ಮೈಸೂರು : ಸಂವಿಧಾನದಲ್ಲಿ ಎಲ್ಲರೂ ಮನುಷ್ಯರಾಗಿ ಬಾಳಿ ಸಮ ಸಮಾಜವನ್ನು ಕಟ್ಟಿ ಎಲ್ಲರೂ ಭಾತೃತ್ವದಿಂದ ಬಾಳುವ ಭಾವನೆ ಬೆಳೆಸಿಕೊಳ್ಳಿ ಎಂದು ಸಂದೇಶ ಸಾರುತ್ತದೆ. ಹಾಗಾಗಿ ಇದನ್ನು ನಾಡಹಬ್ಬ ಜನರ ಹಬ್ಬ ಎಂದು ಕರೆಯಲಾಗುತ್ತದೆ. ಇದು ಒಂದು ಧರ್ಮದ ಹಬ್ಬ, ಒಂದು ಜಾತಿಯ ಹಬ್ಬ ಅಲ್ಲ. ಎಲ್ಲ ಧರ್ಮದ ಎಲ್ಲಾ ಜಾತಿಗಳ ಹಬ್ಬ. ಹಾಗಾಗಿ ಇದನ್ನು ವಿಶ್ವವಿಖ್ಯಾತ ದಸರಾ ಅಂತ ಕರೆಯಲಾಗುತ್ತದೆ ಎಂದರು.
ಬಡವರಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕು ಜಾತಿ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರಿಗೆ ದೌರ್ಜನ್ಯ ಅಸಮಾನತೆ ಮುಂದುವರೆಯುತ್ತದೆ. ಅಸಮಾನತೆ,ದೌರ್ಜನ್ಯ ಹೋಗಬೇಕಾದರೆ ಎಲ್ಲರೂ ಮುಖ್ಯವಾಹಿನಿಗೆ ಬರಬೇಕಾದರೆ, ಸಮಾನತೆ ಬಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗುತ್ತದೆ ಇಲ್ಲವಾದರೆ ಸಾಧ್ಯ ಆಗಲ್ಲ. ಇದನ್ನೇ ಬುದ್ಧ ಬಸವಣ್ಣ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಹೇಳಿದ್ದು.
ಕುವೆಂಪು ಅವರು ಹೇಳುತ್ತಾರೆ ಎಲ್ಲಾ ದೇವಸ್ಥಾನಗಳನ್ನ ಚರ್ಚ್ ಗಳನ್ನ ಮಸೀದಿಗಳನ್ನು ಬಿಟ್ಟು ಬರ್ರಿ ಮನುಷ್ಯರಾಗಿ ಅಂತ ಹೇಳಿದರು. ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಅಂದರು ನಾವು ಸಮಾಜವನ್ನು ಒಡೆಯುವಂತಹ ಕೆಲಸ ಮಾಡಬೇಕಾ? ಧರ್ಮದ ಆಧಾರದ ಮೇಲೆ ಜಾತಿಯ ಆಧಾರದ ಮೇಲೆ ಸಮಾಜ ಹೊಡೆಯುವ ಕೆಲಸ ಮಾಡಬೇಕಾ? ಹಾಗೆ ಮಾಡಬಾರದು ನಮ್ಮ ಸಂವಿಧಾನದಲ್ಲಿ ಆ ರೀತಿ ಇಲ್ಲ ಎಂದರು.