Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ಶಾಲಾಪೂರ್ವ ಶಿಕ್ಷಣ ಕಿಟ್ ವಿತರಣೆಗೆ ಸಂಪುಟ ಅಸ್ತು

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ? ಶಾಕಿಂಗ್ ವರದಿ ಇಲ್ಲಿದೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆ ಪತ್ರದಲ್ಲಿ ದಿನಾಂಕವೂ ಇಲ್ಲ, ಅದು ಖಾತ್ರಿಯೇನಲ್ಲ: ಸಿಎಂ ಜಗ್ಗಿದ್ದು, ಬಗ್ಗಿದ್ಯಾಕೆ?: ಛಲವಾದಿ ನಾರಾಯಣಸ್ವಾಮಿ
KARNATAKA

ಆ ಪತ್ರದಲ್ಲಿ ದಿನಾಂಕವೂ ಇಲ್ಲ, ಅದು ಖಾತ್ರಿಯೇನಲ್ಲ: ಸಿಎಂ ಜಗ್ಗಿದ್ದು, ಬಗ್ಗಿದ್ಯಾಕೆ?: ಛಲವಾದಿ ನಾರಾಯಣಸ್ವಾಮಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸಿದ್ದರಾಮಯ್ಯನವರು ಈಗ ಸಿಕ್ಕಿಬಿದ್ದಿದ್ದಾರೆ. ಜಗ್ಗೋಲ್ಲ; ಬಗ್ಗೋಲ್ಲ; ಏನೇ ಬಂದ್ರೂ ಎದುರಿಸ್ತೀನಿ ಎಂದವರು ನಿನ್ನೆ ಕತ್ತಲಾದ ಮೇಲೆ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ? ರಾತ್ರೋರಾತ್ರಿ ಜಗ್ಗಿದ್ದು, ಬಗ್ಗಿದ್ದು ಯಾಕೆ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದರಿಂದ ಅವರ ಕಪಟತನ ಎಂಥದ್ದೆಂದು ಅರ್ಥವಾಗುತ್ತದೆ. ನಿನ್ನೆ 14 ಸೈಟ್ ಸರೆಂಡರ್ ಮಾಡಿದ್ದಾಗಿ ಲೆಟರ್ ಕೊಟ್ಟಿದ್ದಾರೆ. ಆ ಪತ್ರದಲ್ಲಿ ದಿನಾಂಕವೂ ಇಲ್ಲ; ಆದ್ದರಿಂದ ಅದು ಖಾತ್ರಿಯೇನಲ್ಲ ಎಂದು ತಿಳಿಸಿದರು.

ಹಳ್ಳಿಕಡೆ ‘ನೂರು ಬಾರಿ ಕದ್ದೋನು ಒಂದು ಸಾರಿಯಾದ್ರೂ ಸಿಗಲೇಬೇಕು’ ಎಂಬ ಗಾದೆ ಇದೆ. ಹಾಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಚಾ ಅಲ್ಲ. ನೂರಾರು ಬಾರಿ ಕದ್ದವರು ಒಂದು ಸಾರಿ ಸಿಕ್ಕಿ ಹಾಕಿಕೊಳ್ತಾರಲ್ವ? ಒಂದು ಸಾರಿ ಸಿಕ್ಕಿದರೂ ನೂರು ಬಾರಿ ಮಾಡಿದ ಹಾಗೇ ಎಂದು ವಿಶ್ಲೇಷಿಸಿದರು.

ಇವರು ಜಗ್ಗಿದ ಮೇಲೆ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ನಿಜವಾಗಿಯೂ ಗೌರವ ಸಿಕ್ಕಿದೆ. ಯಾರೂ ಕೂಡ ಈ ರೀತಿ ಉದ್ಧಟತನ ಪ್ರದರ್ಶನ ಮಾಡಬಾರದು ಎಂದು ನುಡಿದರು. ಕಳೆದ ಬಾರಿ ಅವರ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕಳವಾಗಿದ್ದ ಹುಬ್ಲೋಟ್ ವಾಚ್ ವಿಚಾರ ಬಂದಿತ್ತು. ಅದೊಂದು ಹಗರಣವಾಗಿತ್ತು. ಅದು ದುಡ್ಡು ಕೊಟ್ಟು ಕೊಂಡದ್ದೆಂದು ಮೊದಲು ಹೇಳಿದ್ದರು. ಸ್ವಲ್ಪ ದಿನದ ಬಳಿಕ ಸ್ನೇಹಿತರಿಂದ ಉಡುಗೊರೆ ಎಂದಿದ್ದರು. ನಂತರ ಕಳವು ಮಾಲೆಂದು ಗೊತ್ತಾಗಿತ್ತು. ಇದರಿಂದ ಕಷ್ಟ ಅನುಭವಿಸಬೇಕಾಗಬಹುದೆಂದು ಅದನ್ನು ಸರೆಂಡರ್ ಮಾಡಿದ್ದರು ಎಂದು ವಿವರಿಸಿದರು.

ಕದ್ದ ಮಾಲನ್ನು ವಿಧಾನಸೌಧದಲ್ಲಿ ಸರೆಂಡರ್ ಮಾಡಿದ್ದು ಸರಿಯೇ? ಪೊಲೀಸರಿಗೆ ಕೊಡಬೇಕಿತ್ತಲ್ಲವೇ? ಎಂದು ಕೇಳಿದರು. ಎಸ್‍ಇಪಿ, ಎಸ್‍ಟಿಪಿ ಹಣ ದುರುಪಯೋಗ ಮಾಡಿದರು. ಪ್ರತಿಭಟನೆ ನಡೆದು ಮುಜುಗರ ಅನುಭವಿಸಬೇಕಾದ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ದಿನದಂದು ನಾನೊಂದು ತಪ್ಪು ಮಾಡಿದೆ. ಅನ್ಯ ಉದ್ದೇಶಕ್ಕೆ ಪರಿಶಿಷ್ಟ ಸಮುದಾಯದ ಹಣ ಬಳಸಬಾರದಿತ್ತು ಎಂದಿದ್ದರು ಎಂದು ಗಮನ ಸೆಳೆದರು. ಅಲ್ಲಿಗೆ ಅವೆರಡರಿಂದ ತಪ್ಪಿಸಿಕೊಂಡರು ಎಂದರು.

ವಾಲ್ಮೀಕಿ ನಿಗಮದ್ದು 187 ಕೋಟಿಯ ಹಗರಣವಲ್ಲ; 87 ಕೋಟಿಯ ಹಗರಣ ಎಂದು ಸದನದಲ್ಲೇ ಒಪ್ಪಿಕೊಂಡರು. ಈಗ ಮುಡಾದ್ದು ತಮ್ಮ ನಿವೇಶನಗಳಿಗೆ 62 ಕೋಟಿ ಬರಬೇಕು; ಕೊಡ್ತೀರಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು. ಪತ್ರಕರ್ತರು ಕೊಡ್ತಾರಾ? ಎಂದು ಕೇಳಿದರು. ಇವತ್ತಿನ ಅವರ ಪರಿಸ್ಥಿತಿ ನೋಡಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ವಕ್ತಾರ ಮಹೇಶ್ ಎಂ.ಜಿ ಹಾಜರಿದ್ದರು.

BIG NEWS: ಈ ಬಾರಿ ‘ಹಜ್ ಯಾತ್ರೆ’ಗೆ ಬರೋಬ್ಬರಿ ‘11,000 ಆಕಾಂಕ್ಷಿ’ಗಳಿಂದ ಅರ್ಜಿ ಸಲ್ಲಿಕೆ | Haj Yatra

ಲಂಚ ಪಡೆಯುತ್ತಿದ್ದ ವೀಡಿಯೋ ವೈರಲ್ ಹಿನ್ನಲೆ: ಹಿರಿಯೂರು ತಾಲ್ಲೂಕಿನ ಕೆ.ಆರ್ ಹಳ್ಳಿ ‘VA ದಾಸೇಗೌಡ’ ಸಸ್ಪೆಂಡ್

BIG BREAKING: ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ವಾಪಾಸ್ ನೀಡಿದ್ದ 14 ಮುಡಾ ನಿವೇಶನಗಳ ಖಾತೆ ರದ್ದು

Share. Facebook Twitter LinkedIn WhatsApp Email

Related Posts

ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ಶಾಲಾಪೂರ್ವ ಶಿಕ್ಷಣ ಕಿಟ್ ವಿತರಣೆಗೆ ಸಂಪುಟ ಅಸ್ತು

1 Min Read

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

2 Mins Read

ಸಾಗರದ ಅಡ್ಡೇರಿಯಲ್ಲಿ ಬಡ ರೈತರ ಜಮೀನಿಗೆ ನುಗ್ಗಿ ಫಸಲು ಕಿತ್ತಿರುವುದು ಅಮಾನವೀಯ: ಹರತಾಳು ಹಾಲಪ್ಪ ಆಕ್ರೋಶ

2 Mins Read
Recent News

ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ಶಾಲಾಪೂರ್ವ ಶಿಕ್ಷಣ ಕಿಟ್ ವಿತರಣೆಗೆ ಸಂಪುಟ ಅಸ್ತು

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

ಸತತ ಒಂದು ವರ್ಷ ಮದ್ಯಪಾನ ಮಾಡಿದರೆ ನಿಮ್ಮ ಲಿವರ್ ಏನಾಗುತ್ತೆ ಗೊತ್ತಾ? ಶಾಕಿಂಗ್ ವರದಿ ಇಲ್ಲಿದೆ!

ಪೆಟ್ರೋಲ್, ಡೀಸೆಲ್ ಖರೀದಿಗೆ ಯಾವುದೇ ಮಿತಿ ಇಲ್ಲ!: ನಿಯಮ ಉಲ್ಲಂಘಿಸಿದ ಬಂಕ್‌ಗಳಿಗೆ ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ!

State News
KARNATAKA

ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ಶಾಲಾಪೂರ್ವ ಶಿಕ್ಷಣ ಕಿಟ್ ವಿತರಣೆಗೆ ಸಂಪುಟ ಅಸ್ತು

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿರುವ ಒಟ್ಟು 69,922 ಅಂಗನವಾಡಿ ಕೇಂದ್ರಗಳಿಗೆ ಶಾಲಾಪೂರ್ವ ಶಿಕ್ಷಣ ಕಿಟ್ (Pre-school Education Kit) ಒದಗಿಸಲು ಗುರುವಾರ ನಡೆದ…

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಪಹಣಿ ತಿದ್ದುಪಡಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Land registry amendment

ಸಾಗರದ ಅಡ್ಡೇರಿಯಲ್ಲಿ ಬಡ ರೈತರ ಜಮೀನಿಗೆ ನುಗ್ಗಿ ಫಸಲು ಕಿತ್ತಿರುವುದು ಅಮಾನವೀಯ: ಹರತಾಳು ಹಾಲಪ್ಪ ಆಕ್ರೋಶ

Rain In Bengaluru: ಬೆಂಗಳೂರಿನ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.