ದಾವಣಗೆರೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರವನ್ನು ಖಾಲಿ ಮಾಡೋದಾಗಿ ಹೇಳಿ, ತನ್ನ ಪುತ್ರ ಬಿ.ವೈ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸೋದಾಗಿ ಹೇಳಿದ್ದರು. ಆದ್ರೇ ರಾಜಕೀಯ ನಾಯಕರು ಬಿಎಸ್ ವೈ ಹೇಳಿಕೆಯಿಂದ ಶಾಕ್ ಆಗಿ, ಅವರನ್ನು ಭೇಟಿಯಾಗಿ ಮನವೊಲಿಸಿದ ಬಳಿಕ, ಅವರು ಉಲ್ಟಾ ಹೊಡೆದಿದ್ದರು. ಆದ್ರೇ.. ಮಾಜಿ ಸಚಿವ ಶ್ಯಾಮನೂರು ಮಾತ್ರ 92ನೇ ವಯಸ್ಸಿನಲ್ಲಿಯೂ ನೋ ನಿವೃತ್ತಿ ಎಂಬುದಾಗಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರಕ್ಕೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳಿಂದ ಕ್ಷೇತ್ರವನ್ನು ಭದ್ರ ಮಾಡಿಕೊಂಡು, ಟಿಕೆಟ್ ಪಡೆಯೋದಕ್ಕಾಗಿ ಏನೆಲ್ಲಾ ಮಾಡಬೇಕು ಆ ಎಲ್ಲಾ ಕಸರತ್ತನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆ.
ಹೆಂಡ್ತಿ ಜತೆಗೆ ಕಿತ್ತಾಡಿಕೊಂಡು ಓಡೋಡಿ ಹೋಗಿ ನದಿಗೆ ಹಾರಿದ ಭೂಪ: ಮುಂದೇನಾಯ್ತು ಗೊತ್ತಾ.?
ಮತ್ತೊಂದೆಡೆ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ರಾಜಕೀಯ ನಾಯಕರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸೋದಕ್ಕೆ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಹಾಲಿ ಇರುವಂತ ಹಲವು ಶಾಸಕರು, ಸಚಿವರ ವಯಸ್ಸು ಕೂಡ 70+ ಆಗುತ್ತಿದೆ.
‘ಸಿದ್ದರಾಮಯ್ಯ ಆಡಳಿತ, ನೀತಿ ನಿರ್ಧಾರʼ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ವಿಪಕ್ಷ ನಾಯಕ’ ಏನ್ ಮಾತನಾಡಿದ್ರು ಗೊತ್ತಾ.?
ಇತ್ತ 92ನೇ ವಯಸ್ಸಿನಲ್ಲಿರುವಂತ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಮಾತ್ರ, ತಮಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಇದೇ ಕಾರಣಕ್ಕೆ ಅವರು ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿಯೂ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹಿರಿಯ ರಾಜಕೀಯ ಮುಖಂಡರ ನಿವೃತ್ತಿಯ ಬಿಸಿ ಬಿಸಿ ಚರ್ಚೆ ನಡುವೆ, 92ರ ವಯಸ್ಸಿನಲ್ಲಿಯೂ ಶ್ಯಾಮನೂರು ಮಾತ್ರ ಚುನಾವಣೆಯಲ್ಲಿ ನಿಲ್ಲೋ ಪ್ರಯತ್ನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.