ಬೆಂಗಳೂರು: ಬಿಜೆಪಿ ( BJP ) ಖಾಲಿ ಕುರ್ಚಿಗಳ ಮೂಲಕ ಜನಾಕ್ರೋಶವನ್ನು ಕಾಣುತ್ತಿತ್ತು, ಈಗ ನೇರವಾಗಿ ಜನ ಪ್ರಶ್ನಿಸಲು ಶುರುಮಾಡಿದ್ದಾರೆ. ಸಚಿವರು ಜನರ ಪ್ರಶ್ನೆಗಳಿಗೆ ನಿರುತ್ತರರಾಗಿದ್ದಾರೆ. ಜನ ಬಿಜೆಪಿಗರ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಕಾಲ ಸದ್ಯದಲ್ಲೇ ಬರಲಿದೆ. ಮತ ಸಿಗುವುದಿಲ್ಲವೆಂದು ತಿಳಿದ ಬಿಜೆಪಿ ಮತದಾರರನ್ನೇ ಮಾಯ ಮಾಡಲು ಮುಂದಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸಿದೆ.
ಬಿಜೆಪಿ ಖಾಲಿ ಕುರ್ಚಿಗಳ ಮೂಲಕ ಜನಾಕ್ರೋಶವನ್ನು ಕಾಣುತ್ತಿತ್ತು, ಈಗ ನೇರವಾಗಿ ಜನ ಪ್ರಶ್ನಿಸಲು ಶುರುಮಾಡಿದ್ದಾರೆ.
ಸಚಿವರು ಜನರ ಪ್ರಶ್ನೆಗಳಿಗೆ ನಿರುತ್ತರರಾಗಿದ್ದಾರೆ.
ಜನ ಬಿಜೆಪಿಗರ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಕಾಲ ಸದ್ಯದಲ್ಲೇ ಬರಲಿದೆ.ಮತ ಸಿಗುವುದಿಲ್ಲವೆಂದು ತಿಳಿದ @BJP4Karnataka ಮತದಾರರನ್ನೇ ಮಾಯ ಮಾಡಲು ಮುಂದಾಗಿದೆ. pic.twitter.com/VdELla3TLr
— Karnataka Congress (@INCKarnataka) November 20, 2022
ಈ ಕುರಿತು ಟ್ವಿಟ್ ( Twitter ) ಮಾಡಿದ್ದು, ‘ಬಸವರಾಜ ಬೊಮ್ಮಾಯಿ ಅವರೇ, ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ? ಅಥವಾ ಸಿಎಂ ಹುದ್ದೆಯ ಜವಾಬ್ದಾರಿಯೇ ನಿಮಗೆ ಹಾಸ್ಯಾಸ್ಪದವೇ? ಚಿಲುಮೆ ಪ್ರಕರಣ ಹಾಸ್ಯಾಸ್ಪದವಾಗಿದ್ದರೆ ಕೆಲವರ ಬಂಧನವಾಗಿದ್ದೇಕೆ? ಸಚಿವ ಅಶ್ವಥ್ ನಾರಾಯಣ್ ಹೌಹಾರುತ್ತಿರುವುದೇಕೆ? ನ್ಯಾಯಾಂಗ ತನಿಖೆಗೆ ನೀಡಲು ಬೆದರುತ್ತಿರುವುದೇಕೆ? ಮತದಾರರೆಂದರೆ ಹಾಸ್ಯವೇ ನಿಮಗೆ? ಎಂದು ಪ್ರಶ್ನಿಸಿದೆ.
'@BSBommai ಅವರೇ,
ಮತದಾರರ ಮಾಹಿತಿ ಕಳ್ಳತನ ನಿಮಗೆ ಹಾಸ್ಯಾಸ್ಪದವೇ?
ಅಥವಾ ಸಿಎಂ ಹುದ್ದೆಯ ಜವಾಬ್ದಾರಿಯೇ ನಿಮಗೆ ಹಾಸ್ಯಾಸ್ಪದವೇ?ಚಿಲುಮೆ ಪ್ರಕರಣ ಹಾಸ್ಯಾಸ್ಪದವಾಗಿದ್ದರೆ ಕೆಲವರ ಬಂಧನವಾಗಿದ್ದೇಕೆ? ಸಚಿವ ಅಶ್ವಥ್ ನಾರಾಯಣ್ ಹೌಹಾರುತ್ತಿರುವುದೇಕೆ?
ನ್ಯಾಯಾಂಗ ತನಿಖೆಗೆ ನೀಡಲು ಬೆದರುತ್ತಿರುವುದೇಕೆ?ಮತದಾರರೆಂದರೆ ಹಾಸ್ಯವೇ ನಿಮಗೆ? pic.twitter.com/sVIYPXv9Sb
— Karnataka Congress (@INCKarnataka) November 20, 2022
ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರೇ, ದಿವಾಳಿಯಾಗಿದ್ದು ಯಾರು ಎಂದು ಆತ್ಮವಿದ್ದರೆ ಒಮ್ಮೆ ಆತ್ಮಾವಲೋಕ ಮಾಡಿಕೊಳ್ಳಿ. ಎಲ್ಲಾ ನೇಮಕಾತಿಗಳಲ್ಲೂ ಅಕ್ರಮ, ಪ್ರತಿ ಕಾಮಗಾರಿಯಲ್ಲೂ ಕಮಿಷನ್, ರಸ್ತೆಗುಂಡಿಗಳಿಗೆ ಹೆಣ ಬೀಳುತ್ತಿವೆ. ಭ್ರಷ್ಟಾಚಾರಕ್ಕೆ ಕಂಗೆಟ್ಟ ಜನ ದಯಾಮರಣಕ್ಕೆ ಪತ್ರ ಬರೆಯುತ್ತಿದ್ದಾರೆ, ಇದು ನಿಮ್ಮ ಸರ್ಕಾರದ ದಿವಾಳಿತನದ ಸಂಕೇತವಲ್ಲವೇ? ಎಂದು ಕೇಳಿದೆ.
ಸಿಎಂ @BSBommai ಅವರೇ, ದಿವಾಳಿಯಾಗಿದ್ದು ಯಾರು ಎಂದು ಆತ್ಮವಿದ್ದರೆ ಒಮ್ಮೆ ಆತ್ಮಾವಲೋಕ ಮಾಡಿಕೊಳ್ಳಿ.
ಎಲ್ಲಾ ನೇಮಕಾತಿಗಳಲ್ಲೂ ಅಕ್ರಮ, ಪ್ರತಿ ಕಾಮಗಾರಿಯಲ್ಲೂ ಕಮಿಷನ್, ರಸ್ತೆಗುಂಡಿಗಳಿಗೆ ಹೆಣ ಬೀಳುತ್ತಿವೆ.
ಭ್ರಷ್ಟಾಚಾರಕ್ಕೆ ಕಂಗೆಟ್ಟ ಜನ ದಯಾಮರಣಕ್ಕೆ ಪತ್ರ ಬರೆಯುತ್ತಿದ್ದಾರೆ,
ಇದು ನಿಮ್ಮ ಸರ್ಕಾರದ ದಿವಾಳಿತನದ ಸಂಕೇತವಲ್ಲವೇ?— Karnataka Congress (@INCKarnataka) November 20, 2022