ಬೆಂಗಳೂರು: ಸ್ಯಾಂಡಲ್ವುಡ್ ನಟಿ ವೈಷ್ಣವಿ ಅವರು ಮದುವೆ ನಿಶ್ಚಯವಾಗಿದೆ ಎನ್ನಲಾಗಿದ್ದು, ಇದರ ಫೋಟೋಗಳು ಕೂಡ ವೈರಲ್ ಆಗಿದೆ. ವೈರಲ್ ಫೋಟೋದಲ್ಲಿ ನಟಿ ವೈಷ್ಣವಿ ಹುಡುಗನ ಜೊತೆಗೆ ಅಂದವಾದ ಹಾರವನ್ನು ಹಾಕಿಕೊಂಡು ನಿಂತು ಪೋಸ್ ಕೊಡುವುದನ್ನು ಸಹ ನೋಡಬಹುದಾಗಿದೆ.
ಆದರೆ ಈ ಬಗ್ಗೆ ಖಾಸಗಿ ಮಾಧ್ಯಮೊಂದರ ಜೊತೆಗೆ ನಟಿ ಹೇಳಿರುವ ನಟಿ ವೈಷ್ಣವಿ ಅದು ಎಂಗೇಜ್ಮೆಂಟ್ ಅಲ್ಲ, ನಾನು ಇನ್ನೂ ಅದನ್ನು ಒಪ್ಪಿಕೊಂಡಿಲ್ಲ, ಹುಡುಗನ ಕಡೆಯವರು ಬಂದು ನೋಡಿಕೊಂಡು ಹೋಗಿರುವು ನಿಜ,ನನಗೆ ಸಮಯಬೇಕಾಗಿದೆ ಅಂತ ಹೇಳಿದ್ದಾರೆ ಎನ್ನಲಾಗಿದೆ.
ಆದರೆ ನಟಿ ವೈಷ್ಣವಿ ಅವರ ನೌಂಟಕಿ ಆಡದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಅವರ ಮಾತಿಗೆ ವ್ಯಾಪಾಕ ಟೀಕೆ ಕೇಳಿ ಬರುತ್ತಿದೆ. ಒಪ್ಪಿಗೆ ಇಲ್ಲದೇ ಹುಡುಗನ ಪಕ್ಕ ನಿಂತು ಹಾರ ಯಾಕಮ್ಮ ಹಾಕೊಂಡೇ, ಒಪ್ಪಿಗೆ ಪಡೆದುಕೊಂಡೇ ಹಾರಹಾಕೊಂಡು ಕಿಸಿಕ್ ಅಂತ ಪೋಸ್ ಕೊಡಬಹುದಾಗಿತ್ತು ಅಲ್ವಾ? ಮನೆಯವರ ಒಪ್ಪಿಗೆಗೆ ನೀನು ಎಸ್ ಅಂತ ಹೇಳ್ತಾ ಇದ್ದೀಯಾ ಆದ್ರೆ ಈಗ ವೈರಲ್ ಫೋಟೋದಲ್ಲಿ ನೋಡಿದ್ರೆ ಅದು ಯಾವುದು ಕೂಡ ಕಾಣಿಸುವುದಿಲ್ಲ ಅಲ್ವ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಮದುವೆ ಅಂದ್ರೆ ಮಕ್ಕಳ ಆಟವಲ್ಲ, ಹುಡುಗ ಮನೆಗೆ ಬಂದು ಆತನ ಜೊತೆಗೆ ಪೋಸ್ ಕೋಡುವ ಮುನ್ನ ಮನೆಯಲ್ಲಿ ಕುಂತು ಮಾತನಾಡಬಹುದಾಗಿತ್ತು ಅಲ್ವಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಟಿ ವೈಷ್ಣವಿ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ ಎನ್ನಲಾಗಿರುವ ಮಾತು ಈಗ ವಿವಾದಕ್ಕೆ ಕಾರಣವಾಗಿದ್ದು, ನಟಿಗೆ ನೈತಿಕತೆ ಇದ್ಯಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.