ಬೆಂಗಳೂರು: ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಅಲ್ಲಲ್ಲಿ ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೂ ಐದು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದಂತ ಆರ್ ಸಿಬಿ ವರ್ಸಸ್ ಎಸ್ ಆರ್ ಹೆಚ್ ಪಂದ್ಯಾವಳಿಯನ್ನು ಲಖನೌಗೆ ಸ್ಥಳಾಂತರಿಸಲಾಗಿದೆ.
ಮೇ.23ರಂದು ಬೆಂಗಳೂರಲ್ಲಿ ಆರ್ ಸಿ ಬಿ ವರ್ಸಸ್ ಎಸ್ ಆರ್ ಹೆಚ್ ತಂಡದ ನಡುವೆ ಪಂದ್ಯಗಳನ್ನು ನಿಗದಿ ಪಡಿಸಲಾಗಿತ್ತು. ಆದರೇ ನಗರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಈ ಹಿಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಈ ಹಿನ್ನಲೆಯಲ್ಲಿ ಮೇ.23ರ ಪಂದ್ಯಕ್ಕೂ ಮಳೆಯ ಕಾರಣದಿಂದ ರದ್ದಾಗುವ ನಿರೀಕ್ಷೆಯಲ್ಲಿ ಬೆಂಗಳೂರಿನಿಂದ ಲಖನೌಗೆ ಪಂದ್ಯವನ್ನು ಶಿಫ್ಟ್ ಮಾಡಲಾಗಿದೆ.
ಅಂದಹಾಗೇ ಮೇ.23ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದಂತ ಐಪಿಎಲ್ ಪಂದ್ಯಗಳನ್ನು ಲಖನೌಗೆ ಏಕನಾಥ್ ಸ್ಟೇಡಿಯಂನಲ್ಲಿ ನಡೆಸಲು ನಿಗಧಿ ಪಡಿಸಲಾಗಿದೆ.
ಮೇ.25ರಂದು UPSC ಪರೀಕ್ಷೆ: ಬೆಂಗಳೂರಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ
GOOD NEWS: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ: ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ