ಬೆಂಗಳೂರು: ಹೈಕೋರ್ಟ್ ಕೆಲ ದಿನಗಳ ಹಿಂದಷ್ಟೇ ಎಸಿಬಿ ( ACB ) ರದ್ದುಗೊಳಿಸಿ, ಎಲ್ಲಾ ಕೇಸ್ ಗಳನ್ನು ಲೋಕಾಯುಕ್ತಕ್ಕೆ ( Lokayukta ) ವರ್ಗಾಹಿಸಿ ಆದೇಶಿಸಿತ್ತು. ಹೀಗಾಗಿ ಲೋಕಾಯಕ್ತಕ್ಕೆ ಮತ್ತೆ ಜೀವ ಬಂದಂತೆ ಆಗಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ( Supreme Court ) ಮೊರೆಯನ್ನು ಸರ್ಕಾರ ಹೋಗಲಿದೆ ಎನ್ನಲಾಗಿತ್ತು. ಆದ್ರೇ.. ಎಸಿಬಿ ರದ್ದು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋ ಪ್ರಶ್ನೆಯೇ ಇಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಸ್ಪಷ್ಟ ಪಡಿಸಿದ್ದಾರೆ.
BIGG NEWS : `ACB’ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಎಸಿಬಿ ರದ್ದು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋ ಪ್ರಶ್ನೆಯೇ ಇಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. ಹೈಕೋರ್ಟ್ ಆದೇಶದಂತೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ ಎಂದರು.
BIGG NEWS : `ಮಡಿಕೇರಿ ಚಲೋ’ ಮುಂದೂಡಿಕೆ : ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಬಿಎಸ್ ವೈ ಅಭಿನಂದನೆ
ರಾಜ್ಯ ಸರ್ಕಾರದಿಂದ ಎಸಿಬಿ ರದ್ದುಗೊಳಿಸಿದಂತ ಕೋರ್ಟ್ ನಿರ್ಧಾರದ ಬಳಿಕ ಲೋಕಾಯುಕ್ತಕ್ಕೆ ಅಧಿಕಾರ ನೀಡುವಂತ ಎಲ್ಲಾ ಕೆಲಸ ನಡೆಸಲಾಗುತ್ತಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೀಗಾಗಿ ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸೋ ಪ್ರಶ್ನೆಯೇ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.