ಹಾವೇರಿ: ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಕೆರಳಿಸುವಂತಿದೆ.
ಈ ಕುರಿತು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಹೇಳಿದರು. ಸಾಹಿತ್ಯ ಪರಿಷತ್ ಹಿಂದೆ ಯಾವತ್ತೂ ಕೋರ್ಟ್ ಗೆ ಹೋದ ನಿದರ್ಶನಗಳಿಲ್ಲ. ಅದರೆ ತನ್ನ ಅಧಿಕಾರಾವಧಿಯಲ್ಲಿ ಅದು ನಡೆಯಲಿದೆ ಎಂದು ಜೋಶಿ ಹೇಳಿದರು.
ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. ಕರ್ನಾಟಕ , ಕನ್ನಡ ವಿಚಾರದಲ್ಲಿ ಯಾಕೆ ಈ ರೀತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬುದು ಗೊತ್ತಗಿಲ್ಲ. ಯಾವ ಆಧಾರದಲ್ಲಿ ಕ್ನಾಟಕ ಸ್ತಬ್ಧಚಿತ್ರ ತಿರಸ್ಕರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ನಾನೇ ದೆಹಲಿಗೆ ಹೋಗಿ ಸರಿಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.