ಬೆಂಗಳೂರು :ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022” ಕುರಿತು ನ್ಯಾಯಮೂರ್ತಿಗಳು, ಸಾಹಿತಿಗಳು, ಕೈಗಾರಿಕೋದ್ಯಮಿಗಳು, ಕನ್ನಡಪರ ಚಿಂತಕರು, ಕನ್ನಡಪರ ಮಠಾಧೀಶರು, ಶಿಕ್ಷಣ ತಜ್ಞರು,ಕಾನೂನು ತಜ್ಞರು, ಮಾಧ್ಯಮ ಮುಖ್ಯಸ್ಥರು, ಕನ್ನಡ ಹೋರಾಟಗಾರರು ಹಾಗೂ ವಿವಿಧ ಗಣ್ಯರೊಂದಿಗೆ ನಡೆದ ʻಚಿಂತನಾ ಗೋಷ್ಠಿಯಲ್ಲಿʼ ಸರ್ವಾನುಮತದಿಂದ ಸ್ವೀಕರಿಸಿದ ಸಲಹೆ-ಸೂಚನೆಗಳನ್ನು ಪರಿಶೀಲಿಸಿ ವಿಧೇಯಕದ ತಿದ್ದುಪಡಿಗಾಗಿ ಮಾಡಲಾದ ಶಿಫಾರಸ್ಸನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಮಂತ್ರಿಗಳಿಗೆ ಕಳಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನ ಸಭೆಯಲ್ಲಿ ಮಂಡನೆಯಾಗಿರುವ ಕನ್ನಡಿಗರ ಬಹುನಿರೀಕ್ಷಿತ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022”ದ ಬಗ್ಗೆ ಅಕ್ಟೋಬರ್ 12ರ ಬುಧವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಚಿಂತನಾ ಗೋಷ್ಠಿಯಲ್ಲಿ ದಿನ ಪೂರ್ತಿ ಗಂಭಿರ ಚರ್ಚೆ ನಡೆಸಲಾಗಿ ಕೆಲವು ಸಲಹೆಗಳು ಒಕ್ಕೊರಲ ಅಭಿಪ್ರಾಯದಲ್ಲಿ ವ್ಯಕ್ತವಾಗಿತ್ತು.
ಈ ಬಾರಿ ನಮ್ಮದೇ ಸರ್ಕಾರ ಬಂದರೇ ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಕೌಶಲ್ಯ ಶಿಕ್ಷಣ ವಿವಿ ಸ್ಥಾಪನೆ – HDK
ಕನ್ನಡಪರ ಮಠಾಧೀಶರುಗಳಾದ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸಾಮೀಜಿಗಳು, ಬೇಲಿಮಠದ ಶಿವರುದ್ರ ಸಾಮೀಜಿಗಳು, ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ, ಕಾನೂನು ಮತ್ತು ಸಂಸದೀಯ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಮಾಜಿ ಕಾನೂನು ಸಚಿವರಾದ ಎಚ್.ಕೆ. ಪಾಟೀಲ, ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್, ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಲಿಂಗೆಗೌಡ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯೋಜಿತ ಅಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ್ರಾಜ್, ಐಟಿ ಹಾಗೂ ಸಮಾನ ಶಿಕ್ಷಣತಜ್ಞ ಪ್ರಕಾಶ ಹೆಬ್ಬಳ್ಳಿ, ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ, ವಿಜಯವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ಚನ್ನೇಗೌಡ, ವಿಸ್ತಾರ ಟಿವಿ ಪ್ರಧಾನ ಸಂಪಾದಕರಾದ ಹರಿಪ್ರಕಾಶ ಕೋಣೆಮನೆ, ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ ಚೆನ್ನಂಗಿಹಳ್ಳಿ, ಹೊಸದಿಗಂತ ಸಮೂಹ ಸಂಪಾದಕರಾದ ವಿನಾಯಕ ಭಟ್ ಮೂರೂರು, ಕೋಲಾರವಾಣಿ ಸಂಪಾದಕರಾದ ಮುರಳಿಪ್ರಸಾದ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಬಿ.ವಿ. ಗೋಪಾಲರೆಡ್ಡಿ, ಹೋಟೇಲ್ ಮಾಲಿಕರ ಸಂಘ ಅಧ್ಯಕ್ಷರಾದ ಪಿ.ಸಿ. ರಾವ್, ಮಾಲಿ ದೇಶದ ರಾಯಭಾರಿ ಎಚ್.ವಿ.ಎಸ್. ಕೃಷ್ಣ, ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕನ್ನಡಪರ ಚಿಂತಕ ಹಾ.ವಿ. ಹರೀಶ್, ಹಲ್ಮಿಡಿ ಕೂಟದ ಜ್ಞಾನೇಶ್ವರ, ಕರವೇ ಪತ್ರಿಕಾ ಕಾರ್ಯದರ್ಶಿ ಗೋ. ಮೂರ್ತಿ ಯಾದವ್, ಪ್ರಾಧ್ಯಾಪಕ ಪ್ರೊ. ಎ. ನಾರಾಯಣ, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎಂ. ನರಸಿಂಹಮೂರ್ತಿ, ಬರಹಗಾರ ಪ್ರೊ. ಜಿ. ಅಶ್ವತ್ಥನಾರಾಯಣ, ಕನ್ನಡಪರ ಹೋರಾಟಗಾರರಾದ ಸಾ.ರಾ. ಗೋವಿಂದು, ಎಂ. ರಾಮೇಗೌಡ, ಶ್ರೀರಾಮೇಗೌಡ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಕನ್ನಡಪರ ಚಿಂತಕರಾದ ಬನವಾಸಿ ಬಳಗದ ಆನಂದ್, ಸರ್ದಾರ್ ಬಲ್ಜಿತ್ ಸಿಂಗ್, ಶಶಿಕಲಾ ಅವರುಗಳು ಸೇರಿದಂತೆ 40 ಕ್ಕೂ ಅಧಿಕ ಗಣ್ಯರು ಈ ಚಿಂತನಾಗೋಷ್ಠಿಯಲ್ಲಿ ಭಾಗವಹಿಸಿದ್ದರು ಎಂದಿದ್ದಾರೆ.
‘ಕರ್ನಾಟಕ’ಕ್ಕೆ ಕೇಂದ್ರೀಕೃತ ಕೈಗಾರಿಕಾ ತಪಾಸಣಾ ವ್ಯವಸ್ಥೆ ಜಾರಿಗೆ ‘ಸ್ಕಾಚ್ ಅವಾರ್ಡ್’
ವಿಧೇಯಕ ಅನುಷ್ಠಾನ ಕಾರ್ಯವ್ಯವಸ್ಥೆಯಲ್ಲಿ ಅಧಿಕಾರಿಗಳದ್ದೇ ಪಾರುಪತ್ಯ ಕಂಡುಬರುತ್ತಿದ್ದು. ಕೇವಲ ಅಧಿಕಾರಿಗಳಿಂದ ಸಮಗ್ರ ಕನ್ನಡ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರನ್ನು ಆಯಾ ಕಾರ್ಯಕ್ರಮ ಅನುಷ್ಠಾನ ಸಮಿತಿಗಳಲ್ಲಿ ಸೇರಿಸಬೇಕು, ಇಲ್ಲದಿದ್ದರೆ ಈ ಕಾಯ್ದೆಗೆ ಸ್ಪಷ್ಟತೆ ಇರುವುದಿಲ್ಲ. ಇದು ನಿಶ್ಯಕ್ತ ಕಾಯಿದೆ ಆಗಬಾರದು, ಸಶಕ್ತ ಕಾಯಿದೆ ಆಗಬೇಕು ಎನ್ನುವ ಸರ್ವಾನುಮತದ ಅಭಿಪ್ರಾಯ ವ್ಯಕ್ತವಾಗಿತ್ತು ಎಂದರು.
ಶಿವಮೊಗ್ಗ: ಜಿಲ್ಲೆಯಲ್ಲಿ ಪವಿತ್ರ ಮಣ್ಣು ಸಂಗ್ರಹ ಅಭಿಯಾನ ಯಶಸ್ವಿಗೆ ಕ್ರಮ – ಜಿಲ್ಲಾಧಿಕಾರಿ ಡಾ.ಸೆಲ್ವಮಣಿ
ಈ ಚಿಂತನಾ ಗೋಷ್ಠಿಯಲ್ಲಿ ಒಮ್ಮತದಿಂದ ನಿರ್ಧಾರ ಕೈಗೊಂಡು, ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಹಾಗೂ ಎಲ್ಲ ಕನ್ನಡ ಸಂಘ-ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾದ ಮತ್ತು ಸರ್ಕಾರದಿಂದ ರಾಜ್ಯ ಸಚಿವ ಸ್ಥಾನಮಾನ ಗೌರವವನ್ನು ಹೊಂದಿರುವAತಹ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ರಾಜ್ಯಮಟ್ಟದ ಸಮಿತಿಗೆ ಉಪಾಧ್ಯಕ್ಷರಾಗಬೇಕು ಎಂದು ಒಕ್ಕೊರಲಿನಿಂದ ಹೇಳಿ, ಜಿಲ್ಲಾ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಚುನಾಯಿತ ಅಧ್ಯಕ್ಷರುಗಳು ಇರುವಂತೆ, ತಾಲ್ಲೂಕು ಮಟ್ಟದ ಸಮಿತಿಯಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು ಕಾರ್ಯನಿರ್ವಹಿಸಬೇಕು. ಜೊತೆಗೆ ಸರ್ಕಾರಿ ಅಧಿಕಾರೇತರ ಸದಸ್ಯರುಗಳೂ ಈ ಸಮಿತಿಗಳಲ್ಲಿ ಇರಬೇಕು ಎಂದು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಕನ್ನಡಪರ ಚಿಂತಕ ಶ್ರೀ ರಾ.ನಂ ಚಂದ್ರಶೇಖರ, ಶಿಕ್ಷಣ ತಜ್ಞರಾದ ನಿರಂಜನ ಆರಾಧ್ಯ, ಜಿ.ಎಸ್. ಜಯದೇವ, ಮೊದಲಾದ ಗಣ್ಯರು ಅನಿವಾರ್ಯ ಕಾರಣಗಳಿಂದಾಗಿ ಈ ಚಿಂತನಾ ಗೋಷ್ಠಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ, ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಪರಿಷತ್ತಿಗೆ ಸಲ್ಲಿಸಿದ್ದಾರೆ. ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿದ್ದ ಗಣ್ಯರು, ತಜ್ಞರು ಏಕಧ್ವನಿಯಲ್ಲಿ ಕೊಟ್ಟ ಸಲಹೆ-ಸೂಚನೆಗಳನ್ನು ಹಾಗೂ ಲಿಖಿತ ರೂಪದಲ್ಲಿ ಬಂದಂತಹ ಅಭಿಪ್ರಾಯಗಳನ್ನು ಪರಿಗಣಿಸಿ, ಪರಿಶೀಲಿಸಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022” ಕ್ಕೆ ಸೂಕ್ತ ಪರಿಷ್ಕರಣೆಗಳನ್ನು ಮಾಡಿದ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.