ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್ ಹಳ್ಳಿಯ ಗ್ರಾಮ ಆಡಳಿತಾಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದಂತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ದೃಶ್ಯಾವಳಿ ಆಧರಿಸಿ ಹಿರಿಯೂರು ತಾಲ್ಲೂಕಿನ ಕೆ ಆರ್ ಹಳ್ಳಿ ವಿಎ ದಾಸೇಗೌಡ ಅವರನ್ನು ಅಮಾನತುಗೊಳಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ ಆರ್ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ದಾಸೇಗೌಡ ಅವರು ವ್ಯಕ್ತಿಯೊಬ್ಬರು ತಮ್ಮ ಜಮೀನು ಕೆಲಸದ ವಿಚಾರವಾಗಿ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೆಲಸ ಮಾಡಿ ಕೊಡಲು ದುಡ್ಡು ಕೇಳಿದ್ದರು. ಅದರಂತೆ ವ್ಯಕ್ತಿಯೊಬ್ಬರು ಗ್ರಾಮ ಆಡಳಿತಾಧಿಕಾರಿ ದಾಸೇಗೌಡ ಅವರಿಗೆ ಲಂಚದ ಹಣವನ್ನು ನೀಡಿದ್ದಲ್ಲದೇ, ಅದನ್ನು ಪಡೆಯುತ್ತಿದ್ದ ವೇಳೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು.
ಲಂಚ ಪಡೆಯುತ್ತಿದ್ದಂತ ವೇಳೆಯಲ್ಲಿ ಗ್ರಾಮ ಆಡಳಿತಾಧಿಕಾರಿ ದಾಸೇಗೌಡ ಅವರು ನನಗೇನು ಉಳಿಯೋದಿಲ್ಲ. ಇದರಲ್ಲಿ ಆರ್ ಐಗೆ ಕೊಡಬೇಕು. ಅವರಿಗೆ, ಇವರಿಗೆ ಕೊಡಬೇಕು ಅಂತ ಹೇಳಿದ್ದಲ್ಲದೇ, ಲಂಚ ಪಡೆದು ನಾಳೆ ಬನ್ನಿ. ನಿಮ್ಮ ಕೆಲಸ ರೆಡಿ ಮಾಡಿರುವೆ ಅಂತ ತಿಳಿಸಿದ್ದರು. ಈ ಎಲ್ಲಾ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಲಂಚ ಪಡೆದಿದ್ದ ಹಿರಿಯೂರು ತಾಲ್ಲೂಕಿನ ಕೆ ಆರ್ ಹಳ್ಳಿಯ ಗ್ರಾಮ ಆಡಳಿತಾಧಿಕಾರಿ ದಾಸೇಗೌಡ ವೈರಲ್ ಆಗುತ್ತಿದ್ದಂತೇ, ಜಿತ್ರದುರ್ಗ ಜಿಲ್ಲಾಧಿಕಾರಿ ಅವರು ದಾಸೇಗೌಡ ಜಿ.ಎಂ ಗ್ರಾಮ ಆಡಳಿತ ಅಧಿಕಾರಿ, ಕೆ ಆರ್ ಹಳ್ಳಿ ವೃತ್ತ, ಜೆಜಿ ಹಳ್ಳಿ ಹೋಬಳಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
BREAKING: ಚೆಕ್ ಬೌನ್ಸ್ ಕೇಸ್: ಸ್ನೇಹಮಯಿ ಕೃಷ್ಣ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
BIG BREAKING: ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ವಾಪಾಸ್ ನೀಡಿದ್ದ 14 ಮುಡಾ ನಿವೇಶನಗಳ ಖಾತೆ ರದ್ದು