Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ

02/03/2026 8:13 PM

ಪತ್ರಕರ್ತರ ವೃತ್ತಿಯೇ ಸವಾಲಿನದ್ದು, ಧೈರ್ಯ, ನಿಷ್ಠೆಯಿಂದ ಕೆಲಸ ಮಾಡಿ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

02/03/2026 8:00 PM

ಡಾಂಬರ್ ರಸ್ತೆಯ ಮೆಲೆ ಕಾಮದಹನ ಮಾಡಬೇಡಿ: ಸಾಗರ ಲೋಕೋಪಯೋಗಿ ಇಲಾಖೆ AE ಪರಶುರಾಮ ಮನವಿ

02/03/2026 7:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ರಕರ್ತರ ವೃತ್ತಿಯೇ ಸವಾಲಿನದ್ದು, ಧೈರ್ಯ, ನಿಷ್ಠೆಯಿಂದ ಕೆಲಸ ಮಾಡಿ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
KARNATAKA

ಪತ್ರಕರ್ತರ ವೃತ್ತಿಯೇ ಸವಾಲಿನದ್ದು, ಧೈರ್ಯ, ನಿಷ್ಠೆಯಿಂದ ಕೆಲಸ ಮಾಡಿ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

By kannadanewsnow0902/03/2026 8:00 PM

ಮುಂಬಯಿ: ಪತ್ರಕರ್ತರ ವೃತ್ತಿಯೇ ಸವಾಲಿನದ್ದು. ಅದನ್ನು ಧೈರ್ಯ ಮತ್ತು ನಿಷ್ಠೆಯಿಂದ ಎದುರಿಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.

ಮುಂಬಯಿ ಅಂಧೇರಿ ಪೂರ್ವದ ಕ್ಲಬ್ ಹೌಸ್‌ನ ಸಭಾಗೃಹದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮಹಾರಾಷ್ಟ್ರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರ ಸಂಘಟನೆ ಕ್ರೀಯಾಶೀಲಗೊಳಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಘಟಿತ ಶಕ್ತಿಯ ಮೂಲಕ ಮಾತ್ರ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ನಮ್ಮದು. ಹೋರಾಟದ ಮೂಲಕವೇ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದ್ದು, ಸರ್ಕಾರವೂ ಅದಕ್ಕೆ ಸ್ಪಂಧಿಸಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗ ಪತ್ರಕರ್ತರು ಒಗ್ಗೂಡಿ ಕೆಲಸ ಮಾಡಬೇಕು. ನಿಮ್ಮ ಜೊತೆಗೆ ಸದಾ ನಾವಿರುತ್ತೇವೆ ಎಂದು ಹೇಳಿದರು.

ಪತ್ರಕರ್ತರ ಹಕ್ಕುಗಳು, ಭದ್ರತೆ, ಕಲ್ಯಾಣ ಯೋಜನೆಗಳಿಗಾಗಿ ಸಂಘ ಬದ್ಧವಾಗಿ ಕೆಲಸ ಮಾಡುತ್ತಿದೆ. ಹೊರ ನಾಡಿಗೂ ಕೆಯುಡಬ್ಲೂೃಜೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಎಲ್ಲರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ನಮ್ಮ ಸೇವೆ ಮೂಲಕ ಎಷ್ಟು ಜನರ ಮನಸ್ಸನ್ನ ಗೆಲುತ್ತೇವೆ ಎನ್ನುವುದು ಮುಖ್ಯ. ಜನರ ಹೃದಯಗಳನ್ನು ತಲುಪುವುದು, ಸಾಧ್ಯವಾದಷ್ಟು ಜನರ ಕಣ್ಣೀರು ಒರೆಸುವುದು ಮುಖ್ಯ ಆ ಮೂಲಕ ನಮ್ಮ ಬದಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಸಂಘಟನೆಯ ಮೂಲಕ ಪತ್ರಕರ್ತರಲ್ಲಿನ ಸಂಬಂಧಗಳು ಅನ್ನೋನ್ಯವಾಗಿ ಸಾಂಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಡೈರಿ ಬಿಡುಗಡೆ:

ಕೆಯುಡಬ್ಲ್ಯೂಜೆ ಮಹಾರಾಷ್ಟ್ರ-2026ನೇ ಸಾಲಿನ ಡೈರಿ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೆಯುಡಬ್ಲೂಜೆ ಮಹಾರಾಷ್ಟ್ರ ರಾಜ್ಯ ಘಟಕದ ನೂತನ ಪದಾಧಿಕಾರಿಗಳಿಗೆ ಚುನಾವಣಾ ಪ್ರಮಾಣ ಪತ್ರವನ್ನು ನೀಡಲಾಯಿತು.

ಅಧಿಕಾರ ಹಸ್ತಾಂತರ:

ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಶಿವ ಮೂಡಿಗೆರೆ ಹಾಗೂ ಕೋಶಾಧಿಕಾರಿ ಸದರಾಮ ಎನ್.ಶೆಟ್ಟಿ ಸಂಪದ ಮನೆ ಅವರಿಗೆ ನಿಕಟಪೂರ್ವ ಅಧ್ಯಕ್ಷ ರೋನ್ಸ್ ಬಂಟ್ವಾಳ ಅವರು ಅಧಿಕಾರ ಹಸ್ತಾಂತರಿಸಿದರು.

ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಮಹಾರಾಷ್ಟ್ರ ಘಟಕದ ಚುನಾವಣಾ ಅಧಿಕಾರಿ ಸಿಎಂ ಜಗದೀಶ್ ಬಿ.ಶೆಟ್ಟಿ, ಡಾ.ಜಿ.ಪಿ ಕುಸುಮ, ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಸಂಸ್ಥಾಪಕ ಅಧ್ಯಕ್ಷ ರೋನ್ಸ್ ಬಂಟ್ವಾಳ ಮಾತನಾಡಿದರು.

ಮಹಾರಾಷ್ಟ್ರ ಉಪಾಧ್ಯಕ್ಷ ಶ್ಯಾಮ್ ಎಂ.ಹಂದೆ, ಗೋಪಾಲ ಪೂಜಾರಿ ತ್ರಾಸಿ, ಕಾರ್ಯಕಾರಿ ಸಮಿತಿ ಸದಸ್ಯ ಡಾ.ದಿನೇಶ್ ಎನ್.ಶೆಟ್ಟಿ ರೆಂಜಾಳ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸವಿತಾ ಎಸ್.ಶೆಟ್ಟಿ ಪ್ರಾರ್ಥಿಸಿದರು. ಅನಿತಾ ಪೂಜಾರಿ ತಾಕೋಡೆ ನಿರೂಪಿಸಿದರು.

ಡಾಂಬರ್ ರಸ್ತೆಯ ಮೆಲೆ ಕಾಮದಹನ ಮಾಡಬೇಡಿ: ಸಾಗರ ಲೋಕೋಪಯೋಗಿ ಇಲಾಖೆ AE ಪರಶುರಾಮ ಮನವಿ

BIG NEWS: ರಾಜ್ಯಾಧ್ಯಂತ ಇ-ಸ್ವತ್ತು ತಂತ್ರಾಂಶದಡಿ 1,14,907 ಅರ್ಜಿಗಳನ್ನು ಅನುಮೋದನೆ

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ

02/03/2026 8:13 PM1 Min Read

ಡಾಂಬರ್ ರಸ್ತೆಯ ಮೆಲೆ ಕಾಮದಹನ ಮಾಡಬೇಡಿ: ಸಾಗರ ಲೋಕೋಪಯೋಗಿ ಇಲಾಖೆ AE ಪರಶುರಾಮ ಮನವಿ

02/03/2026 7:53 PM1 Min Read

HDK ಕುಮ್ಮಕ್ಕಿನಿಂದಲೇ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು: ಮದ್ದೂರು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ

02/03/2026 7:01 PM3 Mins Read
Recent News

BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ

02/03/2026 8:13 PM

ಪತ್ರಕರ್ತರ ವೃತ್ತಿಯೇ ಸವಾಲಿನದ್ದು, ಧೈರ್ಯ, ನಿಷ್ಠೆಯಿಂದ ಕೆಲಸ ಮಾಡಿ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

02/03/2026 8:00 PM

ಡಾಂಬರ್ ರಸ್ತೆಯ ಮೆಲೆ ಕಾಮದಹನ ಮಾಡಬೇಡಿ: ಸಾಗರ ಲೋಕೋಪಯೋಗಿ ಇಲಾಖೆ AE ಪರಶುರಾಮ ಮನವಿ

02/03/2026 7:53 PM

BREAKING : ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಪತ್ನಿ ಸಾವು : ಇರಾನ್ ಸರ್ಕಾರಿ ಮಾಧ್ಯಮ

02/03/2026 7:16 PM
State News
KARNATAKA

BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ

By kannadanewsnow0902/03/2026 8:13 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ನೇಮಕ ಮಾಡಲಾಗಿದ್ದಂತ 12 ನಗರಾಭಿವೃದ್ಧಿ ಪ್ರಾಧಇಕಾರದ ಅಧ್ಯಕ್ಷರನ್ನು ಮುಂದಿನ ಆದೇಶದವರೆಗೆ ಹಾಲಿ ಸ್ಥಳದಲ್ಲೇ ಮುಂದುವರೆಸಿ ಮಹತ್ವದ…

ಪತ್ರಕರ್ತರ ವೃತ್ತಿಯೇ ಸವಾಲಿನದ್ದು, ಧೈರ್ಯ, ನಿಷ್ಠೆಯಿಂದ ಕೆಲಸ ಮಾಡಿ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

02/03/2026 8:00 PM

ಡಾಂಬರ್ ರಸ್ತೆಯ ಮೆಲೆ ಕಾಮದಹನ ಮಾಡಬೇಡಿ: ಸಾಗರ ಲೋಕೋಪಯೋಗಿ ಇಲಾಖೆ AE ಪರಶುರಾಮ ಮನವಿ

02/03/2026 7:53 PM

HDK ಕುಮ್ಮಕ್ಕಿನಿಂದಲೇ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು: ಮದ್ದೂರು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ

02/03/2026 7:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.