ಬೆಂಗಳೂರು : ರಾಜ್ಯದಿಂದ ಈ ಬಾರಿಯ ಹಜ್ ಯಾತ್ರೆಗೆ 11 ಸಾವಿರ ಮಂದಿ ಆಕಾಂಕ್ಷಿ ಗಳು ಅರ್ಜಿ ಸಲ್ಲಿಸಿದ್ದು ಇದೇ 4 ರಂದು ಮಧ್ಯಾಹ್ನ ಕೇಂದ್ರ ಹಜ್ ಮಂಡಳಿ ಯಲ್ಲಿ ಈ ಲಾಟರಿ ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯ ಹಜ್ ಸಮಿತಿ ಕಾರ್ಯ ನಿರ್ವಹಣಾ ಧಿಕಾರಿ ಸರ್ಫಾರಾಜ್ ಖಾನ್ ತಿಳಿಸಿದ್ದಾರೆ.
ಈ ಲಾಟರಿ ಪ್ರಕ್ರಿಯೆ ನಡೆದ ತಕ್ಷಣ ಆಯ್ಕೆ ಯಾದವರಿಗೆ ಎಸ್ ಎಂ ಎಸ್ ಸಂದೇಶ ರವಾನೆ ಆಗಲಿದೆ. ಕಳೆದ ಬಾರಿ 9.500 ದಿಂದ 10 ಸಾವಿರ ಮಂದಿಗೆ ಅವಕಾಶ ದೊರೆತಿತ್ತು ಈ ಬಾರಿ ಇನ್ನೂ ಹೆಚ್ಚಿನ ಜನರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಈ ಬಾರಿಯ ಕೋಟಾ ಇನ್ನೂ ನಿಗದಿ ಆಗಿಲ್ಲ. ಅ.4 ರಂದು ಕೋಟಾ ಬಗ್ಗೆಯೂ ಸ್ಪಷ್ಟ ಸಂಖ್ಯೆ ಸಿಗಲಿದೆ. ನಂತರ ಹಜ್ ಸಮಿತಿ ಮುಂದಿನ ಸಿದ್ಧತೆ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
BIG BREAKING: ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ವಾಪಾಸ್ ನೀಡಿದ್ದ 14 ಮುಡಾ ನಿವೇಶನಗಳ ಖಾತೆ ರದ್ದು