ನವದೆಹಲಿ : ಆಗಸ್ಟ್ 24ರಂದು ಮುಂಜಾನೆ ಮಥುರಾ ರೈಲ್ವೆ ನಿಲ್ದಾಣದಲ್ಲಿ ತನ್ನ ಹೆತ್ತವರ ಪಕ್ಕ ಮಲಗಿದ್ದ ಏಳು ತಿಂಗಳ ಮಗುವನ್ನ ಕಳ್ಳನೊಬ್ಬ ಸದ್ದಿಲ್ಲದೇ ಕದ್ದೊಯ್ದಿದ್ದಾನೆ. ಸಧ್ಯ ಈ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ನಂತ್ರ ಈ ಪ್ರಕರಣವನ್ನ ಪೊಲೀಸರು ಬೇಧಿಸಿದ್ದು, ಮಗುವನ್ನ ಪತ್ತೆ ಹಚ್ಚಿದ್ದಾರೆ.
ಅಂದ್ಹಾಗೆ, ಫಿರೋಜಾಬಾದ್ನ ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಮಗು ಪತ್ತೆಯಾಗಿದ್ದು, ಮಕ್ಕಳನ್ನು ಕದಿಯುವ ಮತ್ತು ಮಾರಾಟ ಮಾಡುವ ದಂಧೆಯನ್ನ ಪೊಲೀಸರು ಭೇದಿಸಿದ್ದಾರೆ.
ಬಿಜೆಪಿಯ ವಿನಿತಾ ಅಗರ್ವಾಲ್ ಮತ್ತು ಅವರ ಪತಿ ಮಗುವನ್ನ ಇಬ್ಬರು ವೈದ್ಯರಿಂದ 1.8 ಲಕ್ಷ ರೂ.ಗೆ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ದಂಪತಿಗೆ ಈಗಾಗಲೇ ಒಬ್ಬ ಮಗಳಿದ್ದಾಳೆ.
ಪ್ಲಾಟ್ ಫಾರ್ಮ್ʼನಿಂದ ಮಗುವನ್ನ ಎತ್ತಿಕೊಂಡಾಗ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿ ಸೇರಿದಂತೆ ಒಟ್ಟು ಎಂಟು ಜನರನ್ನ ಬಂಧಿಸಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಅಪಹರಣಕಾರನನ್ನ ದೀಪಕ್ ಎಂದು ಗುರುತಿಸಲಾಗಿದೆ.
ಮಥುರಾ ಪೊಲೀಸರು ಈ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, ಮಗುವನ್ನು ತಾಯಿಗೆ ಹಸ್ತಾಂತರಿಸಿದರು. ಬಂಧಿತ ವೈದ್ಯರಿಂದ ವಶಪಡಿಸಿಕೊಳ್ಳಲಾದ 500 ರೂ.ಗಳ ನೋಟುಗಳ ರಾಶಿಯ ದೃಶ್ಯಗಳನ್ನ ಪೊಲೀಸರು ತೋರಿಸಿದರು.
ವರದಿಗಳ ಪ್ರಕಾರ, ವಿನಿತಾ ಮತ್ತು ಅವರ ಪತಿ ಮುರಾರಿಗೆ 12 ವರ್ಷದ ಮಗಳಿದ್ದಾಳೆ, ಆದರೆ ಮಗನಿಲ್ಲ. ಹಾಗಾಗಿ ಈ ಮಗುವನ್ನ ದತ್ತು ತೆಗೆದುಕೊಂಡರು ಎಂದು ಅವ್ರು ಹೇಳಿಕೊಂಡರು. ಆದ್ರೆ, ಮಗುವನ್ನ ಕಳ್ಳತನ ಮಾಡಲಾಗಿದೆ ಎಂಬ ವಾಸ್ತವಾಂಶವನ್ನ ತಿಳಿದಿರಲಿಲ್ಲ ಎಂದಿದ್ದಾರೆ. ಇನ್ನು ಕದ್ದ ಮಗುವನ್ನ ಖರೀದಿಸಿದ ಆರೋಪದ ಮೇಲೆ, ಪೊಲೀಸರು ಇಡೀ ಕುಟುಂಬವನ್ನ ಕಳೆದ ರಾತ್ರಿ ವಿಚಾರಣೆಗಾಗಿ ಮಥುರಾಗೆ ಕರೆದೊಯ್ದಿದ್ದರು.
ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಮುಷ್ತಾಕ್ ಅವರು ವಿವರವಾದ ಹೇಳಿಕೆಯಲ್ಲಿ, ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಈ ಅಪಹರಣವನ್ನ ನಡೆಸಿದೆ ಎಂದು ಹೇಳಿದರು.
“ದೀಪ್ ಕುಮಾರ್ ಎಂಬ ವ್ಯಕ್ತಿ ಮಗುವನ್ನು ಕರೆದೊಯ್ದಿದ್ದಾನೆ ಎಂದು ನಾವು ಕಂಡುಕೊಂಡಿದ್ದೇವೆ. ಆತ ನೆರೆಯ ಹತ್ರಾಸ್ ಜಿಲ್ಲೆಯಲ್ಲಿ ಆಸ್ಪತ್ರೆಯನ್ನ ನಡೆಸುತ್ತಿರುವ ಇಬ್ಬರು ವೈದ್ಯರನ್ನು ಒಳಗೊಂಡ ಗ್ಯಾಂಗ್ನ ಭಾಗವಾಗಿದ್ದಾನೆ. ಇತರ ಕೆಲವು ಆರೋಗ್ಯ ಕಾರ್ಯಕರ್ತರು ಸಹ ಇದರಲ್ಲಿ ಭಾಗಿಯಾಗಿದ್ದಾರೆ. ನಾವು ಯಾರ ಮನೆಯಲ್ಲಿ ಮಗು ಪತ್ತೆಯಾಗಿದೆಯೋ ಆ ಜನರನ್ನ ವಿಚಾರಿಸಿದೆವು, ಅವರು ನಮಗೆ ಒಬ್ಬಳೇ ಮಗಳಿದ್ದಾಳೆ, ಆದ್ದರಿಂದ ಒಬ್ಬ ಮಗನನ್ನ ಬಯಸಿ ಖರೀದಿಸಿದ್ದೇವೆ ಎಂದು ಹೇಳಿದರು” ಎಂದು ಮುಷ್ತಾಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದ್ಹಾಗೆ, ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನ ವ್ಯಕ್ತಿಯೊಬ್ಬ ಅಪಹರಿಸಿರುವ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ये व्यक्ति रे०स्टेशन मथुरा जं० से अपनी माँ के साथ सो रहे महज 7 माह के बच्चे को उठाकर ले गया।
इस व्यक्ति को पकड़वाने में मदद कीजिये।
आप सिर्फ Retweet कर इसके फ़ोटो/वीडियो को Groups में share कर दीजिये, विशेष कर कासगंज, बदायूँ और बरेली साइड में।
मुझे भरोसा है ये अवश्य पकड़ा जाएगा। pic.twitter.com/fTnuGbSlsi— SACHIN KAUSHIK (@upcopsachin) August 27, 2022