Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

19/04/2026 9:15 PM

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM

ಜಾಗತಿಕ ಆಹಾರ ಬಿಕ್ಕಟ್ಟು: ಸಂಕಷ್ಟದಲ್ಲಿರುವ ಆಫ್ರಿಕಾ ರಾಷ್ಟ್ರಗಳ ನೆರವಿಗೆ ಧಾವಿಸಿದ ಭಾರತ !

19/04/2026 9:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ಅರ್ಹ ವಿದ್ಯುತ್ ಟ್ರಕ್‌ಗಳಿಗೆ ಕೇಂದ್ರದಿಂದ ₹9.6 ಲಕ್ಷ ಪ್ರೋತ್ಸಾಹಧನ: HD ಕುಮಾರಸ್ವಾಮಿ ಘೋಷಣೆ
KARNATAKA

GOOD NEWS: ಅರ್ಹ ವಿದ್ಯುತ್ ಟ್ರಕ್‌ಗಳಿಗೆ ಕೇಂದ್ರದಿಂದ ₹9.6 ಲಕ್ಷ ಪ್ರೋತ್ಸಾಹಧನ: HD ಕುಮಾರಸ್ವಾಮಿ ಘೋಷಣೆ

By kannadanewsnow0911/07/2025 4:53 PM

ನವದೆಹಲಿ: ಸರಕು ಸಾಗಾಣೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ನರೇಂದ್ರ ಮೋದಿ ಅವರ ಸರ್ಕಾರ, ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ಗಳಿಗೆ (ಇ-ಟ್ರಕ್‌ಗಳು) ಆರ್ಥಿಕ ಉತ್ತೇಜನ ನೀಡುವ ಯೋಜನೆಯನ್ನು ಆರಂಭಿಸಿದೆ.

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯ ತಮ್ಮ ಸಚಿವಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಈ ಯೋಜನೆಯನ್ನು ಪ್ರಕಟಿಸಿದ್ದು, ಪಿಎಂ ಇ ಡ್ರೈವ್ (PM E-DRIVE) ಯೋಜನೆಯ ಅಡಿಯಲ್ಲಿ ಟ್ರಕ್ ಗಳಿಗೆ ಪ್ರೋತ್ಸಾಹ ಧನ ಕೊಡಲಾಗುವುದು ಎಂದರು.

ದೇಶದಲ್ಲಿ ಸಾಮೂಹಿಕ ಸಾರಿಗೆ ಹಾಗೂ ಸರಕು ಸಾಗಣೆ ವ್ಯವಸ್ಥೆಯಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಪರಿಪೂರ್ಣವಾಗಿ ತಗ್ಗಿಸುವ ನಿಟ್ಟಿನಲ್ಲಿ ಪ್ರಧಾನಿ ಅವರ ಮಹತ್ವಾಕಾಂಕ್ಷೀಯ ಪಿಎಂ ಇ ಡ್ರೈವ್ ಯೋಜನೆಯನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ. ಈ ಮೂಲಕ ಆರ್ಥಿಕ ಪ್ರೋತ್ಸಾಹ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸ್ವಚ್ಛ, ದಕ್ಷ ಮತ್ತು ಸುಸ್ಥಿರ ಸರಕು ಸಾಗಣೆಗೆ ಪೂರಕವಾಗಿ ಪರಿವರ್ತನಾತ್ಮಕ ಹೆಜ್ಜೆಗಳನ್ನು ಇಡಲಾಗಿದೆ. ಕೇಂದ್ರ ಸರ್ಕಾರವು ವಿದ್ಯುತ್ ಟ್ರಕ್‌ಗಳಿಗೆ ನೇರ ಆರ್ಥಿಕ ಪ್ರೋತ್ಸಾಹ ನೀಡುತ್ತಿರುವುದು ಇದೇ ಮೊದಲು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಯೋಜನೆಯ ಮಹತ್ವವನ್ನು ವಿವರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; “ಡೀಸೆಲ್ ಟ್ರಕ್‌ಗಳು ಒಟ್ಟು ವಾಹನ ಜನಸಂಖ್ಯೆಯಲ್ಲಿ ಕೇವಲ 3% ರಷ್ಟಿದ್ದರೂ, ಸಾರಿಗೆ ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ 42% ರಷ್ಟು ಕೊಡುಗೆ ನೀಡುತ್ತವೆ ಮತ್ತು ವಾಯುಮಾಲಿನ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ವಿದ್ಯುತ್ ಟ್ರಕ್‌ಗಳಿಗೆ ಮೀಸಲಾದ ಮೊತ್ತ ಮೊದಲ ಆರ್ಥಿಕ ಉತ್ತೇಜನ ಕಾರ್ಯಕ್ರಮ ಇದಾಗಿದೆ. ಈ ಮೂಲಕ ರಾಷ್ಟ್ರವನ್ನು ಸುಸ್ಥಿರ ಸರಕು ಸಾಗಣೆ, ಸ್ವಚ್ಛ ಭವಿಷ್ಯ ಮತ್ತು 2047ರ ವೇಳೆಗೆ ವಿಕಸಿತ ಭಾರತ ಸಾಕಾರದತ್ತ ಕೊಂಡೊಯ್ಯುತ್ತದೆ, 2070ರ ವೇಳೆಗೆ ಇಂಗಾಲದ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಮುಟ್ಟಲಿದ್ದೇವೆ. ಇದು ಪ್ರಧಾನಿಗಳ ಸಂಕಲ್ಪವಾಗಿದೆ ಎಂದು ಕೇಂದ್ರ ಸಚಿವರು ನುಡಿದರು.

ಈ ಯೋಜನೆಯಡಿಯಲ್ಲಿ ಕೇಂದ್ರ ಮೋಟಾರು ವಾಹನ ನಿಯಮಗಳ (CMVR) ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ.

•N2 ಮತ್ತು N3 ವರ್ಗದ ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಬೇಡಿಕೆ ಪ್ರೋತ್ಸಾಹವನ್ನು ವಿಸ್ತರಿಸಲಾಗುತ್ತದೆ. N2 ವರ್ಗವು 3.5 ಟನ್‌ಗಳಿಗಿಂತ ಹೆಚ್ಚು ಮತ್ತು 12 ಟನ್‌ಗಳವರೆಗೆ ಒಟ್ಟು ವಾಹನ ತೂಕ (GVW) ಹೊಂದಿರುವ ಟ್ರಕ್‌ಗಳನ್ನು ಒಳಗೊಂಡಿದೆ.

• N3 ವರ್ಗವು 12 ಟನ್‌ಗಳಿಗಿಂತ ಹೆಚ್ಚು ಮತ್ತು 55 ಟನ್‌ಗಳವರೆಗೆ GVW ಹೊಂದಿರುವ ಟ್ರಕ್‌ಗಳನ್ನು ಒಳಗೊಂಡಿದೆ. ಆರ್ಟಿಕ್ಯುಲೇಟೆಡ್ ವಾಹನಗಳ ಸಂದರ್ಭದಲ್ಲಿ ಆರ್ಥಿಕ ಉತ್ತೇಜನ ಯೋಜನೆ N3 ವರ್ಗದ ಪುಲ್ಲರ್ ಟ್ರಾಕ್ಟರ್‌ಗೆ ಮಾತ್ರ ಅನ್ವಯಿಸುತ್ತವೆ. ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆಯು ಸಮಗ್ರ ತಯಾರಿಕಾ ಬೆಂಬಲಿತ ವಾರಂಟಿಗಳನ್ನು ಕಡ್ಡಾಯಗೊಳಿಸುತ್ತದೆ.

• ಬ್ಯಾಟರಿಯನ್ನು ಐದು ವರ್ಷಗಳು ಅಥವಾ 5 ಲಕ್ಷ ಕಿಲೋಮೀಟರ್‌ಗಳವರೆಗೆ, ಇದರಲ್ಲಿ ಯಾವುದು ಮೊದಲೋ ಅದು ಖಾತರಿಯಡಿಯಲ್ಲಿ ಒಳಗೊಳ್ಳಬೇಕು.

• ವಾಹನ ಮತ್ತು ಮೋಟಾರ್ ಐದು ವರ್ಷಗಳು ಅಥವಾ 2.5 ಲಕ್ಷ ಕಿಲೋಮೀಟರ್‌ಗಳ ಖಾತರಿಯನ್ನು ಹೊಂದಿರಬೇಕು, ಇದರಲ್ಲಿ ಕೂಡ ಯಾವುದು ಮೊದಲೋ ಅದನ್ನು ಪರಿಗಣಿಸಲಾಗುತ್ತದೆ.

ಎಲೆಕ್ಟ್ರಿಕ್ ಟ್ರಕ್ ದರವು ಕೈಗೆಟುಕುವ ಹಾಗೆ ಇರಬೇಕು ಎನ್ನುವ ಉದ್ದೇಶದಿಂದ ಈ ಉತ್ತೇಜನ ಯೋಜನೆಯ ಪ್ರೋತ್ಸಾಹಕ ಮೊತ್ತವು ಎಲೆಕ್ಟ್ರಿಕ್ ಟ್ರಕ್‌ನ GVW ಅನ್ನು ಅವಲಂಬಿಸಿರುತ್ತದೆ. ಗರಿಷ್ಠ ಪ್ರೋತ್ಸಾಹಕ ಮೊತ್ತವನ್ನು ಪ್ರತಿ ವಾಹನಕ್ಕೆ ₹9.6 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈ ಪ್ರೋತ್ಸಾಹಕಗಳನ್ನು ಖರೀದಿ ಬೆಲೆಯಲ್ಲಿ ಮುಂಗಡ ಕಡಿತವಾಗಿ ನೀಡಲಾಗುತ್ತದೆ ಮತ್ತು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ PM E-DRIVE ಪೋರ್ಟಲ್ ಮೂಲಕ OEM ಗಳಿಗೆ ಮರುಪಾವತಿ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ದೇಶಾದ್ಯಂತ ಸುಮಾರು 5,600 ಇ-ಟ್ರಕ್‌ಗಳ ನಿಯೋಜನೆಯನ್ನು ಈ ಯೋಜನೆ ಬೆಂಬಲಿಸುವ ನಿರೀಕ್ಷೆಯಿದೆ. ದೆಹಲಿಯಲ್ಲಿ ನೋಂದಾಯಿಸಲಾದ 1,100 ಇ-ಟ್ರಕ್‌ಗಳಿಗೆ ಮೀಸಲಾದ ನಿಬಂಧನೆಯನ್ನು ರೂಪಿಸಲಾಗಿದೆ. ಇದರ ಅಂದಾಜು ವೆಚ್ಚ ₹100 ಕೋಟಿ. ರಾಜಧಾನಿಯ ಗಂಭೀರ ವಾಯು ಗುಣಮಟ್ಟದ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಇದು ಹೊಂದಿದೆ ಎಂದರು ಕುಮಾರಸ್ವಾಮಿ ಅವರು.

ಸಿಮೆಂಟ್ ಉದ್ಯಮ, ಬಂದರುಗಳು, ಉಕ್ಕು ಮತ್ತು ಇತರ ಸಾಗಾಣಿಕೆ ವಲಯವು ಈ ಯೋಜನೆಯ ಪ್ರಯೋಜನ ಪಡೆಯಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ವೋಲ್ವೋ, ಐಷರ್, ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್‌ನಂತಹ ಹಲವಾರು ಪ್ರಮುಖ ಕಂಪನಿಗಳು ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿವೆ. ಆತ್ಮನಿರ್ಭರ ಭಾರತ್ ದೃಷ್ಟಿಕೋನದ ಅಡಿಯಲ್ಲಿ ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಎಂದು ಸಚಿವರು ಹೇಳಿದರು.

150 ಇ-ಟ್ರಕ್ ಗಳನ್ನು ನಿಯೋಜಿಸಲಿದೆ ಉಕ್ಕು ಪ್ರಾಧಿಕಾರ:

ವಿದ್ಯುತ್ ಚಾಲಿತ ಟ್ರಕ್ ಗಳ ಬಳಕೆಯಲ್ಲಿ ದೊಡ್ಡ ಹೆಜ್ಜೆ ಇರಿಸಿರುವ ಉಕ್ಕು ಸಚಿವಾಲಯದ ಅಧೀನ ಸಂಸ್ಥೆಯಾಗಿರುವ ಭಾರತೀಯ ಉಕ್ಕು ಪ್ರಾಧಿಕಾರ (SAIL) ಮುಂದಿನ ಎರಡು ವರ್ಷಗಳಲ್ಲಿ 150 ಇ-ಟ್ರಕ್‌ಗಳನ್ನು ತನ್ನ ಕಾರ್ಯಾಚರಣೆಯ ವಿವಿಧ ವ್ಯೂಹಾತ್ಮಕ ಸ್ಥಳಗಳಲ್ಲಿ ನಿರ್ಧರಿಸಿದೆ. ಅಲ್ಲದೆ, ವಿವಿಧ ಉದ್ದೇಶಗಳಿಗೆ ತಾನು ಬಳಕೆ ಮಾಡುತ್ತಿರುವ ಒಟ್ಟಾರೆ ಟ್ರಕ್ ಗಳ ಪೈಕಿ ಕನಿಷ್ಠ 15% ವಿದ್ಯುತ್ ಚಾಲಿತ ಟ್ರಕ್ ಗಳನ್ನೇ ಬಳಕೆ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.

ಇದರ ಜತೆಯಲ್ಲಿ, ಪ್ರೋತ್ಸಾಹ ಧನಕ್ಕೆ ಅರ್ಹತೆ ಪಡೆಯಲು ಹಾಗೂ ತಾನು ಬಳಕೆ ಮಾಡುತ್ತಿರುವ ಅವಧಿ ಮೀರಿದ ಹಳೆಯ ಮಾಲಿನ್ಯಕಾರಕ ಟ್ರಕ್‌ಗಳನ್ನು ವಿಲೇವಾರಿ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಉಕ್ಕು ಸಚಿವರೂ ಆಗಿರುವ ಕುಮಾರಸ್ವಾಮಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಹನೀಫ್ ಖುರೇಷಿ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.

Share. Facebook Twitter LinkedIn WhatsApp Email

Related Posts

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

19/04/2026 9:15 PM1 Min Read

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM2 Mins Read

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

19/04/2026 8:58 PM2 Mins Read
Recent News

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

19/04/2026 9:15 PM

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM

ಜಾಗತಿಕ ಆಹಾರ ಬಿಕ್ಕಟ್ಟು: ಸಂಕಷ್ಟದಲ್ಲಿರುವ ಆಫ್ರಿಕಾ ರಾಷ್ಟ್ರಗಳ ನೆರವಿಗೆ ಧಾವಿಸಿದ ಭಾರತ !

19/04/2026 9:03 PM

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

19/04/2026 8:58 PM
State News
KARNATAKA

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

By kannadanewsnow0919/04/2026 9:15 PM KARNATAKA 1 Min Read

ಬೆಂಗಳೂರು: ಮೈಸೂರು ಜಿಲ್ಲೆಯ ಕೆ.ಆರ್. ನಗರದ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಆರು ಮಂದಿ…

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

19/04/2026 8:58 PM

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

19/04/2026 8:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.