ನವದೆಹಲಿ: ಇಂದು ಮನ್ ಕಿ ಬಾತ್(Mann Ki Baat) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ʻಈ ಬಾರಿ ಭಾರತವು 2023 ರ ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದೆ. ಇದು ಭಾರತಕ್ಕೆ ದೊಡ್ಡ ಅವಕಾಶವಾಗಿದೆʼ ಎಂದು ಹೇಳಿದರು.
ಇಂದು ಮನ್ ಕಿ ಬಾತ್ನ 95 ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ʻನಾವು ನಿಧಾನವಾಗಿ ಶತಮಾನದತ್ತ ಸಾಗುತ್ತಿದ್ದೇವೆ. ಕೆಲವು ದಿನಗಳ ಹಿಂದೆ ಜಿ-20 ಲೋಗೋ ಮತ್ತು ಭಾರತದ ಅಧ್ಯಕ್ಷೀಯ ವೆಬ್ಸೈಟ್ ಅನ್ನು ಬಿಡುಗಡೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಈ ಲೋಗೋವನ್ನು ಸಾರ್ವಜನಿಕ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಜಿ20 ಅಧ್ಯಕ್ಷ ಸ್ಥಾನ ನಮಗೆ ದೊಡ್ಡ ಅವಕಾಶವಾಗಿ ಬಂದಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ನಾವು ಜಾಗತಿಕ ಒಳಿತಿಗಾಗಿ, ಲೋಕಕಲ್ಯಾಣದತ್ತ ಗಮನಹರಿಸಬೇಕು ಎಂದರು.
BIG NEWS : ʻಕಳೆದ ವರ್ಷದಿಂದ ಭಾರತೀಯ ಸಂಗೀತ ಉಪಕರಣಗಳ ರಫ್ತು 3.5 ಪಟ್ಟು ಹೆಚ್ಚಾಗಿದೆʼ: ಪ್ರಧಾನಿ ಮೋದಿ
‘ಮಂಗಳೂರು ನೈತಿಕ ಪೊಲೀಸ್ ಗಿರಿ’ ಪ್ರಕರಣ: ಯುವಕನನ್ನು ಥಳಿಸಿದ ಮೂವರ ಬಂಧನ
BIGG NEWS: ಗಣರಾಜ್ಯೋತ್ಸಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಗೆ ಆಹ್ವಾನ : MEA ಮಾಹಿತಿ