ಲಿ ಮಳೆ ಹಾನಿ 12.82 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಇನ್ಫುಟ್ ಸಬ್ಸಿಡಿ ಪಾವತಿಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಮಳೆಯಾಶ್ರಿಯ ಬೆಳೆಗಳಿಗೆ 8500+8500 ರೂ. ಪ್ರತಿ ಹೆಕ್ಟೇರ್ ಗೆ 17 ಸಾವಿರ ರೂ ಪರಿಹಾರ ನೀಡಲಾಗುತ್ತದೆ. ನೀರಾವರಿ ಬೆಳೆಗಳಿಗೆ 17 ಸಾವಿರ ರೂ ಪರಿಹಾರ ನೀಡಲಾಗುತ್ತದೆ. ಸಬ್ಸಿಡಿ 8500 ರೂ ಸೇರಿ ಒಟ್ಟು 25500 ರೂ ಪರಿಹಾರ ಸಿಗಲಿದೆ. ಬಹುವಾರ್ಷಿಕ ಬೆಳೆಗಳಿಗೆ 22 ಸಾವಿರ ಪರಿಹಾರ ನೀಡಲಿದ್ದೇವೆ. ಬಹುವಾರ್ಷಿಕ ಬೆಳೆಗಳಿಗೆ 31 ಸಾವಿರ ಪರಿಹಾರ ಸಿಗಲಿದೆ ಎಂದರು.
ವಿಜಯಪುರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಆಸ್ಪತ್ರೆ ನಿರ್ಮಾಣ. ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ 26.9 ಕೋಟಿ ಮೊತ್ತದ ಉಪಕರಣ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ವೃಷಭಾವತಿ ನದಿ ನೀರು ಮರುಸಂಸ್ಕರಣ. ಬೆಂ.ಗ್ರಾಂ, ಚಿಕ್ಕಬಳ್ಳಾಪುರದ ಕೆರೆಗಳಿಗೆ 650 ಕೋಟಿ ವೆಚ್ಚದಲ್ಲಿ ನೀರು ಪೂರೈಕೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಆರ್ ಎಸ್ ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಡಲು ನಿರ್ಭಂದ ಹೇರಲಾಗುತ್ತಿದೆ. ಒಂದು ವೇಳೆ ಮಾಡಲು ಪೂರ್ವಾನುಮತಿ ಕಡ್ಡಾಯ. ಸಾರ್ವಜನಿಕ ಆಸ್ತಿ,ಸಾಂಸ್ಥಿಕ ಆಸ್ತಿ ಸರಿಯಾಗಿ ನಿರ್ವಹಣೆ ಮಾಡಬೇಕು. ಯಾವುದೇ ರೀತಿ ಟ್ರಸ್ ಪಾಸ್ ಆಗೋಕೆ ಬಿಡುವಂತಿಲ್ಲ. ಅನುಮತಿ ಪಡೆದು ಕಾರ್ಯಕ್ರಮ ಮಾಡಲು ಅವಕಾಶ. ಅವಕಾಶ ಇಲ್ಲದೆ ಮಾಡಿದರೆ ಕ್ರಮ ಎಂದರು.
ಪೂರ್ವಾನುಮತಿ ಕಡ್ಡಾಯ ಮಾಡಿದ್ದೇವೆ. ಯಾವ್ಯಾವ ಅಂಶ ಅನ್ನೋದು ಆದೇಶದಲ್ಲಿ ಬರುತ್ತೆ. ನಾವು ಶೆಟ್ಟರ್ ಆದೇಶವನ್ನೇನು ತಂದಿಲ್ಲ. ದೇವಸ್ಥಾನಗಳು ಸಾರ್ವಜನಿಕ ಆಸ್ತಿ ಒಳಗೆ ಬರುತ್ತವೆ. ಹಾಗಾಗಿ ದೇವಸ್ಥಾನಗಳಲ್ಲೂ ಚಟುವಟಿಕೆಗೆ ನಿಷೇಧ ಮಾಡಲಾಗುತ್ತಿದೆ. ಶಾಲೆ, ಕಾಲೇಜು, ಆಟದ ಮೈದಾನ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಎಂದು ಗುರ್ತಿಸಿಕೊಳ್ಳುವ ಜಾಗ. ಎಲ್ಲಾ ಕಡೆಗಳಲ್ಲೂ ನಿರ್ಭಂದ. ಖಾಸಗಿ ಕಾರ್ಯಕ್ರಮ ಮಾಡಬೇಕಾದರೆ ಪೂರ್ವಾನುಮತಿ ಕಡ್ಡಾಯ ಎಂದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಗುಜರಾತ್ ಸರ್ಕಾರದ ಎಲ್ಲಾ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ
BIG NEWS: ರಾಜ್ಯದ ‘ಸರ್ಕಾರಿ ಶಾಲಾ ಆವರಣ’ದಲ್ಲಿ ಖಾಸಗಿ ಕಾರ್ಯಕ್ರಮ ಬ್ಯಾನ್: 2013ರಲ್ಲೇ ಆದೇಶ, ಪತ್ರ ವೈರಲ್