ಹಂಸ ಮತ್ತು ಡಿಂಭಕ :-
ಕೃಷ್ಣನು, ‘ದುಷ್ಟ ಸಂಹಾರ ಶಿಷ್ಟ ರಕ್ಷಣೆ’ ಮಾಡಿ ಭೂಭಾರ ಹರಣ ಮಾಡಲು ಅವ ತರಿಸಿದನು. ಪೂತನಿ, ಶಕಟಾಸುರ, ತೃಣಾ ವರ್ತ,ಬಕಾಸುರ ಇನ್ನೂ ಮುಂತಾದ ರಾಕ್ಷಸರ ಸಂಹಾರ, ಕಾಳಿಂಗ ಮರ್ದನ, ಕಂಸ, ಜರಾಸಂಧ, ಕಾಲಯವನ, ಹೀಗೆ ಇನ್ನೂ ಹಲವು ರಾಕ್ಷಸರನ್ನು ಉಪಾಯ ವಾಗಿ ಸಂಹಾರ ಮಾಡಿದನು.ಹಾಗೆ ಹಂಸ ಮತ್ತು ಡಿಂಭಕ ಎಂಬ ದುಷ್ಟರನ್ನು ಸಂಹಾ ರ ಮಾಡುತ್ತಾನೆ. ಸಾಲ್ವ ದೇಶದ ರಾಜ ಬ್ರಹ್ಮದತ್ತ. ಮಹಾಭಾರತದಲ್ಲಿ ಭೀಷ್ಮರು ತನ್ನ ಸಹೋದರ ವಿಚಿತ್ರವೀರ್ಯನಿಗೆ ಮದುವೆ ಮಾಡಿಸುವ ಸಲುವಾಗಿ ಕಾಶಿ ರಾಜನ ಮಕ್ಕಳ ಸ್ವಯಂವರಕ್ಕೆ ಬಂದು ರಾಜನ ಮಕ್ಕಳಾದ ಅಂಬೆ,ಅಂಬಿಕೆ, ಅಂಬಾಲಿಕೆ ಈ ಮೂರು ರಾಜಕುಮಾರಿ ಯರನ್ನು ತನ್ನ ಅರಮನೆಗೆ ತಂದು ತಾಯಿ ಸತ್ಯವತಿ ಮುಂದೆ ನಿಲ್ಲಿಸುತ್ತಾನೆ. ಆಗ ರಾಜಕುಮಾರಿ ಅಂಬೆ ಈ ಮದುವೆಗೆ ಒಪ್ಪುವುದಿಲ್ಲ. ನಾನು ಮತ್ತು ಸಾಳ್ವ ದೇಶ ದ ರಾಜ ಒಬ್ಬರನ್ನೊಬ್ಬರು ಪ್ರೀತಿಸಿದ್ಧೇವೆ ನಾನು ಅವನನ್ನು ವಿವಾಹವಾಗುತ್ತೇನೆ ಎಂದು ರಾಜ ಮಾತೆಗೆ ಹೇಳುತ್ತಾಳೆ. ರಾಜಮಾತೆ ಮತ್ತು ಭೀಷ್ಮರು ಇದನ್ನು ಒಪ್ಪಿ ಆಕೆಯನ್ನು ಗೌರವದಿಂದ ಸಾಳ್ವ ರಾಜ್ಯಕ್ಕೆ ಕಳಿಸುತ್ತಾರೆ. ಹಾಗೂ ಇನ್ನಿಬ್ಬರು ಹೆಣ್ಣು ಮಕ್ಕಳು ಅಂಬೆ- ಅಂಬಿಕೆಯರನ್ನು ವಿಚಿತ್ರ ವೀರ್ಯನಿಗೆ ಮದುವೆ ಮಾಡಿಸು ತ್ತಾರೆ. ಅಂಬಾಲಿಕೆ ಯನ್ನು ಸಾಳ್ವರಾಜ ತಿರಸ್ಕರಿಸಿ ಆಕೆ ಹಿಂತಿರುಗುತ್ತಾಳೆ.ಭೀಷ್ಮ ರಿಗೆ, ತನ್ನನ್ನು ಮದುವೆಯಾಗು ಎನ್ನಲು, ಭೀಷ್ಮರು ತಮ್ಮ ಪ್ರತಿಜ್ಞೆಯನ್ನು ತಿಳಿಸಿ ಸಾಧ್ಯವಿಲ್ಲ ಎಂದರು. ಇದರ ಕುರಿತು ಕಥೆ ಮುಂದುವರಿಯುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಅಂಬೆ ಪ್ರೀತಿಸಿದ ಸಾಳ್ವ ರಾಜ್ಯದ ರಾಜ ಬ್ರಹ್ಮದತ್ತ. ಅಂಬೆಯನ್ನ ಬಿಟ್ಟು, ಬೇರೆ ಎರಡು ಮದುವೆ ಮಾಡಿ ಕೊಂಡನು, ಒಬ್ಬ ಪತ್ನಿಗೆ ‘ಸೌಭರಾಟ್’ ಎಂಬ ಒಬ್ಬ ಮಗ ಜನಿಸಿದ. ಶಿವ ಭಕ್ತ ನಾದ ಬ್ರಹ್ಮದತ್ತನು ದಿನವು ಶಿವನನ್ನು ಆರಾಧಿಸುತ್ತಾ, ಭಕ್ತಿಯಿಂದ ಪೂಜಿಸುತ್ತಿ ದ್ದ, ಶಿವನು ಇವನ ಆರಾಧನೆಗೆ ಪ್ರಸನ್ನ ನಾಗಿ ನಿನಗೆ ಏನು ವರ ಬೇಕು ಎಂದು ಕೇಳಿದಾಗ, ಪ್ರಭು ನನಗೆ ಇಬ್ಬರು ಪತ್ನಿ ಯರು. ಶಕ್ತಿ ,ಧೈರ್ಯ,ಬಲಿಷ್ಠ ಹಾಗೂ ಸಾಹಸವುಳ್ಳ ಪುತ್ರ ಸಂತಾನವನ್ನು ಇಬ್ಬ ರಿಗೂ ಕರುಣಿಸು ಎಂದು ಕೇಳಿದನು. ಪರ ಮೇಶ್ವರನು ಇಬ್ಬರು ಗಂಡು ಮಕ್ಕಳ ನ್ನು ಕರುಣಿಸಿದ. ಅವರೇ, ಹಂಸ ಮತ್ತು ಡಿಂಭಕ ಬಾಲ್ಯದಿಂದ ಒಟ್ಟಿಗೆ ಬೆಳೆದರು. ಅವರು ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ.
ಹಂಸ ಮತ್ತು ಡಿಂಭಕ ದೊಡ್ಡವರಾದ ಮೇಲೆ ಶಿವನ ಕುರಿತು ಕಠೋರ ತಪಸ್ಸು ಮಾಡಿದರು. ಶಿವ ಇವರ ತಪಸ್ಸಿಗೆ ಪ್ರಸನ್ನ ಗೊಂಡು ಏನು ಬೇಕೆಂದು ಕೇಳಿದನು. ಪರಮೇಶ್ವರ ನಾವಿಬ್ಬರೂ ಎಂದಿಗೂ ಸೋಲಿಲ್ಲದೆ ಅಜೇಯರಾಗಿರಬೇಕು, ನಮಗೆ ದಿವ್ಯಾಸ್ತ್ರಗಳನ್ನು ಕೊಡಬೇಕು, ನಮ್ಮನ್ನು ಸದಾ ಕಾಲವು ರಕ್ಷಿಸಲು ರಕ್ಷಕ ರಾಗಿರುವಂತೆ ನಿನ್ನ ಇಬ್ಬರು ಗಣಗಳನ್ನು ನಮ್ಮ ಜೊತೆಯಲ್ಲಿ ಬಿಡಬೇಕು ಎಂದು ಮೂರು ವರಗಳನ್ನು ಕೇಳಿದರು ಶಿವನು ತಥಾಸ್ತು ಎಂದು ಅನುಗ್ರಹಿಸಿದನು. ಹಾಗೂ ತನ್ನ ಎರಡು ಪ್ರಮಥ ಗಣಗಳನ್ನು ಕಳುಹಿಸಿಕೊಟ್ಟನು.
ಈಗ ಅವರಿಗೆ ಶಿವನು ಕಳಿಸಿದ ಗಣಗಳ ಕಾವಲು, ಮೊದಲೇ ಇದ್ದ ವರಗಳು, ಶಿವನನ್ನು ತಪಸ್ಸು ಮಾಡಿ ಪಡೆದ ವರಗಳು ಸೇರಿ ಯಾರೂ ಎದುರಿಸಲು ಆಗದಷ್ಟು ಬಲಾಢ್ಯರಾದರು. ಅವರು ಸೊಕ್ಕಿ ಬೆಳೆದರು. ಋಷಿಮುನಿಗಳಿಗೆ ಸಾಮಾನ್ಯರಿಗೆ ತೊಂದರೆ ಕೊಡುವುದು
ಅಡ್ಡ ಬಂದವರನ್ನು ಕೊಲ್ಲುವಂತ ದುಷ್ಟ ತನ ಮಾಡುತ್ತಿದ್ದರು. ಹಂಸ- ಡಿಂಭಕ ರಲ್ಲಿ ತಮ್ಮನಾದ ಡಿಂಭಕನಿಗೆ ಸ್ವಲ್ಪ ದಯೆ- ಕರುಣೆ ಇತ್ತು. ಆದರೆ ಜೇಷ್ಠ ಹಂಸನ ಹೆದರಿಕೆ, ಹಾಗೂ ಪ್ರೀತಿಯಿಂದ, ಅಣ್ಣನ ಆಜ್ಞೆಯನ್ನು ಪಾಲಿಸುತ್ತಿದ್ದ.
ಹಂಸನಿಗೆ ದೇವತೆಗಳ ಮೇಲೆ ಸಿಟ್ಟಿದ್ದ ಕಾರಣ, ಬ್ರಾಹ್ಮಣ ಯುವಕರು, ಋಷಿಗಳ ಜೊತೆ ಸೇರಿ, ಮೂಗು ಹಿಡಿದುಕೊಂಡು ತಪಶ್ಚರ್ಯೆಯಲ್ಲೇ ಮುಳುಗಿ, ಯಾವಾಗಲೂ ಜಪ -ತಪ- ಹೋಮ ಹವನ ಮಾಡಿ ದೇವತೆಗಳ ಶಕ್ತಿ ತುಂಬುತ್ತಾರೆ. ಇದನ್ನು ತಪ್ಪಿಸಬೇಕು ಹೀಗೆ ಯೋಚಿಸಿ ಅವರಿಗೆಲ್ಲ ಮದುವೆ ಮಾಡಿಸಿ ಸಂಸಾರ ಮಾಡುವಂತೆ ಮಾಡಬೇಕೆಂದುಕೊಂಡು, ಬಲವಂತವಾ ಗಿ ಬ್ರಾಹ್ಮಣ ತರುಣರನ್ನು ಎಳೆದುತಂದು ಹುಡುಗಿಯರನ್ನು ಹುಡುಕಿ ತಂದು ಅವರಿಗೆ ಮದುವೆ ಮಾಡಿಸಿ ಬ್ರಾಹ್ಮಣ ಯುವಕರು, ಧ್ಯಾನ- ಪೂಜೆ- ತಪಸ್ಸು ಮಾಡುವುದನ್ನು ತಪ್ಪಿಸುತ್ತಾ ಬಂದರು. ಎಲ್ಲೆಲ್ಲೂ ಅವರ ಆರ್ಭಟ ಹೆಚ್ಚಾಗಿ ಜನ ಹೊರಗೆ ಬರಲು ಹೆದರಿದರು.
ಒಮ್ಮೆ ದೂರ್ವಾಸರು ಅವರ ಆಶ್ರಮದಲ್ಲಿ ಸಾವಿರಾರು ಶಿಷ್ಯರಿಗೆ ವೇದಗಳ ಬೋಧನೆ ಮಾಡುತ್ತಿದ್ದರು. ಕುಟೀರದ ಮುಂದೆ ತಮ್ಮನೊಂದಿಗೆ ಹೋಗುತ್ತಿದ್ದ ಹಂಸ, ಇವರನ್ನು ನೋಡಿ ಋಷಿಗಳಿಗೆ ತಲೆ ಕೆಟ್ಟಿದೆ. ಉಡಲು ಮೈತುಂಬ ಬಟ್ಟೆ ಇಲ್ಲ, ತಿನ್ನಲು ಗತಿ ಇಲ್ಲ. ಎರಡು ಬಟ್ಟೆ ಯಲ್ಲಿ ಮೈ ಮುಚ್ಚಿಕೊಂಡು ಅದೇನು ಬೋಧನೆ ಮಾಡುತ್ತಾರೋ, ಹುಚ್ಚರ ಪರಿವಾರ ಎಂದು ಅಪಹಾಸ್ಯ ಮಾಡಿ ನಕ್ಕನು. ತಮ್ಮ ಡಿಂಭಕ ಹೇಳಿದ. ಅಣ್ಣ ಹಾಗೆಲ್ಲ ಋಷಿಮುನಿಗಳನ್ನು ಹೀಯಾಳಿಸ ಬೇಡ. ಅವರು ತಪಸ್ಸಿನಿಂದಲೇ ಎಲ್ಲವನ್ನು ಪಡೆದಿರುತ್ತಾರೆ.ಅವರ ತಂಟೆಗೆ ಹೋಗ ಬೇಡ ಎಂದನು. ಆದರೆ ಕಿಡಿಗೇಡಿ ಹಂಸನು, ತಮ್ಮಾ ಇದೆಲ್ಲ ನಿನಗೆ ತಿಳಿಯಲ್ಲ. ಬಾ ನನ್ನ ಜೊತೆ ಎಂದು ಹಂಸ ಆಶ್ರಮದೊಳ ಗೆ ನುಗ್ಗಿ ದುರ್ವಾಸರಿಗೆ, ಮುನಿಗಳೇ ಇದೆಲ್ಲ ನಿಮಗೆ ಏಕೆ ಬೇಕು. ಈ ಆಶ್ರಮ ಬಿಟ್ಟು ಗೃಹಸ್ಥಾಶ್ರಮ ಸ್ವೀಕರಿಸಿ, ಇನ್ನು ಮುಂದೆ ಆಶ್ರಮಗಳಲ್ಲಿ ಇರುವುದು ಒಂದೇ ಅದು ಗೃಹಸ್ಥಾಶ್ರಮ. ಇದನ್ನು ಕೇಳಿ ದೂರ್ವಾಸ ರಿಗೆ ಕೋಪ ಬಂತು ಕೆಂಗಣ್ಣಿನಿಂದ ನೋಡಿ ದರು. ಆದರೆ ಹಂಸ- ಡಿಂಭಕರಿಗೆ ಅವರು ಏನು ಮಾಡುವಂತಿರಲಿಲ್ಲ. ಅವರಿಬ್ಬರು
ಶಿವನ ವರದಿಂದ ಹುಟ್ಟಿ, ವರವನ್ನು ಪಡೆ ದವರು, ದೂರ್ವಸರು ಶಿವನ ಅಂಶ ಏನು ಮಾಡಲು ಸಾಧ್ಯವಿಲ್ಲ ಸಿಟ್ಟಿನಿಂದ ಅವಡು ಗಚ್ಚಿದರು. ಹಂಸ ದೂರ್ವಾಸರನ್ನು ನೋಡಿ,ಮುನಿಗಳೇ ಕಣ್ಣು ಬಿಟ್ಟರೆ ನಿಮ್ಮಿಂದ ಏನೂ ಆಗುವುದಿಲ್ಲ, ತಡೆಯುವ ತಾಕತ್ತಿದ್ದರೆ ತಡೆಯಿರಿ ಎಂದು ಆಶ್ರಮದ ಬಹಳಷ್ಟು ಶಿಷ್ಯರನ್ನು ಹೆದರಿಸಿ ಕರೆದೊಯ್ದು ಅವರಿಗೆಲ್ಲ ಮದುವೆ ಮಾಡಿಸಿ ಕುಟೀರಗಳಿಗೆ ಬೆಂಕಿ ಹಾಕಿಸಿದನು.
ಹಂಸ- ಡಿಂಭಕರ, ಅಟ್ಟಹಾಸವನ್ನು ತಡೆಗ ಟ್ಟಲು ದೂರ್ವಾಸರು ಕೃಷ್ಣ- ಬಲರಾಮನ ಬಳಿ ಬಂದರು. ಆ ಸಮಯದಲ್ಲಿ ಕೃಷ್ಣನು, ಸಖಿಯರ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದನು. ಕೃಷ್ಣನ ಹತ್ತಿರ ಬಂದ ದೂರ್ವಾಸರು ಕೋಪದಿಂದ, ಕೃಷ್ಣಾ ಕಾಡಿ ನಲ್ಲಿ ಇಷ್ಟೆಲ್ಲಾ ನಡೆಯುತ್ತಿದೆ. ನೀನು ಎಲ್ಲಾ ತಿಳಿದವನಾಗಿ, ಏನು ಗೊತ್ತಿಲ್ಲದವರಂತೆ ಆಟವಾಡುತ್ತಿರುವೆಯಲ್ಲಾ? ಅಲ್ಲಿ ನೋಡಿ ದರೆ, ಹಂಸ-ಡಿಂಭಕರು ನಮ್ಮ ಆಶ್ರಮ ಹಾಳು ಮಾಡಿದ್ದೂ ಅಲ್ಲದೆ, ಶಿಷ್ಯರನ್ನು ಬಲವಂತವಾಗಿ ಹೊತ್ತೊಯ್ದು ಮದುವೆ ಮಾಡಿಸುತ್ತಿದ್ದಾರೆ, ಎಲ್ಲವನ್ನು ಬಲ್ಲ ನೀನು ಹೀಗೆ ಕುಳಿತಿದ್ದೀಯಲ್ಲ ಇದು ಸರಿಯೇ? ಸಿಟ್ಟಿನಿಂದ ಆರ್ಭಟಿಸಿದರು. ದುರ್ವಾಸರನ್ನು ಸಮಾಧಾನಪಡಿಸಿದ ಕೃಷ್ಣ ಅವರಿಗೆ ಆದರಾತಿಥ್ಯ ಮಾಡಿ, ಮುನಿಗಳೇ ನನಗೆ ಎಲ್ಲಾ ತಿಳಿದಿದೆ. ಅವರಿಗೆ ಪರಮೇಶ್ವರನ ವರವಿದೆ. ಯಾರೇ ಹೋಗಿ ಅವರೊಡನೆ ಹೋರಾಡಿದರು ಅವರು ಸೋಲುವುದಿಲ್ಲ. ಅದಕ್ಕಾಗಿ ನಾನು ಸಮಯ ಕಾಯುತ್ತಿದ್ದೆ, ಆ ಸಮಯ ಈಗ ಕೂಡಿಬಂದಿದೆ ಇನ್ನೇನು ಕೆಲ ದಿನಗಳಲ್ಲೆ ಅವರಿಬ್ಬರು ನಾಶವಾಗುತ್ತಾರೆ ಎಂದನು.
ಹಂಸ ಮತ್ತು ಡಿಂಭಕರಿಗೆ ಸಾವಿನ ಕಾಲ ಸನಿಹವಾಗುತ್ತಿತ್ತು.“ವಿನಾಶಕಾಲೇ ವಿಪ ರೀತ ಬುದ್ಧಿ ಎನ್ನುವಂತೆ, ರಾಜಸೂಯ ಯಾಗ ಮಾಡಬೇಕೆಂದು ಕೊಂಡರು. ದೇಶದ ರಾಜರನ್ನೆಲ್ಲ ಸೋಲಿಸಿ ಕಪ್ಪ ಕಾಣಿಕೆ ತಂದು ನಂತರ ರಾಜಸೂಯ ಯಾಗ ಮಾಡಬೇಕು. ಹಂಸ ಯೋಚಿಸಿದ ಕುತಂತ್ರಿ ಕೃಷ್ಣನಿಂದಲೇ ಕಪ್ಪ ತರಿಸಿಕೊಳ್ಳ ಬೇಕು ಎಂದುಕೊಂಡು ತಮ್ಮನಾದ ಡಿಂಭ ಕನಿಗೆ, ಕೃಷ್ಣನಿರುವ ಪುಷ್ಕರಕ್ಕೆ ಹೋಗಿ ಕಪ್ಪ ಕಾಣಿಕೆ ತರಲು ಹೇಳಿದ. ತಮ್ಮ ಹೇಳಿದ, ಅಣ್ಣ ನಮಗೆ ಯಾಕೆ ಬೇಕು, ಇವತ್ತಿನ ತನಕ ಕೃಷ್ಣನನ್ನು ಯಾರು ಸೋಲಿಸಿಲ್ಲ. ಈಗ ನಾವು ಹೋದರೆ ಉಪಾಯವಾಗಿ ನಮ್ಮನ್ನು ಅವನು ಮುಗಿಸಿಬಿಡುತ್ತಾನೆ.
ನಮಗೆ ಪರಮೇಶ್ವರನ ವರವಿದೆ. ನಮ್ಮ ಪಾಡಿಗೆ ಇರೋಣ ಈ ದುಸ್ಸಾಹಕ್ಕೆ ಹೋಗ ಬೇಡ ಅಣ್ಣ ಎಂದು ವಿನಂತಿಸಿಕೊಂಡನು. ಹಠವಾದಿ ಹಂಸ, ನೋಡು ಹೇಡಿಯಂತೆ ಮಾತಾಡಬೇಡ ಹೇಳಿದಷ್ಟು ಮಾಡು ಹೋಗು ಎಂದನು. ಅಣ್ಣನಿಗೆ ಹೆದರಿದ ಡಿಂಭಕ ಹೊರಟು, ಕೃಷ್ಣನಲ್ಲಿಗೆ ಬಂದು ರಾಜಸೂಯ ಯಾಗ ಮಾಡುವ ವಿಚಾರ ತಿಳಿಸಿ, ಅದಕ್ಕೆ ನೀನು ಕಪ್ಪ ಕಾಣಿಕೆ ಕೊಡ ಬೇಕೆಂದು ಅಣ್ಣ ಹೇಳಿದ್ದಾನೆ ಎಂದನು.
ಕೃಷ್ಣನಿಗೆ, ಡಿಂಬಕನ ಒಳ್ಳೆ ಗುಣ ಗೊತ್ತಿತ್ತು. ನಿಧಾನವಾಗಿ ನೋಡು ಡಿಂಭಕ ನಾವು ಯಾವ ಕಾರಣಕ್ಕೂ ಕಪ್ಪ ಕಾಣಿಕೆ ಕೊಡು ವವರಲ್ಲ ಯುದ್ಧವನ್ನೇ ಮಾಡುತ್ತೇವೆ, ಇದನ್ನು ನಿನ್ನ ಅಣ್ಣನಿಗೆ ಹೇಳು, ಹಾಗೂ, ಈ ವಿಷಯ ತಿಳಿಸಲು ನಿನ್ನ ಜೊತೆ ಧೂತರನ್ನು ಕಳಿಸುತ್ತೇನೆ ಎಂದು ಸಾತ್ಯಕಿ ಯನ್ನು ಕಳಿಸಿದನು. ದೊಡ್ಡ ರಣರಂಗವೇ ಸಿದ್ದವಾಯಿತು. ರಾಕ್ಷಸರಲ್ಲಿ ಹಂಸ ಮತ್ತು ಡಿಂಭಕರ ಜೊತೆ, ವಿಚಕ್ರ, ಹಿಡಿಂಬಾಸುರ, ( ಭೀಮ ಸಂಹರಿಸಿದ ಹಿಡಿಂಬೆಯ ಅಣ್ಣ
ಹಿಡಿಂಬಾಸುರ, ಈ ಕಥೆ ಪಾಂಡವರು ಹುಟ್ಟಿ ಹಸ್ತಿನಾಪುರಕ್ಕೆ ಬಂದು ಅರಗಿನ ಮನೆಗೆ ಹೋಗುವ ಮೊದಲೆ ನಡೆದಿದ್ದು) ಸೇರಿದಂತೆ ಇನ್ನು ಅನೇಕ ರಾಕ್ಷಸರು ಸೇರಿದರು. ಕೃಷ್ಣ ಬಲರಾಮ ಸಾತ್ಯಕಿ ಇವರುಗಳು ತಮ್ಮ ಅಕ್ಷೋಹಿಣಿ ಸೈನ್ಯದ ಜೊತೆ ಯುದ್ಧಕ್ಕೆ ಹೊರಟರು. ಬಲರಾಮ ಹಿಡಿಂಬಾಸುರ, ವಿಚಕ್ಷರನ್ನು ಸೋಲಿಸಿದನು. ಬಲರಾಮನ ಶಕ್ತಿಗೆ ಹೆದರಿ ಅವರಿಬ್ಬರೂ ಓಡಿ ಹೋದರು.ಉಳಿದ ಸೈನ್ಯವ ನ್ನೆಲ್ಲಾ, ಕೃಷ್ಣ, ಸಾತ್ಯಕಿ, ಹಾಗೂ ಸೈನಿಕರು ಸೇರಿ ಧ್ವಂಸ ಮಾಡಿದರು. ಕಡೆಯಲ್ಲಿ ಶಿವನಿಂದ ವರ ಪಡೆದ ಹಂಸ ಮತ್ತು ಡಿಂಭಕ ಮಾತ್ರ ಉಳಿದರು.
ಇವರನ್ನು ತಂತ್ರದಿಂದಲೇ ಕೊಲ್ಲಬೇಕು ಎಂದ ಕೃಷ್ಣನು ತನ್ನ ವೈಷ್ಣವಾಸ್ತ್ರವನ್ನು ಹೆದೆಯೇರಿಸಿದನು. ಇದನ್ನು ಕಂಡು ಹೆದರಿದ ಹಂಸ ಓಡ ತೊಡಗಿದ ಕೃಷ್ಣ ಅವನನ್ನೇ ಹಿಂಬಾಲಿಸಿದ. ಯಮುನಾ ತಟ ಬಂದಿದ್ದೆ ಕಾಳಿಂಗ ಮಡುವಿನ ಹತ್ತಿರ ಬಂದ ಹಂಸ ಕೃಷ್ಣನಿಂದ ಪಾರಾಗಲು ಕಾಳಿಂಗ ಮಡುವಿನಲ್ಲಿ ಧುಮುಕಿದನು. ಇದನ್ನೇ ಕಾಯುತ್ತಿದ್ದ ಕೃಷ್ಣ ಅವನನ್ನು ಬಲವಾಗಿ ತಳ್ಳಿದನು.ಆಳ ದೊಳಗೆ ಹೋದ ಹಂಸನು, ಕಾಳಿಂಗನಷ್ಟೇ ವಿಷಕಾರಿಯಾದ ಧೃತರಾಷ್ಟ್ರ ಎಂಬ ಹಾವಿನ ಬಾಯೊಳಗೆ ಹೋದನು. ಮತ್ತೆ ಈಚೆ ಬರಲಾರದೆ ಎಷ್ಟೋ ಸಾವಿರ ವರುಷ ಅದರೊಳಗೆ ಇರಬೇಕಾಯಿತು.
ಅಣ್ಣನನ್ನು ಹುಡುಕಿಕೊಂಡ ಬಂದ ಡಿಂಭಕ ಕೃಷ್ಣನಿಗೆ ಕೈಮುಗಿದು, ತನ್ನ ಅಣ್ಣನೆಲ್ಲಿ ಎಂದು ಕೇಳಿದ. ಕಾಳಿಂಗನ ಮಡುವಿನೊ ಳಗೆ ಹೋದನು ಎಂಬುದನ್ನು ಕೇಳಿದ ಡಿಂಭಕ ದುಃಖದಿಂದ ಅಳೆತೊಡಗಿದ. ಕೃಷ್ಣ ಸಮಾಧಾನ ಮಾಡಿ, ನೀನು ನ್ಯಾಯ ದಿಂದ ಬದುಕು ಎಂದನು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಆದರೆ ಡಿಂಭಕ ನನ್ನ ಅಣ್ಣನನ್ನು ಬಿಟ್ಟು ನಾನು ಬದುಕಿರ ಲಾರೆ ಎಲ್ಲರಿಗೂ ಅವನು ಕೆಟ್ಟವನಾದರೂ ನನ್ನನ್ನು ಮಾತ್ರ ಪ್ರೀತಿಯಿಂದ ನೋಡಿ ಕೊಂಡನು. ನನಗೆ ರಾಜ್ಯ ಅಧಿಕಾರ ಏನು ಬೇಡ ನಾನು ಅಣ್ಣನ ಜೊತೆ ಹೋಗುತ್ತೇನೆ ಎಂದು ತನ್ನ ತಲೆಯನ್ನು ತಾನೇ ಕಡಿದು ಕೊಂಡನು.( ಕೃಷ್ಣ ಅವನನ್ನು ತಡೆಯಲಿಲ್ಲ. ಕಾರಣ ಮುಂದೆ ಅವನು ಅಣ್ಣನನ್ನು ಕೊಂದ ಸೇಡಿನ ನೆಪವ ಮಾಡಿಕೊಂಡು ಹಂಸನಂತೆ ದುಷ್ಟನಾಗುತ್ತಿದ್ದನು) ಶಿವ ನಿಂದ ಶಕ್ತಿಯುತವಾದ ವರಗಳನ್ನು ಪಡೆ ದು ಮೆರೆಯುತ್ತಿದ್ದ ಹಂಸ -ಡಿಂಭಕರೆಂಬ
ಕಂಟಕವನ್ನು ಕೃಷ್ಣ ಉಪಾಯವಾಗಿ ತೊಲಗಿಸಿದನು.
ಶ್ರೀ ಕೃಷ್ಣೋ ಮುರಲೀಧರೋ, ಗಿರಿಧರೋ
ಗೋವರ್ಧನಶ್ರೀಧರೋ.ಮಾಯಾ ಮೋಹನ
ಪೂರ್ಣ ವಿಷ್ಣುಪರಮೋ ನಾರಾಯಣ ಕೇಶವ
ಪೂರ್ಣ ಜ್ಞಾನ ವಿಶೇಷ ದಿವ್ಯ ಪುರುಷ
ಶ್ರೀದೇವಕೀನಂದನ ಪಾಯನ್ನಶ್ಯರಣಾಗತಾಂಶ್ಚ
ಕೃಪಯಾ ದೀಯಾತ್ಪರಂ ಮಂಗಲಂ!








