ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡ ಮೀಸಲಾತಿ ಶೇ.3 ರಿಂದ ಶೇ.7ಕ್ಕೆ ಏರಿಕೆಗೆ ಸರ್ವ ಸಮ್ಮತ ನಿರ್ಣಯ. ಸಮಾಜಿಕ ನ್ಯಾಯದ ಪರ ನುಡಿದಂತೆ ನಡೆದ ನಮ್ಮ ಬಿಜೆಪಿ ಸರ್ಕಾರ ಎಂಬುದಾಗಿ ಸಚಿವ ಬಿ.ಶ್ರೀರಾಮುಲು ( Minister B Sriramulu ) ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡ ಮೀಸಲಾತಿ ಶೇ.3 ರಿಂದ ಶೇ.7ಕ್ಕೆ ಏರಿಕೆಗೆ ಸರ್ವ ಸಮ್ಮತ ನಿರ್ಣಯ.
ಸಮಾಜಿಕ ನ್ಯಾಯದ ಪರ ನುಡಿದಂತೆ ನಡೆದ ನಮ್ಮ @BJP4Karnataka ಸರ್ಕಾರ.
— B Sriramulu (@sriramulubjp) October 7, 2022
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಳಿಗೆ ಮೀಸಲಾತಿ ಹೆಚ್ಚಿಸೋ ಐತಿಹಾಸಿಕ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ವಂದನೆಗಳು. ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯ ನ್ಯಾಯ ಸಮ್ಮತ ವರದಿ ಅನುಷ್ಠಾನಕ್ಕೆ ಸರ್ಕಾರ ನಿರ್ಧಾರ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಳಿಗೆ ಮೀಸಲಾತಿ ಹೆಚ್ಚಿಸೋ ಐತಿಹಾಸಿಕ ನಿರ್ಣಯ ಕೈಗೊಂಡ @BSBommai ಅವರಿಗೆ ಹೃತ್ಪೂರ್ವಕ ವಂದನೆಗಳು.
ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯ ನ್ಯಾಯ ಸಮ್ಮತ ವರದಿ ಅನುಷ್ಠಾನಕ್ಕೆ ಸರ್ಕಾರ ನಿರ್ಧಾರ.
— B Sriramulu (@sriramulubjp) October 7, 2022
ಅಂದಹಾಗಿ ಇಂದು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸರ್ವಪಕ್ಷಗಳ ಸಭೆ ನಡೆಸಿದ್ದರು. ಈ ಸಭೆಯ ಬಳಿಕ ಮಾತನಾಡಿದಂತ ಅವರು, ಇವತ್ತು ನಾನು ಮೊನ್ನೆ ನಡೆದಂತ ಅಧಿವೇಶನದಲ್ಲಿ ಹೇಳಿದಂತೆ ಸರ್ವಪಕ್ಷಗಳ ಸಭೆ ಕರೆದು, ಬಹಳ ವರ್ಷದ ಬೇಡಿಕೆ, ನ್ಯಾಯ ಸಮ್ಮತವಾದಂತ ಬೇಡಿಕೆ. ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆ ಆಧರಿಸಿ ಮೀಸಲಾತಿ ಹೆಚ್ಚಿಸುವಂತೆ, ಎಸ್ಸಿ, ಎಸ್ಟಿ ಸಮುದಾಯದವರ ಬೇಡಿಕೆಯ ಬಗ್ಗೆ ಚರ್ಚಿಸಲಾಯಿತು ಎಂದರು.
ನಾಗಮೋಹನ್ ದಾಸ್ ಸಮಿತಿಯನ್ನು ಮೀಸಲಾತಿ ಹೆಚ್ಚಿಸೋ ಸಂಬಂಧ ರಚಿಸಲಾಗಿತ್ತು. ಮತ್ತೆ ಆರು ತಿಂಗಳ ಕಾಲಾವಕಾಶ ಕೇಳಿದ್ದ ಕಾರಣ, ಅದರಂತೆ ಮೀಸಲಾತಿ ಹೆಚ್ಚಳದ ಸಂಬಂಧ ಅಧ್ಯಯನಕ್ಕೆ ಅವಕಾಶ ನೀಡಲಾಗಿತ್ತು. ಆ ಸಮಿತಿಯು ವರದಿಯನ್ನು ನೀಡಿದೆ. ಆ ಬಳಿಕ ಸುಪ್ರೀಂ ಕೋರ್ಟ್ ತೀರ್ಪು ಕೂಡ ಮೀಸಲಾತಿ ಹೆಚ್ಚಳ ಸಂಬಂಧ ಬಂದಿತ್ತು. ಈ ಬಗ್ಗೆಯೂ ಸಮಿತಿ ರಚನೆ ಮಾಡಿ, ಅದರಿಂದಲೂ ಸಲಹೆ ಪಡೆಯಲಾಯಿತು ಎಂದು ತಿಳಿಸಿದರು.
7 ಶಿಫಾರಸ್ಸುಗಳನ್ನು ನಾಗಮೋಹನ್ ದಾಸ್ ಸಮಿತಿಯು ನೀಡಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಕಾನೂನಾತ್ಮಕ ನಿಟ್ಟಿನಲ್ಲಿ ಸರ್ವ ಸಮ್ಮತದ ನಿರ್ಣಯವನ್ನು ಇಂದಿನ ಸರ್ವ ಪಕ್ಷಗಳ ಸಭೆಯಲ್ಲಿ ಮಾಡಲಾಗಿದೆ. ಎಸ್ಸಿ ಸಮುದಾಯದ 15 ರಿಂದ 17ರಷ್ಟು, ಎಸ್ಟಿ ಸಮುದಾಯದವ ಮೀಸಲಾತಿಯಿಂದ 3 ರಿಂದ 7ರಷ್ಟು ಹೆಚ್ಚಳ ಮಾಡುವ ಬಗ್ಗೆ ಇಂದಿನ ಸರ್ವ ಪಕ್ಷಗಳ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ನಮ್ಮ ಪಕ್ಷದ ಸಭೆ, ಕೋರ್ ಕಮಿಟಿ ಮೀಟಿಂಗ್ ನಲ್ಲಿಯೂ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ನಿರ್ಣಯ ಮಾಡಲಾಗಿದೆ ಎಂದರು.
ಈ ಎಲ್ಲ ಹಿನ್ನಲೆಯಲ್ಲಿ ನಾಳೆಯೇ ಕ್ಯಾಬಿನೆಟ್ ಮೀಟಿಂಗ್ ಕರೆಯಲಾಗುತ್ತದೆ. ನ್ಯಾ.ನಾಗಮೋಹನ್ ದಾಸ್ ಸಮಿತಿಯು ನೀಡಿದಂತ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆಯೂ ಸಮಗ್ರವಾಗಿ ಚರ್ಚಿಸಲಾಗುತ್ತದೆ. ಈ ಬಳಿಕ ಎಸ್ಸಿ ಮೀಸಲಾತಿಯನ್ನು 15 ರಿಂದ 17ಕ್ಕೆ ಹಾಗೂ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ 7ರಷ್ಟು ಹೆಚ್ಚಳದ ಬಗ್ಗೆ ಅಧಿಕೃತ ಆದೇಶದ ಮುದ್ರೆಯನ್ನು ನಾಳೆ ಕ್ಯಾಬಿನೇಟ್ ಮೀಟಿಂಗ್ ಬಳಿಕ ಕೊಡುತ್ತೇವೆ ಎಂದು ತಿಳಿಸಿದರು.
BREAKING NEWS : SC,ST ಸಮುದಾಯದ ಮೀಸಲಾತಿ ಹೆಚ್ಚಳ : ಸಿಎಂ ‘ಬಸವರಾಜ ಬೊಮ್ಮಾಯಿ’ ಘೋಷಣೆ |Basavaraj Bommai
ಇದರ ಜೊತೆ ಜೊತೆಗೆ ಇನ್ನೂ ಹತ್ತು ಹಲವಾರು ಬೇಡಿಕೆಗಳಿವೆ. ಸಮಗ್ರ ರಿಸರ್ವೇಶನ್ ಬಗ್ಗೆಯೂ ಚರ್ಚಿಸೋ ಅಗತ್ಯವಿದೆ. ಆದ್ದರಿಂದ ಅದರ ಬಗ್ಗೆಯೂ ಈಗಾಗಲೇ ಆಯೋಗಗಳು ಕೊಟ್ಟಿರುವ ತೀರ್ಮಾನದ ಹಿನ್ನಲೆಯಲ್ಲಿ, ಅದನ್ನು ಅಧ್ಯಯನ ಮಾಡಿ, ಆ ನಿಟ್ಟಿನಲ್ಲಿಯೂ ಬರುವಂತ ದಿನಗಳಲ್ಲಿಯೂ ಎಸ್ಸಿ, ಎಸ್ಟಿ ಒಳಗಡೆ ನ್ಯಾಯಕೊಡುವಂತ ಕೆಲಸವನ್ನು ಮಾಡಲಾಗುತ್ತದೆ. ಯಾವುದೇ ಸಮಾಜಕ್ಕೆ ಅನ್ಯಾಯ ಮಾಡದೇ, ಮುಂದಿನ ದಿನಗಳಲ್ಲಿ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.