ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕೌಂಟ್ ಡೌನ್ ಶುರುವಾಗಿದೆ. ಐತಿಹಾಸಿಕ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಜನರು ಕಾತರುದಿಂದ ಕಾಯುತ್ತಿದ್ದಾರೆ. ಚಾಮುಂಡಿಶ್ವೇರಿ ದೇವಿಯ ಮೂರ್ತಿ ಉತ್ಸವ ಚಾಮುಂಡಿ ಬೆಟ್ಟದಿಂದ ಅರಮನೆ ನಗರಕ್ಕೆ ಹೊರಟಿದೆ.
ನಾಡಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥನೆ: ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಹೇಳಿಕೆ
ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಅರಮನೆಯತ್ತ ಹೊರಟಿದೆ. ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ದಸರಾ ಹಬ್ಬವನ್ನು ಆಚರಣೆ ಮಾಡಲಾಗಿದೆ. ಮೈಸೂರು ಅರಮನೆಯಲ್ಲಿ ಜಟ್ಟಿ ಕಾಳಗಕ್ಕೆ ಸಿದ್ಧತೆ ನಡೆಸಲಾಗಿದೆ. ಬೆಳಗ್ಗೆ 11.45 ಕ್ಕೆ ಅರಮನೆ ಸವಾರಿ ತೊಟ್ಟಿರುವ ಜಟ್ಟಿ ಕಾಳಗ ಸಿದ್ಧತೆ ನಡೆಸಲಾಗಿದೆ. ಜಟ್ಟಿ ಕಾಳಗಕ್ಕೆ ಜಗಜಟ್ಟಿಗಳು ಸಿದ್ಧರಾಗುತ್ತಿದ್ದಾರೆ.