ಹಾಸನ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಂಗಡಿಯ ಗೋಡೆಯೊಂದು ಕುಸಿದು ಬಿದ್ದಿದೆ. ಈ ಪರಿಣಾಮ ಸ್ಥಳದಲ್ಲಿದ್ದಂತ ಮೂವರು ಮಹಿಳೆಯರು, ಓರ್ವ ಪುರುಷನಿಗೆ ಗಾಯಗೊಂಡಿರುವಂತ ಘಟನೆ ಹಾಸನದ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯಲ್ಲಿ ಅಂಗಡಿಯ ಗೋಡೆ ಕುಸಿದು ಸಫಿಯಾ, ಶಹನಾಜ್, ಫಯಿಮಾ ಬಾನು, ನಿಜಾರ್ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಶೋಕಗೌಡ ಎಂಬುವರಿಗೆ ಸೇರಿದ್ದಂತ ಅಂಗಡಿಯ ಗೋಡೆ ಭಾರೀ ಮಳೆಯಿಂದಾಗಿ ಕುಸಿತಗೊಂಡಿದೆ. ಈ ಪರಿಣಾಮ ಸ್ಥಳದಲ್ಲಿದ್ದಂತ ನಾಲ್ವರು ಗಾಯಗೊಂಡಿದ್ದಾರೆ. ಸಕಲೇಶಪುರ ಟೌನ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.