ಉಡುಪಿ: ರಾಜ್ಯದಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಇಲ್ಲ. ದೀಪಾವಳಿಗೂ ವಿದ್ಯುತ್ ವ್ಯತ್ಯಯ ಇರುವುದಿಲ್ಲ. ಬೇಸಿಗೆ ಸಮಯದಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
BIGG NEWS : ರಾಜ್ಯಾದ್ಯಂತ 10,889 ಮಸೀದಿಗಳಿಗೆ ಆಜಾನ್ ಬಳಸಲು ಅನುಮತಿ ನೀಡಿದ ಸರ್ಕಾರ
ಈ ಕಾರಣಕ್ಕಾಗಿಯೇ ಉತ್ಪಾದನೆ ಹೆಚ್ಚಿಸಿ ಸೂಕ್ತ ಸರಬರಾಜು ಮಾಡುತ್ತೇವೆ ಎಂದು ಇಂಧನ ಸಚಿವ ಸಸುನಿಲ್ ಕುಮಾರ್ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಲ್ಲಿ ಇತಿಹಾಸದಲ್ಲೇ ಅತೀ ಹೆಚ್ಚು ವಿದ್ಯುತ್ ಬೇಡಿಕೆ ಬಂದಿತ್ತು. ರಾಜ್ಯದಲ್ಲಿ ಸುಮಾರು 14800 ಮೆಗಾ ವ್ಯಾಟ್ ವಿದ್ಯುತ್ ನಿರ್ವಹಣೆ ಮಾಡಿದ್ದೇವೆ. ವರ್ಷದಲ್ಲಿ ಒಮ್ಮೆ ವಿದ್ಯುತ್ ದರ ಏರಿಕೆ ಮಾಡಲು ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಬಾರದು ಎಂದು ವಿನಂತಿಸಲಾಗಿದೆ ಎಂದರು.