ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಇದೀಗ ಜ್ಞಾನಯೋಗಾಶ್ರಮ ತಲುಪಿದೆ.
ಕೆಲಹೊತ್ತಿನಲ್ಲೇ ಶ್ರೀಗಳ ಅಂತಿಮ ವಿಧಿ ವಿಧಾನ ಆರಂಭವಾಗಲಿದ್ದು. ಇಂದೇ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಸೇರಿದಂತೆ ರಾಜಕೀಯ ಗಣ್ಯರು ಸ್ಥಳದಲ್ಲಿ ನೆರೆದಿದ್ದಾರೆ.
ಮರಣದ ಬಗ್ಗೆ 8 ವರ್ಷದ ಹಿಂದೆ ಭವಿಷ್ಯ ನುಡಿದಿದ್ದ ಶ್ರೀ
ತಮ್ಮ ಮರಣದ ಬಗ್ಗೆ 2014ರಲ್ಲೇ ‘ಸಿದ್ದೇಶ್ವರ ಶ್ರೀ’ಗಳು ಭವಿಷ್ಯ ನುಡಿದಿದ್ದರು ಎಂಬುದಾಗಿ ತಿಳಿದು ಬಂದಿದೆ. ಎಂಟು ವರ್ಷದ ಹಿಂದೆಯೇ ಶ್ರೀಗಳು ತಮ್ಮ ಮರಣ ಯಾವ ರೀತಿ ಇರುತ್ತೆ ಎಂದು ಹೇಳಿದ್ದರಂತೆ.
ವೈಕುಂಠ ಏಕಾದಶಿಯ ಪುಣ್ಯದಿನದಂದು (ಜ.2) ರಂದು ಶ್ರೀಗಳು ಲಿಂಗೈಕ್ಯರಾಗಿದ್ದು, ಇದು ದೇಹತ್ಯಾಗ ಎಂದು ಹೇಳಲಾಗಿದೆ. .ತಮ್ಮ ಮರಣದ ಬಗ್ಗೆ ತಾವೇ ಭವಿಷ್ಯ ನುಡಿದ್ದಿದ್ದ ಅವರು ಈ ಪುಣ್ಯದಿನದಂದು ತಮ್ಮ ದೇಹ ತ್ಯಾಗ ಮಾಡಿದ್ದಾರೆ ಎಂದು ಹಿರಿಯರು ಹೇಳಿದ್ದಾರೆ ಎನ್ನಲಾಗಿದೆ. ಮರಣದ ಬಗ್ಗೆ ತಿಳಿಸಿದ್ದ ಶ್ರೀಗಳು ನನ್ನನ್ನು ಹೂಳಬಾರದು, , ಸುಡಬೇಕು, ನನ್ನ ಕುರುಹುಗಳು ಇರಬಾರದು ಹಾಗೂ ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು ಎಂದು ಭಕ್ತರಿಗೆ ಸೂಚನೆಗಳನ್ನು ನೀಡಿದ್ದರಂತೆ.
JOB ALERT : ಉದ್ಯೋಗಾಂಕ್ಷಿಗಳಿಗೆ ಬಂಪರ್ ಸುದ್ದಿ : ಬೆಂಗಳೂರಿನಲ್ಲಿ ಕೆಲಸ, ತಿಂಗಳಿಗೆ 60,000 ಸಂಬಳ
BIGG NEWS : ತಮ್ಮ ಮರಣದ ಬಗ್ಗೆ 8 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ‘ಸಿದ್ದೇಶ್ವರ ಶ್ರೀ’ |Siddeshwara Swamiji