ಮೈಸೂರು: ಆಷಾಢಕ್ಕೆ ತವರಿಗೆ ಬಂದು ಪ್ರಿಯಕರನ ಜೊತೆಗೆ ಓಡಿ ಹೋದ ಯುವತಿ ಸಾವಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕು ರಾಂಪುರ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ವರ್ಷಿತಾ(20) ಅಂಥ ತಿಳಿದು ಬಂದಿದ್ದು, ವರ್ಷಿತಾ ಮದುವೆಗೂ ಮುನ್ನ ತನ್ನ ಮನೆ ಪಕ್ಕದಲ್ಲಿದ್ದ ಹುಡುಗನ ಜೊತೆಗೆ ಲವ್ ಶುರು ಮಾಡಿದ್ದಾಳಂತೆ, ಆದರೆ ಮನೆಯವರು ಒಪ್ಪದೇ ಇದ್ದಾಗ ಆಕೆಯನ್ನು , ಚಾಮರಾಜನಗರ ಮೂಲದ ಯುವಕನ ಜತೆ ಮದುವೆ ಮೇ 8ರಂದು ಅದ್ದೂರಿಯಾಗಿ ಮದುವೆ ಮಾಡಿದ್ದರು, ಆಷಾಢ ಮಾಸದ ಹಿನ್ನೆಲೆ ಕಳೆದ ತಿಂಗಳು ತವರು ಮನೆಗೆ ಬಂದಿದ್ದಾಗ ಪ್ರಿಯಕರನ ಜತೆ ಹೋಗಿದ್ದ ವರ್ಷಿತಾಳನ್ನು ಕೊನೆಗೂ ಹುಡುಕಿ ಕರೆ ತಂದಿದ್ದಾರೆ. ಆದರೆ ಪ್ರಿಯಕರನಿಂದ ಬೇರೆಮಾಡಿದಕ್ಕೆ ಮನನೊಂದು ಆಕೆ ತಾತನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಇ ಮಾಡಲಾಗಿದೆ.